ನಂದಿನಿ ಮೊಸರಿನ ದರ ಇಳಿಕೆ

Date:

ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ನಂದಿನಿ ಮೊಸರಿನ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಒಂದು ಲೀಟರ್ (ಒಂದು ಕೆ.ಜಿ.) ಮೊಸರಿನ ಪ್ಯಾಕೆಟ್‌ಗೆ ₹2 ಹಾಗೂ ಅರ್ಧ ಲೀಟರ್ ಪ್ಯಾಕೆಟ್‌ಗೆ ₹1 ಕಡಿತಗೊಳಿಸಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

- Advertisement -

​ಪರಿಷ್ಕೃತ ದರಗಳು ಇದೇ ನವೆಂಬರ್ 29ರ ಭಾನುವಾರದಿಂದ ರಾಜ್ಯದಾದ್ಯಂತ ಜಾರಿಗೆ ಬರಲಿವೆ. ಈ ನಿರ್ಧಾರದಿಂದ ಅರ್ಧ ಲೀಟರ್ ನಂದಿನಿ ಮೊಸರಿನ ಬೆಲೆ ₹34ರಿಂದ ₹33ಕ್ಕೆ ಹಾಗೂ ಒಂದು ಕೆ.ಜಿ. ಮೊಸರಿನ ದರ ₹68ರಿಂದ ₹66ಕ್ಕೆ ಇಳಿಕೆಯಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಡಾ. ವರ್ಗೀಸ್...

ಕುರಿಯನ್ ಅವರು ಕೇವಲ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದ ವ್ಯಕ್ತಿಯಲ್ಲ. ರೈತರಿಗೆ ಆರ್ಥಿಕ ಸ್ವಾವಲಂಬನೆ, ಮಹಿಳೆಯರಿಗೆ ಉದ್ಯೋಗಾವಕಾಶ, ಗ್ರಾಮೀಣ ಜನರಿಗೆ ಬದುಕಿನ ಭದ್ರತೆ ಹಾಗೂ ದೇಶಕ್ಕೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ದೊರಕಿಸಿಕೊಟ್ಟ ದೂರದೃಷ್ಟಿಯ ನಾಯಕರು. ಭಾರತದ...

ಪಂಜಾಬ್ ಚುನಾವಣೆ | 6 ವರ್ಷಗಳ ಬಳಿಕ ಮತ್ತೆ...

2020ರ ಐತಿಹಾಸಿಕ ರೈತ ಹೋರಾಟದ ವೇಳೆ ಮುರಿದುಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಮತ್ತು ಬಿಜೆಪಿ  ಮೈತ್ರಿ ಆರು ವರ್ಷಗಳ ಬಳಿಕ ಮತ್ತೆ ಜೀವ ಪಡೆದುಕೊಂಡಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ...

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು...

​ಇತ್ತೀಚೆಗೆ ನಂದಿನಿ ಹಾಲು, ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಯನ್ನು ಕೆಎಂಎಫ್ ಹೆಚ್ಚಿಸಿತ್ತು. ವಿಶೇಷವಾಗಿ ಮೊಸರಿನ ದರದಲ್ಲಿ ಭಾರಿ ಏರಿಕೆ ಮಾಡಿದ್ದಕ್ಕೆ ಗ್ರಾಹಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿ, ಹಲವೆಡೆ ಪ್ರತಿಭಟನೆಗಳೂ ನಡೆದಿದ್ದವು. ಸಾರ್ವಜನಿಕರ ಅಸಮಾಧಾನವನ್ನು ಗಮನಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊಸರಿನ ದರ ಕಡಿಮೆ ಮಾಡುವಂತೆ ಕೆಎಂಎಫ್ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದರು. ಈ ನಿರ್ದೇಶನದ ಮೇರೆಗೆ ಮಂಡಳಿಯು ದರ ಪರಿಷ್ಕರಣೆ ಕ್ರಮ ಕೈಗೊಂಡಿದೆ.

