ಬದ್ರಿನಾಥದಿಂದ ವಾಪಸಾಗುತ್ತಿದ್ದ ಹೆಲಿಕಾಪ್ಟರ್ ಪತನ: ಬೆಂಗಳೂರಿನ ಐವರು ಸೇರಿ ಆರು ಜನ ನಾಪತ್ತೆ!

Date:

ಉತ್ತರಾಖಂಡದ ಪವಿತ್ರ ಯಾತ್ರಾ ಸ್ಥಳ ಬದ್ರಿನಾಥದಿಂದ ಡೆಹ್ರಾಡೂನ್‌ಗೆ ಹೊರಟಿದ್ದ ಹೆಲಿಕಾಪ್ಟರ್ ಒಂದು ಶುಕ್ರವಾರ ಮಧ್ಯಾಹ್ನ ದುರಂತಕ್ಕೀಡಾಗಿದೆ. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಹಾಗೂ ಬೆಂಗಳೂರಿನ ಐವರು ಯಾತ್ರಿಕರ ಸ್ಥಿತಿ ಏನೆಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

‘ಟ್ರಾನ್ಸ್ ಭಾರತ್ ಏವಿಯೇಷನ್’ ಸಂಸ್ಥೆಗೆ ಸೇರಿದ (VT-HCX) ಹೆಲಿಕಾಪ್ಟರ್ ಶುಕ್ರವಾರ ಮಧ್ಯಾಹ್ನ 1:14ಕ್ಕೆ ಬದ್ರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಹೊರಟಿತ್ತು. ಆದರೆ, ಜೋಶಿಮಠ (ಜ್ಯೋತಿರ್ಮಠ) ಕಣಿವೆ ದಾಟುವಾಗ ದಿಢೀರನೆ ಇದರ ಸಂಪರ್ಕ ಕಡಿತಗೊಂಡು, ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡಿತು. ಮಧ್ಯಾಹ್ನ 2:21 ರ ಸುಮಾರಿಗೆ ಜೋಶಿಮಠದ ಚಾಯ್ ಗ್ರಾಮದ ಮಿಲಿಟರಿ ಕ್ಯಾಂಪ್‌ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ವಿಮಾನದಲ್ಲಿದ್ದ ಪೈಲಟ್ ಕ್ಯಾಪ್ಟನ್ ಹಿಮಾಂಶು ಅವರನ್ನು ಹೊರತುಪಡಿಸಿ, ಉಳಿದ ಐದೂ ಜನ ಪ್ರಯಾಣಿಕರು ಕರ್ನಾಟಕದ ಬೆಂಗಳೂರಿನವರು ಎಂದು ತಿಳಿದುಬಂದಿದೆ.

ಪೈಲಟ್: ಕ್ಯಾಪ್ಟನ್ ಹಿಮಾಂಶು

ಪ್ರಯಾಣಿಕರು: ಪ್ರತಾಪ್, ಅರುಣ್, ಶಂಕರ್ ಗೌಡ, ಸುಧೀರ್ ಕೆ. ಮತ್ತು ಎಚ್.ಎಸ್. ನಟರಾಜ್.

ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಗಾಳಿ, ಸಿಡಿಲು, ಆಲಿಕಲ್ಲು ಮಳೆ ಹಾಗೂ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಬಿರುಗಾಳಿಯ ಮುನ್ನೆಚ್ಚರಿಕೆಯಾಗಿ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ನೀಡಿತ್ತು. ಹಿಮಪಾತ ಮತ್ತು ದಟ್ಟ ಮಂಜಿನಿಂದಾಗಿ ದಾರಿ ಸರಿಯಾಗಿ ಕಾಣಿಸದೇ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ಭಾರತೀಯ ಸೇನೆ ಹಾಗೂ ಸ್ಥಳೀಯ ಆಡಳಿತದ ಜಂಟಿ ತಂಡಗಳು ಅಪಘಾತ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಘಟನೆಯನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗಾಯಾಳುಗಳು ಸಿಕ್ಕ ತಕ್ಷಣವೇ ಅವರನ್ನು ಏರ್‌ಲಿಫ್ಟ್ ಮಾಡಿ ಆಸ್ಪತ್ರೆಗೆ ಸೇರಿಸಲು ಆದೇಶಿಸಿದ್ದಾರೆ ಮುನ್ನೆಚ್ಚರಿಕೆ ಕ್ರಮವಾಗಿ ‘ಟ್ರಾನ್ಸ್ ಭಾರತ್ ಏವಿಯೇಷನ್’ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್ ಹಾರಾಟಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ದುರ್ಗಮ ಹಿಮಾಲಯದ ಕಣಿವೆಗಳಲ್ಲಿ ಯಾತ್ರೆ ಮಾಡುವ ಭಕ್ತರಿಗೆ ಹೆಲಿಕಾಪ್ಟರ್ ಸೇವೆಗಳು ಅನುಕೂಲಕರವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಪದೇಪದೇ ಸಂಭವಿಸುತ್ತಿರುವ ಅಪಘಾತಗಳು ಯಾತ್ರಿಕರಲ್ಲಿ ತೀವ್ರ ಆತಂಕ ಮೂಡಿಸಿವೆ.

