ಈದಿನ.ಕಾಮ್‌ನ ಕನ್ಸ್‌ಲ್ಟಿಂಗ್ ಎಡಿಟರ್ ಡಿ. ಉಮಾಪತಿ, ಹಿರಿಯ ಸಾಹಿತಿ ಡಾ. ಇಂದಿರಾ ಹೆಗ್ಗಡೆ, ನಟ ಅಶೋಕ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 71 ಗಣ್ಯರಿಗೆ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.
ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಇಂದಿರಾ ಹೆಗ್ಗಡೆ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಈದಿನ.ಕಾಮ್‌ನ ಕನ್ಸ್‌ಲ್ಟಿಂಗ್ ಡಿ. ಉಮಾಪತಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಲನಚಿತ್ರ ಹಾಗೂ ಕಿರುತೆರೆ ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರದ ನಟ ಅಶೋಕ್ ಅವರು ಆಯ್ಕೆಯಾಗಿದ್ದಾರೆ. ಇವರು ತಮ್ಮದೇ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸರ್ಕಾರವು ಈ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೂ ಪ್ರಶಸ್ತಿ ನೀಡಲಾಗಿದೆ.
ಜಾನಪದ, ಸಂಗೀತ, ನೃತ್ಯ, ಯಕ್ಷಗಾನ, ಬಯಲಾಟ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಕೃಷಿ ಹಾಗೂ ಪರಿಸರ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನುಭಾವರನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತಿದೆ.
ಕ್ರೀಡೆಯಲ್ಲಿ ಎ.ವಿ. ರವಿ(ಜಿಮ್ ರವಿ), ಡಾ. ಎ.ಬಿ. ಸುಬ್ಬಯ್ಯ ಹಾಗೂ ಎಂ. ಗಿರಿ ಆಯ್ಕೆಯಾಗಿದ್ದಾರೆ. ನ್ಯಾಯಾಂಗ ಕ್ಷೇತ್ರದಿಂದ ಉಡುಪಿಯ ಬಿ.ವಿ. ಆಚಾರ್ಯ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರೊ. ರಾಜಾಸಾಬ್ ಎ.ಎಚ್ ಹಾಗೂ ಹೊರದೇಶದ ಡಾ. ರಾಜಶೇಖರ ಮೂರ್ತಿ ಅವರು ಗೌರವಿಸಲ್ಪಟ್ಟಿದ್ದಾರೆ. ಹೊರನಾಡು ಕ್ಷೇತ್ರದಿಂದ ಅಮೆರಿಕದ ರಮೇಶ್ ಆರ್. ಗೌಡ ಗುರುತಿಸಲ್ಪಟ್ಟಿದ್ದಾರೆ.
