ಪ್ರಿಯಾಂಕ್‌ ಖರ್ಗೆ ಸ್ಪೆಷಲ್ ಬೇಬಿಯೂ ಹೌದು; ದುರಹಂಕಾರದ ವ್ಯಕ್ತಿಯೂ ಹೌದು: ಉಮೇಶ ಜಾಧವ ಕಿಡಿ

Date:

  • ‘ಗುರಮಠಕಲ್‌ನಲ್ಲಿ ಸಿಬಿಎಸ್‌ಸಿ ಶಾಲೆ ಮಾಡದೆ ಯಲಹಂಕದಲ್ಲಿ ಮಾಡಿಕೊಂಡಿದ್ದಾರೆ’
  • ‘ನೀವು ಡಾಲರ್ಸ್‌ ಕಾಲೋನಿಯ ಬೆಂಗಳೂರಿನ ಮಂತ್ರಿ, ಬಡವರ ಕಷ್ಟ ಅರಿವಾಗಲ್ಲ’

ತನ್ನನ್ನು ತಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೋಲಿಕೆ ಮಾಡಿಕೊಳ್ಳುವ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ರಾಜಕಾರಣದ ಸ್ಪೆಷಲ್ ಬೇಬಿ ಎಂದು ಸಂಬೋಧಿಸುತ್ತೇನೆ ಎಂದು ಸಂಸದ ಡಾ. ಉಮೇಶ ಜಾಧವ ವ್ಯಂಗ್ಯವಾಡಿದರು.

- Advertisement -

ಕಲಬುರಗಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಖರ್ಗೆ ಕುಟುಂಬದ ವಿರುದ್ಧ ಹರಿಹಾಯ್ದ ಅವರು, “ಗುರಮಠಕಲ್‌ನಲ್ಲಿ ನಿಮ್ಮ ತಂದೆ ಎಂಟು ಬಾರಿ, ಚಿತ್ತಾಪುರದಲ್ಲಿ ನೀವು ಮೂರು ಬಾರಿ ಗೆದ್ದಿದ್ದೀರಿ. ಆದರೆ, ಗುರಮಠಕಲ್‌ನಲ್ಲಿ ಸಿಬಿಎಸ್‌ಸಿ ಶಾಲೆ ಮಾಡದೆ ಯಲಹಂಕದಲ್ಲಿ ಮಾಡಿಕೊಂಡಿದ್ದೀರಿ. ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜ್ ತೆರೆದಿದ್ದೀರಿ. ನೀವು ಡಾಲರ್ಸ್‌ ಕಾಲೋನಿಯ ಬೆಂಗಳೂರಿನ ಮಂತ್ರಿ. ಬಡವರ ಕಷ್ಟ ಅರಿವಾಗಲ್ಲ” ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

“ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರದಲ್ಲಿ ಜನಸ್ಪಂದನೆ ನಡೆಸುವಂತೆ ಸೂಚಿಸಿದ್ದರು. ಅವರ ಮಾತನ್ನು ಕಡೆಗಣಿಸಿ, ಪ್ರಯಾಣಕ್ಕೆ ಅನುಕೂಲ ಆಗುವಂತಹ ಹೈದರಾಬಾದ್‌ಗೆ ಸಮೀಪದ ಚಿಂಚೋಳಿಯಲ್ಲಿ ಜನಸ್ಪಂದನೆ ನಡೆಸಿದ್ದು ಇದೇ ಸ್ಪೇಷಲ್ ಬೇಬಿ. ಶಾಸಕನಾದ ಮೊದಲ ಅವಧಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಮೂರು ಬಾರಿ ಮಂತ್ರಿಗಿರಿ ಪಡೆದು, ಮುಖ್ಯಮಂತ್ರಿ ಸೂಚನೆಯನ್ನೂ ಕಡೆಗಣಿಸಿ ಜಿಲ್ಲಾ ಕೇಂದ್ರವನ್ನು ಬಿಟ್ಟು ಚಿಂಚೋಳಿಯಲ್ಲಿ ಜನಸ್ಪಂದನೆ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಪಡೆದ ಪ್ರಿಯಾಂಕ್ ಅವರು ಎಂ.ಬಿ. ಪಾಟೀಲ ಅವರಿಗೆ ಸಿಕ್ಕಿದ್ದ ಐಟಿ, ಬಿಟಿ ಖಾತೆಯನ್ನೂ ಕಸಿದುಕೊಂಡರು. ಹಿರಿಯ ನಾಯಕರಾದ ಎಂ.ವೈ.ಪಾಟೀಲ ಮತ್ತು ರೇವುನಾಯಕ ಬೆಳಮಗಿ ಅವರನ್ನು ಎಡ–ಬಲಕ್ಕೆ ಕೂರಿಸಿಕೊಳ್ಳುವುದು ಇದೇ ಸ್ಪೇಷಲ್ ಬೇಬಿ ಪ್ರಿಯಾಂಕ್ ” ಎಂದು ಕುಟುಕಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಸವ ಅಥವಾ ಗರ್ಭಪಾತ; ಮಹಿಳೆಯ ಆಯ್ಕೆಯೇ ಅಂತಿಮ