ಉತ್ತರಾಖಂಡದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತ, 2025ರ ಚಾರ್ ಧಾಮ್ ಯಾತ್ರೆ ವೇಳೆ ನಡೆದ ಸರಣಿ ಹೆಲಿಕಾಪ್ಟರ್ ದುರಂತಗಳನ್ನು ಮತ್ತೆ ನೆನಪಿಸುವಂತೆ ಮಾಡಿದೆ. ಕಳೆದ ವರ್ಷದ ಈ ಸಾಲು ಸಾಲು ಅಪಘಾತಗಳ ನಂತರ, ವಿಮಾನಯಾನ ಸಚಿವಾಲಯ ಮತ್ತು ಉತ್ತರಾಖಂಡ ಸರ್ಕಾರ ಹಾರಾಟದ ಸುರಕ್ಷತೆ ಹೆಚ್ಚಿಸಲು, ವಾತಾವರಣದ ಮಾಹಿತಿ ಸರಿಯಾಗಿ ಸಿಗುವಂತೆ ಮಾಡಲು ಹಾಗೂ ಖಾಸಗಿ ಹೆಲಿಕಾಪ್ಟರ್ ಕಂಪನಿಗಳ ಮೇಲೆ ಕಣ್ಣಿಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದವು.

ಈ ಹಿಂದೆ ನಡೆದ ಪ್ರಮುಖ ಅಪಘಾತಗಳು ಮತ್ತು ಎಮರ್ಜೆನ್ಸಿ ಲ್ಯಾಂಡಿಂಗ್‌ಗಳು:-

2025ರ ಜೂನ್ 15: ಆರ್ಯನ್ ಏವಿಯೇಷನ್‌ಗೆ ಸೇರಿದ ಬೆಲ್ 407 ಹೆಲಿಕಾಪ್ಟರ್ ಕೆದಾರನಾಥದಿಂದ ಗುಪ್ತಕಾಶಿಗೆ ಹೊರಟಾಗ ರುದ್ರಪ್ರಯಾಗ ಜಿಲ್ಲೆಯ ಗೌರಿಕುಂಡ್ ಬಳಿ ಪತನಗೊಂಡಿತು. ಬೆಳಿಗ್ಗೆ 5.19ಕ್ಕೆ ಹೊರಟಿದ್ದ ಈ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸೇರಿದಂತೆ ಏಳೂ ಜನರು ಸಾವನ್ನಪ್ಪಿದರು. ಆ ಸಮಯದಲ್ಲಿ ವಾತಾವರಣ ತೀರ ಕೆಟ್ಟದಾಗಿತ್ತು.

ಜೂನ್ 15ರ ದುರಂತಕ್ಕೂ ಮುನ್ನ ಆರು ವಾರಗಳಲ್ಲೇ ಇದೇ ದಾರಿಯಲ್ಲಿ ಮೂರು ಎಮರ್ಜೆನ್ಸಿ ಲ್ಯಾಂಡಿಂಗ್ ಹಾಗೂ ಎರಡು ಅಪಘಾತಗಳು ನಡೆದಿದ್ದವು. ಮೇ 8 ರಂದು ಖಾರ್ಸಾಲಿ ಮತ್ತು ಝಾಲಾ ನಡುವೆ ಹೆಲಿಕಾಪ್ಟರ್ ಬಿದ್ದು ಆರು ಜನರು ತೀರಿಕೊಂಡಿದ್ದರು.

ಮೇ 17: ಕೆದಾರನಾಥಕ್ಕೆ ಹೋಗುತ್ತಿದ್ದ ಏರ್-ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗುವಾಗ ಅದರ ಹಿಂಭಾಗದ ಭಾಗ ಕಳಚಿಬಿದ್ದಿತ್ತು.