ಸಮಾಜಸೇವೆ ಕ್ಷೇತ್ರದಲ್ಲಿ ಡಾ. ಅನ್ನದಾನೇಶ್ವರ ಮಹಾಶಿವಯೋಗಿ, ಕಾಗೋಡು ತಿಮ್ಮಪ್ಪ, ಡಾ. ಎಸ್.ಎಂ. ಎಲಿ ಸೇರಿ ಹಲವರು ಆಯ್ಕೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಫಾ. ಜೋಸೆಫ್ ಸಿ. ಸಿ. ಹಾಗೂ ಸಂಗೀತಾ ಎನ್. ಕಟ್ಟಿಮನಿ ಅವರು ಕೂಡ ಈ ಪುರಸ್ಕೃತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕ್ರ.ಸಂ. ಹೆಸರು ಕ್ಷೇತ್ರ ಜಿಲ್ಲೆ
1. ಶ್ರೀ ದಾವಲಸಾಬ ಅತ್ತಾರ ಜಾನಪದ , ಕೊಪ್ಪಳ
2. ಗೌರಮ್ಮ ಜಾನಪದ , ಚಾಮರಾಜನಗರ
3 . ಪಾಂಡಪ್ಪ ದೇವಲಪ್ಪ ಲಮಾಣಿ ಜಾನಪದ,ಗದಗ
4 . ಎ ಆರ್ ಸತ್ಯನಾರಾಯಣ ಜಾನಪದ,ಬೆಂಗಳೂರು ದಕ್ಷಿಣ
5 .ಈರಣ್ಣ ರುದ್ರಾಕ್ಷಿ ಜಾನಪದ,ರಾಯಚೂರು
6 . ಶಿವಲಿಂಗಪ್ಪ ತಂದೆ ರಾಮಣ್ಣ ಜಾನಪದ,ಕೊಪ್ಪಳ
7 . ಸುರೇಶ್ ರಾಮಚಂದ್ರ ಜೋಶಿ ಜಾನಪದ ,ವಿಜಯಪುರ
8 . ಡಾ. ಸಿ.ಎ ಶ್ರೀಧರ್ ಸಂಗೀತ, ಮೈಸೂರು
9 . ಡಾ. ಎ ನಾರಾಯಣ ಸ್ವಾಮಿ ಸಂಗೀತ, ಹಾಸನ
10 . ಬಿ ಮುರುಳಿ ಸಂಗೀತ, ಬೆಂಗಳೂರು ಗ್ರಾಮಾಂತರ
11 . ಡಾ|| ಸತ್ಯನಾರಾಯಣ ರಾಜು, ನೃತ್ಯ, ಬೆಂಗಳೂರು ನಗರ
12 . ಬಾಬಜೀ ವೆಂಕಟರಮಣ ಚಲನಚಿತ್ರ, ಧಾರವಾಡ
13 . ಅಶೋಕ್ ಚಲನಚಿತ್ರ, ಬೆಂಗಳೂರು ಗ್ರಾಮಾಂತರ
14 . ಕೆ ಎಸ್ .ರವೀಂದ್ರ ನಾಥ್ ಕಿರುತೆರೆ, ಬೆಂಗಳೂರು ನಗರ
15 . ಗೋಪಾಲ ಗಾಣಿಗ, ಯಕ್ಷಗಾನ,ಉಡುಪಿ
16 . ಹುಲಿಗೆಮ್ಮ, ಬಯಲಾಟ,ಬಳ್ಳಾರಿ
17 ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ ರಂಗಭೂಮಿ,ಬೆಂಗಳೂರು ಗ್ರಾಮಾಂತರ
18 . ಕೆ. ಜಯಲಕ್ಷ್ಮಿ ಪಾಟೀಲ್, ರಂಗಭೂಮಿ, ಧಾರವಾಡ
19 . ಜಿ. ಡಿ ತಿಮ್ಮಯ್ಯ ರಂಗಭೂಮಿ,ಚಿತ್ರದುರ್ಗ
20 ಕೆ.ಆರ್ ಸುಮತಿ, ರಂಗಭೂಮಿ, ಮೈಸೂರು
21. ಹೆಚ್ ವಿ ಪುಟ್ಟವೀರಪ್ಪ, ರಂಗಭೂಮಿ, ಬೆಂಗಳೂರು ದಕ್ಷಿಣ