​ನವೆಂಬರ್ 1ರಿಂದ ಜಾರಿಗೆ ಬಂದಿದ್ದ ದರ ಪರಿಷ್ಕರಣೆಯಲ್ಲಿ ಮೊಸರಿನ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿತ್ತು. ಆ ವೇಳೆ ₹54 ಇದ್ದ ಒಂದು ಕೆ.ಜಿ. ನಂದಿನಿ ಮೊಸರಿನ ದರವನ್ನು ಒಮ್ಮೆಲೇ ₹14 ಹೆಚ್ಚಿಸಿ ₹68ಕ್ಕೆ ನಿಗದಿಪಡಿಸಲಾಗಿತ್ತು. ಅದೇ ರೀತಿ, ₹28 ಇದ್ದ ಅರ್ಧ ಲೀಟರ್ ಮೊಸರಿನ ಬೆಲೆಯನ್ನು ₹6 ಏರಿಸಿ ₹34ಕ್ಕೆ ತಲುಪಿಸಲಾಗಿತ್ತು.

​ಮೊಸರಿನೊಂದಿಗೆ ನಂದಿನಿ ಹಾಲಿನ ದರವನ್ನೂ ಪ್ರತಿ ಲೀಟರ್‌ಗೆ ₹8ರಿಂದ ₹12ರವರೆಗೆ ಹೆಚ್ಚಿಸಲಾಗಿತ್ತು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಕುಟುಂಬಗಳ ಮಾಸಿಕ ವೆಚ್ಚದ ಮೇಲೆ ಇದು ನೇರ ಹೊರೆಯಾಗಿ ಪರಿಣಮಿಸಿತ್ತು. ಇದರ ಜತೆಗೆ ಹೋಟೆಲ್, ದರ್ಶಿನಿ, ಕ್ಯಾಂಟೀನ್ ಹಾಗೂ ಆಹಾರ ಉದ್ಯಮಗಳ ಮೇಲೂ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದ್ದು, ಹೋಟೆಲ್ ಮಾಲೀಕರ ಸಂಘಗಳು ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

​ಕೆಎಂಎಫ್‌ನ ಈ ಪರಿಷ್ಕರಣೆಯಿಂದ ಗ್ರಾಹಕರಿಗೆ ಕೊಂಚ ಅನುಕೂಲವಾಗಲಿದೆಯಾದರೂ, ದರ ಏರಿಕೆಯ ಬಿಸಿ ಪೂರ್ಣವಾಗಿ ತಗ್ಗಿಲ್ಲ. ನವೆಂಬರ್ 1ಕ್ಕೂ ಮುನ್ನ ಇದ್ದ ದರಗಳಿಗೆ ಹೋಲಿಸಿದರೆ, ಈಗಲೂ ಗ್ರಾಹಕರು ಒಂದು ಕೆ.ಜಿ. ಮೊಸರಿಗೆ ₹12 ಹಾಗೂ ಅರ್ಧ ಲೀಟರ್‌ಗೆ ₹5 ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ. ಹೀಗಾಗಿ, ಇತ್ತೀಚಿನ ದರ ಇಳಿಕೆಯು ಸಾರ್ವಜನಿಕರಿಗೆ ಅಲ್ಪ ಪ್ರಮಾಣದ ಸಮಾಧಾನವನ್ನಷ್ಟೇ ನೀಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಗರ್ಭಿಣಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ ಅನಾರೋಗ್ಯದಿಂದ ನಿಧನ

ಕುಷ್ಟಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ...

ಬಸವ ಮಂಟಪ ಕೃತಿಗೆ ತೀವ್ರ ಖಂಡನೆ: ‘ಅನುಭವ ಮಂಟಪ ಅಭಿಯಾನ’, ವೈಚಾರಿಕ ಗ್ರಂಥಗಳ ಮೂಲಕ ಉತ್ತರ ನೀಡಲು ನಿರ್ಣಯ

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಗಳಿಗೆ ಅಪಮಾನ ಮಾಡುವಂತಹ ವಿವಾದಾತ್ಮಕ ಕೃತಿಯ...

ಬಸವಣ್ಣನವರ ಅವಹೇಳನ : ರವಿ ಹಂಜ್‌, ವಿಶ್ವೇಶ್ವರ ಭಟ್‌ಗೆ ಜಾಮೀನು

ʼಬಸವ ಮಂಟಪʼ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್‌ ಮತ್ತು...

ಯುಪಿ ಚುನಾವಣೆ | ಎಸ್‌ಪಿಯಿಂದ 26 ಸ್ಥಾನಗಳ ಆಫರ್‌; ‘ನಾವೇನು ಭಿಕ್ಷುಕರೇ?’ ಎಂದ ಕಾಂಗ್ರೆಸ್

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿರುವಾಗಲೇ, 'ಇಂಡಿಯಾ'...