ಜೂನ್ 7: ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಐವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ತುರ್ತಾಗಿ ಲ್ಯಾಂಡ್ ಆಗಬೇಕಾಯಿತು.

ಅಕ್ಟೋಬರ್ 2022: ರುದ್ರಪ್ರಯಾಗದಲ್ಲಿ ಆರ್ಯನ್ ಏವಿಯೇಷನ್‌ನ ಹೆಲಿಕಾಪ್ಟರ್ ದಟ್ಟ ಮಂಜಿನಿಂದಾಗಿ ಬೆಟ್ಟಕ್ಕೆ ಡಿಕ್ಕಿಯಾಗಿ ಏಳು ಯಾತ್ರಿಕರು ಜೀವ ಕಳೆದುಕೊಂಡಿದ್ದರು.

ಜೂನ್ 15ರ ಘಟನೆಯ ನಂತರ ವಿಮಾನಯಾನ ಸಚಿವಾಲಯ ತಕ್ಷಣವೇ ತನಿಖೆಗೆ ಆದೇಶಿಸಿತು. ಕೆದಾರನಾಥ ಕಣಿವೆಯಲ್ಲಿ ಎರಡು ದಿನ ಹೆಲಿಕಾಪ್ಟರ್ ಸೇವೆಯನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು. ಡಿಜಿಸಿಎ (DGCA) ಮೂಲಕ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಯಿತು ಮತ್ತು ಯುಸಿಎಡಿಎ (UCADA) ಸಂಸ್ಥೆಗೆ ಎಲ್ಲಾ ಹೆಲಿಕಾಪ್ಟರ್ ಹಾಗೂ ಪೈಲಟ್‌ಗಳ ಸುರಕ್ಷತೆಯನ್ನು ತಪಾಸಣೆ ಮಾಡಲು ಸೂಚಿಸಲಾಯಿತು.

ಅಪಘಾತಕ್ಕೀಡಾಗಿದ್ದ ಆರ್ಯನ್ ಏವಿಯೇಷನ್ ಹಾರಾಟವನ್ನು ರದ್ದು ಮಾಡಲಾಯಿತು. ಕೆಟ್ಟ ವಾತಾವರಣದಲ್ಲೂ ಹಾರಾಟ ನಡೆಸಿದ್ದ ಟ್ರಾನ್ಸ್‌ಭಾರತ್ ಏವಿಯೇಷನ್‌ನ ಇಬ್ಬರು ಪೈಲಟ್‌ಗಳ ಲೈಸೆನ್ಸ್ ಅನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಯಿತು. ಇದರ ಜೊತೆಗೆ ಪ್ರತಿಯೊಂದು ಹೆಲಿಕಾಪ್ಟರ್ ಹಾರಾಟವನ್ನು ಕ್ಷಣಕ್ಷಣಕ್ಕೂ ಗಮನಿಸಲು ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಯಿತು.

ಜುಲೈ 2025ರಲ್ಲಿ UCADA ತಂದ ಹೊಸ ನಿಯಮಗಳ ಪ್ರಕಾರ, ಈ ಪ್ರದೇಶದಲ್ಲಿ ಹಾರಾಟ ನಡೆಸುವ ಪೈಲಟ್‌ಗಳಿಗೆ ಬೆಟ್ಟದ ಪ್ರದೇಶಗಳಲ್ಲಿ ಕನಿಷ್ಠ 1,500 ಗಂಟೆಗಳ ಹಾರಾಟದ ಅನುಭವ ಇರುವುದು ಕಡ್ಡಾಯವಾಯಿತು. ದಿನಕ್ಕೆ ಇಷ್ಟೇ ಟ್ರಿಪ್ ಮಾಡಬೇಕೆಂಬ ಮಿತಿ ಹೇರಲಾಯಿತು. ಪ್ರತಿಯೊಂದು ಹೆಲಿಕಾಪ್ಟರ್ ಟೇಕ್-ಆಫ್ ಆಗುವ ಮುನ್ನ UCADAಗೆ ಮಾಹಿತಿ ನೀಡುವುದು ಕಡ್ಡಾಯವಾಯಿತು.

ಡಿಸೆಂಬರ್ 2025ರ ವೇಳೆಗೆ ಡೆಹರಾಡೂನ್‌ನ ಸಹಸ್ರಧಾರ ಮತ್ತು ಕೆದಾರನಾಥದ ಬಳಿಯ ಸೀತಾಪುರದಲ್ಲಿ ಹೊಸ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಯಿತು. ಹವಾಮಾನದ ನಿಖರ ಮಾಹಿತಿಗಾಗಿ ಹವಾಮಾನ ಇಲಾಖೆಯ (IMD) ಅಧಿಕಾರಿಗಳನ್ನು ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳನ್ನು ಇಲ್ಲಿ ನಿಯೋಜಿಸಲಾಯಿತು. ದಾರಿಯುದ್ದಕ್ಕೂ ವೆದರ್ ಕ್ಯಾಮೆರಾಗಳನ್ನು ಅಳವಡಿಸಲಾಯಿತು.

