ಯುಪಿ | ಬ್ರಿಜ್ ಭೂಷಣ್‌ಗೆ ಬಿಜೆಪಿ ಮತ್ತೆ ಮಣೆ; ಚುನಾವಣೆಗೆ ಮುನ್ನ ಟಾಪ್ ಟೀಮ್‌ನಲ್ಲಿ ಸ್ಥಾನ!

Date:

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಕೆಲವೇ ತಿಂಗಳ ಬಳಿಕ, ಬಿಜೆಪಿ ಮಾಜಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಉತ್ತರ ಪ್ರದೇಶ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ.

- Advertisement -

2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಇಂದು ನಡೆಯಲಿರುವ ಸಭೆಗೂ ಮುನ್ನ, ಅಕ್ಟೋಬರ್ 26ರಂದು ಯುಪಿ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಅವರು ನೂತನ ರಾಜ್ಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದಾರೆ. ಲಖನೌದಲ್ಲಿ ನಡೆಯಲಿರುವ ಈ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಮಾರೋಪ ಅಧಿವೇಶನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಷಣ ಮಾಡಲಿದ್ದಾರೆ. ಸಭೆಯ ಕಾರ್ಯಸೂಚಿ ನಿರ್ಧರಿಸಲು ಪಕ್ಷದ ಪದಾಧಿಕಾರಿಗಳು ಗುರುವಾರ ಸಭೆ ನಡೆಸಿದ್ದರು. ಬ್ರಿಜ್ ಭೂಷಣ್ ಸೇರಿದಂತೆ ಗೊಂಡಾ ಜಿಲ್ಲೆಯ ಏಳು ಬಿಜೆಪಿ ನಾಯಕರು ಈ ಸಮಿತಿಯಲ್ಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

“ಅವರು ಆರು ಬಾರಿ ಸಂಸದರಾಗಿದ್ದರೂ ಮತ್ತು ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರೂ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿರುವುದು ಇದೇ ಮೊದಲು” ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಆರು ಬಾರಿ ಸಂಸದರಾಗಿದ್ದರೂ ಈ ಹಿಂದೆ ರಾಷ್ಟ್ರೀಯ ಬಿಜೆಪಿಯಲ್ಲಾಗಲಿ ಅಥವಾ ರಾಜ್ಯ ಘಟಕದಲ್ಲಾಗಲಿ ಅವರಿಗೆ ಯಾವುದೇ ಅಧಿಕೃತ ಹುದ್ದೆ ನೀಡಿರಲಿಲ್ಲ ಎನ್ನಲಾಗಿದೆ.

ಮಹಿಳಾ ಕುಸ್ತಿಪಟುಗಳ ಆರೋಪದಿಂದ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಬ್ರಿಜ್ ಭೂಷಣ್ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಬದಲಿಗೆ, ಅವರು ಪ್ರತಿನಿಧಿಸುತ್ತಿದ್ದ ಕೈಸರಗಂಜ್ ಕ್ಷೇತ್ರದಿಂದ ಅವರ ಕಿರಿಯ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿತ್ತು. ಚೊಚ್ಚಲ ಚುನಾವಣೆಯಲ್ಲೇ ಕರಣ್ ಭೂಷಣ್ ಗೆಲುವು ಸಾಧಿಸಿದ್ದರು.

ಆಗಸ್ಟ್ 3ರಂದು ದೆಹಲಿ ವಿಚಾರಣಾ ನ್ಯಾಯಾಲಯವು ಆರು ಮಹಿಳಾ ಕುಸ್ತಿಪಟುಗಳು ಹೂಡಿದ್ದ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಅವರನ್ನು ಖುಲಾಸೆಗೊಳಿಸಿತ್ತು. ಆದಾಗ್ಯೂ, ಈ ತೀರ್ಪನ್ನು ಪ್ರಶ್ನಿಸಿ ನಾಲ್ವರು ಕುಸ್ತಿಪಟುಗಳು ದೆಹಲಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅಕ್ಟೋಬರ್ 28ರಂದು ನ್ಯಾಯಾಲಯವು ಬ್ರಿಜ್ ಭೂಷಣ್ ಅವರಿಗೆ ಪ್ರತಿಕ್ರಿಯೆ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 20ಕ್ಕೆ ನಿಗದಿಪಡಿಸಲಾಗಿದೆ.