22 . ಹೊನ್ನ ನಾಯಕ್, ರಂಗಭೂಮಿ, ಮೈಸೂರು
23 . ಜಿ.ವಿ. ಹಂಸಾನಂದ ಆಚಾರ್ಯ, ಶಿಲ್ಪಕಲೆ, ವಿಜಯನಗರ
24. ಕಾಡಪ್ಪ ಶಿಲ್ಪಕಲೆ, ಬೆಳಗಾವಿ
25 . ಸಿ ಬಿ ಸೋಮಶೆಟ್ಟಿ, ಚಿತ್ರಕಲೆ, ಬೀದರ
26 . ಶಾಂತಾಬಾಯಿ ಮೋಹನ್ ಕಾಂಬಳೆ, ಕರಕುಶಲ, ಬೀದರ
27 . ಹೆಚ್ ಕೆ ಶ್ರೀಕಂಠು, ಕೃಷಿ, ಬೆಂಗಳೂರು ದಕ್ಷಿಣ
28. ಬಿ ಎ ಚನ್ನಪ್ಪಗೌಡ, ಕೃಷಿ, ಬೆಂಗಳೂರು ನಗರ
29. ಡಾ. ಸ್ವಾಮಿ ಆನಂದ್. ಆರ್ ಪರಿಸರ, ಮೈಸೂರು
30 .ಪ್ರೊ. ರಾಜಾಸಾಬ್ ಎ. ಎಚ್ ವಿಜ್ಞಾನ – ತಂತ್ರಜ್ಞಾನ, ಕಲಬುರಗಿ
31. ಡಾ. ರಾಜಶೇಖರ ಮೂರ್ತಿ ವಿಜ್ಞಾನ – ತಂತ್ರಜ್ಞಾನ, ಹೊರದೇಶ (ಕೆನಡಾ)
32. ಉಮಾಪತಿ, ಮಾಧ್ಯಮ, ಚಿತ್ರದುರ್ಗ
33. ಎಂ.ಪಿ. ಸುಶೀಲ ಮಾಧ್ಯಮ,, ಬೆಂಗಳೂರು ನಗರ
34. ವಿಶ್ವನಾಥ್ ಸುವರ್ಣ ಮಾಧ್ಯಮ/ಛಾಯಾಚಿತ್ರ ದಕ್ಷಿಣ ಕನ್ನಡ
35. ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ ಸಂಕೀರ್ಣ, ಬಾಗಲಕೋಟೆ
36 . ಡಿ.ಎಸ್. ಚೌಗಲೆ ಸಂಕೀರ್ಣ, ಬೆಳಗಾವಿ
37 ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ ಸಂಕೀರ್ಣ, ಬೆಂಗಳೂರು ನಗರ
38.ಬಿ.ಪಿ ಆರಾಧ್ಯ ಸಂಕೀರ್ಣ/(ವಾಸ್ತುಶಾಸ್ತ್ರ), ಬೆಂಗಳೂರು ದಕ್ಷಿಣ
39. ರವಿ ಪ್ರವೀಣ್ ನೊರೋನಾ ಸಂಕೀರ್ಣ, ಬೆಂಗಳೂರು ನಗರ
40. ಎಂ ಆರ್ ಜೈಶಂಕರ್ ಸಂಕೀರ್ಣ, ಚಿಕ್ಕಮಗಳೂರು
41. ಪ್ರಸಾದ್ ಬಿಡ್ಡಪ್ಪ ಸಂಕೀರ್ಣ, ಕೊಡಗು
42 . ವಾಸಪ್ಪ ಯಲ್ಲಪ್ಪ ಕುಸಗೂರ ಸಂಕೀರ್ಣ, ಹಾವೇರಿ
43 . ಡಾ. ಅನ್ನದಾನೀಶ್ವರ ಮಹಾಶಿವಯೋಗಿ ಸಮಾಜ ಸೇವೆ, ಗದಗ
44. ಬಸವರಾಜು, ಸಮಾಜ ಸೇವೆ, ಮಂಡ್ಯ
45. ಕಾಗೋಡು ತಿಮ್ಮಪ್ಪ, ಸಮಾಜ ಸೇವೆ, ಶಿವಮೊಗ್ಗ
46. ಡಾ. ಎಸ್ ಎಂ ಎಲಿ, ಸಮಾಜ ಸೇವೆ, ದಾವಣಗೆರೆ