ದುರಹಂಕಾರದ ವ್ಯಕ್ತಿ ಪ್ರಿಯಾಂಕ್‌ ಖರ್ಗೆ

“ಪ್ರಿಯಾಂಕ್ ಖರ್ಗೆ ಅವರಲ್ಲಿ ದುರಹಂಕಾರ ತುಂಬಿ ತುಳುಕುತ್ತಿದೆ. ಜಿಲ್ಲಾ ಕೆಡಿಪಿ ಸಭೆ ನಡೆಸುವ ಬದಲು ನ್ಯಾಯಾಲಯದ ಮೋರೆ ಹೋಗಿ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ದುರಹಂಕಾರ ಪ್ರದರ್ಶನ ಮಾಡಿದ್ದಾರೆ” ಎಂದು ಉಮೇಶ ಜಾಧವ ಹರಿಹಾಯ್ದರು.

“ಪಶ್ಚಿಮ ಬಂಗಾಳದ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರತಿಪಕ್ಷದವರ ಧ್ವನಿ ಅಡಗಿಸುವ ಸಂಸ್ಕೃತಿ ಶುರುವಾಗಿದೆ. ದೇವಾನಂದ ಕೊರಬಾ ಆತ್ಮಹತ್ಯೆಗೆ ನ್ಯಾಯ ಸಿಕ್ಕಿಲ್ಲ. ಪಾಲಿಕೆಯಲ್ಲಿ ಲಿಂಗಾಯತ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ. ಸೇಡಂನಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಲಾಗಿದೆ. ಪ್ರಶ್ನೆ ಎತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಲ್ಲಿ ಕೊಲೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದೇನಾ ನಿಮ್ಮ ಸುಸಂಸ್ಕೃತ ಆಡಳಿತ?” ಎಂದು ವಾಗ್ದಾಳಿ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುರುದ್ವಾರ ಆವರಣದಲ್ಲಿ ದೆಹಲಿ ಪೊಲೀಸರು ಶೂ ಧರಿಸಿದ ಆರೋಪ: ‘ತಾಲಿಬಾನ್ ಮಾದರಿಯ ವರ್ತನೆ’ ಎಂದ ಪಂಜಾಬ್ ಸಿಎಂ

ದೆಹಲಿಯ ಐತಿಹಾಸಿಕ ಗುರುದ್ವಾರ ಶ್ರೀ ಬಾಂಗ್ಲಾ ಸಾಹಿಬ್‌ಗೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ...

ಮಣಿಪುರ ಹಿಂಸಾಚಾರ | 12 ಗಂಟೆಗಳಲ್ಲಿ 9 ಸಾವು; ಶಾಂತಿ ಕಾಪಾಡಲು ಸಿಎಂ ಮನವಿ

ಈಶಾನ್ಯ ರಾಜ್ಯ ಮಣಿಪುರದ ಮಲೆನಾಡು ಭಾಗಗಳಲ್ಲಿ ಕಳೆದ ಕೆಲ ಗಂಟೆಗಳಲ್ಲಿ ಮರುಕಳಿಸಿದ...

SIR | ಬೀದರ್‌ ಜಿಲ್ಲಾದ್ಯಂತ ಮತದಾರರ ಹೆಸರು ತೆಗೆಸಲು 6,101 ಫಾರಂ-7 ಅರ್ಜಿ ಸಲ್ಲಿಕೆ!

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಂದುವರಿದಿದ್ದು,...

ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತಿದೆ. ಹಿಂಗಾರು ಮಳೆಯೂ ಆರಂಭವಾಗುತ್ತಿದೆ. ಪರಿಣಾಮ, ಮುಂದಿನ 4...