ಮಾ.3ರಿಂದ 21ರವರೆಗೆ ಪ್ರಸಕ್ತ ಸಾಲಿನ ಮೊದಲ ಅಧಿವೇಶನವನ್ನು ನಡೆಸಲು ರಾಜ್ಯ ಸರಕಾರವು ನಿರ್ಧರಿಸಿದೆ. ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಮಾ.3ರಂದು ಬೆಳಗ್ಗೆ 11 ಗಂಟೆಗೆ ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಭಾಷಣ ಮಾಡಲಿದ್ದಾರೆ.
- Advertisement -
16ನೇ ವಿಧಾನಸಭೆಯ ಆರನೇ ವಿಧಾನಮಂಡಲ ಅಧಿವೇಶನ ಇದಾಗಿದ್ದು, ಮಾ.4, 5 ಹಾಗೂ 6ರಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೆ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರ 16ನೇ ದಾಖಲೆ ಬಜೆಟ್ ಮಂಡನೆ ಇದಾಗಲಿದೆ.
ಮಾ.10 ರಿಂದ 21ರವರೆಗೆ ಸದನದ ಕಾರ್ಯಕಲಾಪಗಳು ನಡೆಯಲಿವೆ.




