ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಭೀತಿ ಸಾರ್ವಜನಿಕರಲ್ಲಿ ಶುರುವಾಗಿದೆ. ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಬಂದಿರುವ ಬರೋಬ್ಬರಿ 38 ಕಾಡಾನೆಗಳ ಹಿಂಡು ಇದೀಗ ಮೂಡಿಗೆರೆ ತಾಲೂಕಿನ ಒಂದೇ ಕಡೆ ಇರದೆ 4 ಪ್ರತ್ಯೇಕ ತಂಡಗಳಾಗಿ ಚದುರಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾಡಾನೆಗಳ ಹಾವಳಿ ಮತ್ತು ಮುಂದಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಮೂಡಿಗೆರೆ ತಾಲೂಕಿನ ಬೆಳೆಗಾರರು ಹಾಗೂ ರೈತರು ಮಹತ್ವದ ಸಭೆ ನಡೆಸಿದರು. ಈ ಸಭೆಗೆ ಅರಣ್ಯ ಇಲಾಖೆಯ ಅಧಿಕಾರಿ ಡಿ.ಎಫ್.ಒ ಬೋರಯ್ಯ ಅವರು ಕೂಡ ಆಗಮಿಸಿ ರೈತರ ಅಹವಾಲುಗಳನ್ನು ಆಲಿಸಿದರು. ಆದರೆ, ಆನೆಗಳನ್ನು ಓಡಿಸುವ ವಿಚಾರದಲ್ಲಿ ಸಭೆ ಸೇರಿದ್ದ ಬೆಳೆಗಾರರು ಮತ್ತು ರೈತರ ಮಧ್ಯೆಯೇ ಒಮ್ಮತ ಮೂಡದಿರುವುದು ಕುತೂಹಲಕ್ಕೆ ಮೂಡಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಒಂದು ತಂಡದ ರೈತರು, ಕಾಡಾನೆಗಳನ್ನು ತಕ್ಷಣವೇ ಅವು ಬಂದ ದಾರಿಯಲ್ಲೇ ಬೇಲೂರು ಕಡೆಗೆ ವಾಪಸ್ ಕಳಿಸಬೇಕು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹೆಜ್ಜೇನು ದಾಳಿಗೆ ರೈತ ಗಂಭೀರ
ಹಾಗೆಯೇ, ಸಭೆಯಲ್ಲಿ ಭಾಗವಹಿಸಿದ್ದ ಮತ್ತೊಂದು ತಂಡವು ಯಾವುದೇ ಕಾರಣಕ್ಕೂ ಆನೆಗಳನ್ನು ಮೀಸಲು ಅರಣ್ಯದ ಕಡೆಗೆ ಓಡಿಸಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಲ್ಲೇ ಎರಡು ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.