ನ್ಯಾಯಾಲಯದ ಖುಲಾಸೆ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಅವರು ಶಾಸನಬದ್ಧವಾಗಿ ಕಂಟಕಮುಕ್ತರಾಗಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಮಾತನಾಡಿ, ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳು ರಾಜಕೀಯ ಪಿತೂರಿಯಾಗಿದ್ದು, ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ ಎಂದಿದ್ದಾರೆ.

ಯುಪಿ ಬಿಜೆಪಿ ವೆಬ್‌ಸೈಟ್ ಪ್ರಕಾರ, ಈ ಹಿಂದೆ 184 ಸದಸ್ಯರಿದ್ದ ರಾಜ್ಯ ಕಾರ್ಯಕಾರಿಣಿ ಸಮಿತಿಯನ್ನು ಈ ಬಾರಿ 712 ಸದಸ್ಯರಿಗೆ ವಿಸ್ತರಿಸಲಾಗಿದೆ. ಇದರಲ್ಲಿ 134 ವಿಶೇಷ ಆಹ್ವಾನಿತರು ಮತ್ತು 30 ಕಾಯಂ ಆಹ್ವಾನಿತರು ಸೇರಿದ್ದಾರೆ. ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಮಾಜಿ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ ಜೋಶಿ ಅವರು ಸಮಿತಿಯ ಕಾಯಂ ಆಹ್ವಾನಿತರಾಗಿದ್ದಾರೆ.

ಬ್ರಿಜ್ ಭೂಷಣ್, ದೇವೀಪಟನ್ ಮಂಡಲಕ್ಕೆ ಸೇರಿದ ಗೊಂಡಾ, ಬಲರಾಮಪುರ, ಕೈಸರಗಂಜ್, ಮತ್ತು ಶ್ರಾವಸ್ತಿ ಭಾಗಗಳಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಬಿಜೆಪಿಯಲ್ಲಿ ಠಾಕೂರ್ (ರಜಪೂತ) ಮತ್ತು ಬ್ರಾಹ್ಮಣ ಸಮುದಾಯಗಳ ನಡುವೆ ರಾಜಕೀಯ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. 2027ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮುದಾಯದ ಪ್ರಭಾವಿ ನಾಯಕನನ್ನು ತೃಪ್ತಿಪಡಿಸಲು ಬಿಜೆಪಿ ಮುಂದಾಗಿದೆ.

ಭಾರತೀಯ ಕುಸ್ತಿ ಫೆಡರೇಷನ್ (WFI)ನ ಆಗಿನ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಕೆಲ ತರಬೇತುದಾರರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಶೋಷಣೆ ಮಾಡಿದ್ದಾರೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿ ಭಾರತದ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಮತ್ತು ಭಜರಂಗ್ ಪುನಿಯಾ ಸೇರಿದಂತೆ ಹಲವು ಕ್ರೀಡಾಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಆರಂಭಿಸಿದರು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ | ಜು. 18ರಂದು ಹಾಜರಾಗಲು ಬ್ರಿಜ್‌ ಭೂಷಣ್‌ ಸಿಂಗ್‌ಗೆ ಸಮನ್ಸ್ ಜಾರಿ

ಆರಂಭದಲ್ಲಿ ಕ್ರೀಡಾ ಸಚಿವಾಲಯ ರಚಿಸಿದ್ದ ಮೇಲ್ವಿಚಾರಣಾ ಸಮಿತಿಯ ಪ್ರಕ್ರಿಯೆಯಿಂದ ಅಸಂತೃಪ್ತರಾದ ಕುಸ್ತಿಪಟುಗಳು ಏಪ್ರಿಲ್ 2023ರಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಆರಂಭಿಸಿದರು. ಪೊಲೀಸರು ದೂರಿನ ಮೇರೆಗೆ ಕನಿಷ್ಟ ಎಫ್‌ಐಆರ್‌ನ್ನೂ ದಾಖಲಿಸಿರಲಿಲ್ಲ. ಬಳಿಕ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಭೂಷಣ್ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿದರು. ಇದರಲ್ಲಿ ಆರು ಮಹಿಳಾ ಕುಸ್ತಿಪಟುಗಳು ನೀಡಿದ ಲೈಂಗಿಕ ಶೋಷಣೆ ದೂರು ಹಾಗೂ ಒಬ್ಬ ಅಪ್ರಾಪ್ತ ಕುಸ್ತಿಪಟು ನೀಡಿದ ಪೋಕ್ಸೋ (POCSO) ಕಾಯ್ದೆಯಡಿಯ ದೂರು ಸೇರಿತ್ತು. ನಂತರ ಅಪ್ರಾಪ್ತ ಸಂತ್ರಸ್ತೆಯ ತಂದೆ ತಮ್ಮ ದೂರನ್ನು ಹಿಂಪಡೆದಿದ್ದರಿಂದ ಪೊಲೀಸರು ಪೋಕ್ಸೋ ಪ್ರಕರಣಕ್ಕೆ ರದ್ದು ವರದಿ ಸಲ್ಲಿಸಿದ್ದರು.