ಇಷ್ಟೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಸಂಸದೀಯ ಸಮಿತಿಯು ಆಗಸ್ಟ್ 20, 2025 ರಂದು ಸಲ್ಲಿಸಿದ ತನ್ನ ವರದಿಯಲ್ಲಿ ಹಲವು ಕೊರತೆಗಳನ್ನು ಬೆಟ್ಟುಮಾಡಿದೆ ಹಿಮಾಲಯ ಪ್ರದೇಶದ ಕಠಿಣ ಹಾದಿ, ಕ್ಷಣಕ್ಷಣಕ್ಕೂ ಬದಲಾಗುವ ವಾತಾವರಣ ಮತ್ತು ಹೆಚ್ಚುತ್ತಿರುವ ಹೆಲಿಕಾಪ್ಟರ್‌ಗಳ ಸಂಖ್ಯೆ ದೊಡ್ಡ ಸವಾಲಾಗಿದೆ ಎಂದು ಸಮಿತಿ ಹೇಳಿದೆ.ರಾಜ್ಯ ಸರ್ಕಾರದ UCADA ಮತ್ತು ಕೇಂದ್ರದ DGCA ನಡುವೆ ಜವಾಬ್ದಾರಿಗಳು ಸ್ಪಷ್ಟವಾಗಿ ಹಂಚಕೆಯಾಗಿಲ್ಲದಿರುವುದನ್ನು ಎತ್ತಿ ತೋರಿಸಿದೆ. ಪೈಲಟ್‌ಗಳಿಗೆ ಹಿಮಾಲಯದಂತಹ ಎತ್ತರದ ಬೆಟ್ಟಗುಡ್ಡಗಳಲ್ಲಿ ಹಾರಲು ವಿಶೇಷ ತರಬೇತಿ ಮತ್ತು ಸರ್ಟಿಫಿಕೇಟ್ ಕಡ್ಡಾಯವಿಲ್ಲದಿರುವುದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ.ಹಾಗೆಯೇ, ಇಷ್ಟೊಂದು ದಟ್ಟಣೆಯ ಹಾರಾಟವನ್ನು ನಿಭಾಯಿಸಲು UCADA ಬಳಿ ಸರಿಯಾದ ತರಬೇತಿ ಪಡೆದ ಸಿಬ್ಬಂದಿ ಇಲ್ಲ ಎಂಬ ಅಂಶವನ್ನೂ ವರದಿ ಹೇಳಿದೆ.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬೆಟ್ಟದ ಪ್ರದೇಶಗಳಲ್ಲಿ ಹಾರುವ ಹೆಲಿಕಾಪ್ಟರ್‌ಗಳಿಗೆ ಒಂದೇ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ತರಬೇಕು, ಪೈಲಟ್‌ಗಳಿಗೆ ಕಡ್ಡಾಯವಾಗಿ ಮೌಂಟೇನ್-ಫ್ಲೈಯಿಂಗ್ ತರಬೇತಿ ನೀಡಬೇಕು ಮತ್ತು ಡಿಜಿಸಿಎ ವತಿಯಿಂದಲೇ ಪ್ರತ್ಯೇಕ ಮೇಲ್ವಿಚಾರಣಾ ತಂಡವನ್ನು ರಚಿಸಬೇಕೆಂದು ಸಮಿತಿ ಸಲಹೆ ನೀಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

ಶಾಲೆಯಲ್ಲಿ ಅಸಾರಾಂ ಪ್ರಚಾರ; ಶಾಲಾ ಮುಖ್ಯಶಿಕ್ಷಕ ವಜಾ!

ಛತ್ತೀಸ್‌ಗಢದ ಬಲರಾಮಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ...

ಬಿಹಾರ ಶಿಕ್ಷಣ ಇಲಾಖೆಯಲ್ಲಿ ಭಾರೀ ಗೋಲ್‌ಮಾಲ್; ₹1.85 ಕೋಟಿ ಸರ್ಕಾರದ ಹಣ ಗುಳುಂ

ಬಿಹಾರದ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಂಬಳ ನೀಡಲು...