47. ಡಾ. ಜಿ ಎಸ್ ಚಂದ್ರ ಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್ ಸಮಾಜ ಸೇವೆ, ಉತ್ತರ ಕನ್ನಡ
48. ಡಾ. ಶಿವಾನಂದ ಮಹಾಸ್ವಾಮಿ ಸಮಾಜ ಸೇವೆ, ಕಲಬುರಗಿ
49. ಕೄಷ್ಣೇಗೌಡ ಬಿನ್ ವೆಂಕಟರಾಯಪ್ಪ ಸಮಾಜ ಸೇವೆ, ಚಿಕ್ಕಬಳ್ಳಾಪುರ
50. ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ) ಸಮಾಜ ಸೇವೆ, ದಕ್ಷಿಣ ಕನ್ನಡ
51. ಗುರಮ್ಮ ಹಂಪಯ್ಯ ಸಂಕಿನಮಠ, ಸಮಾಜ ಸೇವೆ, ಬಾಗಲಕೋಟೆ
52. ಡಾ. ವಿಜಯೇಂದ್ರ ಹೊನ್ನೂರಪ್ಪ ವೈದ್ಯಕೀಯ, ಬೆಂಗಳೂರು ನಗರ
53. ಡಾ ಸುಜಾತ ಮಲ್ಲಿಕಾರ್ಜುನ ಜಾಲಿ ವೈದ್ಯಕೀಯ, ಬೆಳಗಾವಿ
54. ತೆರೆಸಾ ಭಟ್ಟಾಚಾರ್ಯ, ಆಡಳಿತ, ಬೆಂಗಳೂರು ನಗರ
55. ಡಾ. ಕೆ ಎಸ್ ಸೋಮಶೇಖರ್, ಆಡಳಿತ, ಹೊರನಾಡು
56. ಡಾ ಕೆ ಎನ್ ವೆಂಕಟ ಕೃಷ್ಣಾರಾವ್ ಇಂಜಿನಿಯರಿಂಗ್, ಚಿಕ್ಕಬಳ್ಳಾಪುರ
57. ಡಾ. ಇಂದಿರಾ ಹೆಗಡೆ ಸಾಹಿತ್ಯ, ದಕ್ಷಿಣ ಕನ್ನಡ
58. ವೀರಹನುಮಾನ್ ಸಾಹಿತ್ಯ, ರಾಯಚೂರು
59. ಪ್ರೋ. ನಾರಾಯಣಘಟ್ಟ ಸಾಹಿತ್ಯ, ತುಮಕೂರು
60 . ಸಿ. ಮಹೇಶ್ವರಪ್ಪ ಚಟ್ನಳ್ಳಿ ಸಾಹಿತ್ಯ, ಚಿಕ್ಕಮಗಳೂರು
61. ಡಾ. ಕರೀಗೌಡ ಬೀಚನಹಳ್ಳಿ ಸಾಹಿತ್ಯ, ತುಮಕೂರು
62. ಡಾ ಸಿದ್ಧರಾಮ ಹೊನ್ಕಲ್ ಸಾಹಿತ್ಯ, ಯಾದಗಿರಿ
63. ಫಾ|| ಜೊಸೆಫ್(ಕ್ರೈಸ್ಟ್ ವಿಶ್ವವಿದ್ಯಾಲಯ, ಉಪ ಕುಲಪತಿಗಳು) ಶಿಕ್ಷಣ, ಬೆಂಗಳೂರು ನಗರ
64. ಶಾಂತಪ್ಪ ದಶವಂತ ಶಿಕ್ಷಣ, ವಿಜಯಪುರ
65. ಸಂಗೀತಾ ಎನ್ ಕಟ್ಟಿಮನಿ ಶಿಕ್ಷಣ, ಕಲಬುರಗಿ
66 .ಡಾ .ಎನ್ ಎಸ್ ರಂಗರಾಜು ಶಿಕ್ಷಣ, ಮೈಸೂರು
67. ಬಿ. ವಿ ಆಚಾರ್ಯ ನ್ಯಾಯಾಂಗ, ಉಡುಪಿ
68 . ರಮೇಶ್ ಗೌಡ (ಮಾಜಿ ಅಧ್ಯಕ್ಷರು,ಅಕ್ಕ ಅಮೇರಿಕಾ), ಹೊರನಾಡು/ಹೊರದೇಶ
69. ಜಿಮ್ ರವಿ ಕ್ರೀಡೆ, ಕೋಲಾರ
70 . ಡಾ|| ಎ.ಬಿ.ಸುಬ್ಬಯ್ಯ ಕ್ರೀಡೆ ಕೊಡಗು
71. ಎಂ ಗಿರೀಶ್ ಕ್ರೀಡೆ ಬೆಂಗಳೂರು ನಗರ