ಪ್ರತಿಭಟನೆ ತೀವ್ರಗೊಂಡಾಗ ಕುಸ್ತಿಪಟುಗಳು ತಮ್ಮ ಪ್ರಶಸ್ತಿ ಹಾಗೂ ಪದಕಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ತೆರಳಿದ್ದರು. ಆ ಸಮಯದಲ್ಲಿ ರೈತ ನಾಯಕರು ಮತ್ತು ಖಾಪ್ ಪಂಚಾಯತಿಗಳು ಅವರನ್ನು ತಡೆದು ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದವು. ಜೂನ್ 2023ರಲ್ಲಿ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸುಮಾರು 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದರು. ಇದರಲ್ಲಿ ಐಪಿಸಿ ಸೆಕ್ಷನ್ 354 (ಶೀಲಭಂಗ), 354A (ಲೈಂಗಿಕ ಕಿರುಕುಳ) ಮತ್ತು 354D (ಸ್ಟಾಕಿಂಗ್) ಅಡಿಯಲ್ಲಿ ಗಂಭೀರ ಆರೋಪಗಳಿದ್ದವು.

ದೆಹಲಿಯ ವಿಚಾರಣಾ ನ್ಯಾಯಾಲಯವು ಸೂಕ್ತ ಸಾಕ್ಷ್ಯಗಳ ಅಭಾವದ ಕಾರಣ ನೀಡಿ ಆಗಸ್ಟ್ 3ರಂದು ಬ್ರಿಜ್ ಭೂಷಣ್ ಸಿಂಗ್ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿತು. ಆದರೆ, ಈ ಖುಲಾಸೆ ತೀರ್ಪನ್ನು ಒಪ್ಪದ ನಾಲ್ವರು ಸಂತ್ರಸ್ತ ಕುಸ್ತಿಪಟುಗಳು ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ನ್ಯಾಯಾಲಯವು ಬ್ರಿಜ್ ಭೂಷಣ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ನೀಡಿದ್ದು, ಈ ಪ್ರಕರಣದ ಕಾನೂನು ಹೋರಾಟ ಇನ್ನೂ ಮುಂದುವರಿದಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ವಿರುದ್ಧ ‘ಮಹಾಭಿಯೋಗ’ಕ್ಕೆ ‘ಇಂಡಿಯಾ’ ಒಕ್ಕೂಟದಿಂದ ಅಣಕು ಸಂಸತ್ ಅಧಿವೇಶನ

ಸಿಇಸಿ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಸಾಂಕೇತಿಕವಾಗಿ 'ಮಹಾಭಿಯೋಗ' (ವಜಾ) ನಿರ್ಣಯ...

ಬ್ಲೂಟೂತ್‌ ಪದಕ್ಕಿದೆ ಸಾವಿರ ವರ್ಷಗಳ ಇತಿಹಾಸ: ಇದು ನಿಮಗೆ ಗೊತ್ತೇ?

ಬ್ಲೂಟೂತ್‌ನ ಲೋಗೋ ಸಹ ಕೇವಲ ಒಂದು ಜ್ಯಾಮಿತೀಯ ವಿನ್ಯಾಸವಲ್ಲ. ಅದು ಹರಾಲ್ಡ್...

ಸೌಜನ್ಯ ಪ್ರಕರಣ: ಹರ್ಷೇಂದ್ರ ಕುಮಾರ್‌ಗೆ ಎಸ್‌ಐಟಿ ನೋಟಿಸ್ ಸಾಧ್ಯತೆ

ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ...

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...