SIR | ಬದುಕಿರುವವರನ್ನೇ ಮತಪಟ್ಟಿಯಲ್ಲಿ ಕೊಂದ ಚುನಾವಣಾ ಆಯೋಗ

Date:

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರನ್ನು ಎಎಸ್‌ಡಿಡಿಒ ಅಡಿಯಲ್ಲಿ ಚುನಾವಣಾ ಆಯೋಗ ಪಟ್ಟಿ ಮಾಡಿದೆ. ಸ್ವಂತ ನಿವಾಸದಲ್ಲೇ ಇರುವವರನ್ನು ಸ್ಥಳಾಂತರಗೊಂಡಿದ್ದಾರೆಂದು ಹಲವರ ಮತಹಕ್ಕಿಗೆ ಕುತ್ತು ತಂದಿದೆ. ಮಾತ್ರವಲ್ಲ, ಬದುಕಿರುವವರೂ ಸಾವನ್ನಪ್ಪಿದ್ದಾರೆ ಎಂದು ಪಟ್ಟಿ ಮಾಡಿ, ಜೀವಂತ ಇರುವವರನ್ನೂ ತನ್ನ ಪಟ್ಟಿಯಲ್ಲಿ ಕೊಂದಿದೆ.  ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುವ ನೆಪದಲ್ಲಿ, ನೈಜ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುತ್ತಿದೆ.

- Advertisement -

ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ರಾಮಸಾಗರ ಭಾಗದ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ರಾಮಸಾಗರ ಮತದಾರರ ಪಟ್ಟಿಯಲ್ಲಿರುವ ಆನೆ ಪ್ರಕಾಶ (Ane Praksha) ಎಂಬವರನ್ನು ಮೃತಪಟ್ಟಿದ್ದಾರೆ (ಡೆತ್‌) ಎಂದು ಆಯೋಗ ಪರಿಗಣಿಸಿದೆ. ಆನೆ ಪ್ರಕಾಶ ಅವರಿಗೆ 70 ವರ್ಷ ವಯಸ್ಸಾಗಿದೆ ಎಂಬ ಕಾರಣಕ್ಕಾಗಿ, ಅವರು ಮೃತಪಟ್ಟಿದ್ದಾರೆಂದು ಆಯೋಗ ತೀರ್ಮಾನಕ್ಕೆ ಬಂದಿದೆ. ಅವರ ಹೆಸರನ್ನು ಮತಪಟ್ಟಿಯಿಂದ ಡಿಲೀಟ್‌ ಮಾಡಲು ಎಎಸ್‌ಡಿಡಿಒ ಪಟ್ಟಿಯಲ್ಲಿ ಪಟ್ಟಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಆದರೆ, ಆನೆ ಪ್ರಕಾಶ ಅವರು ಬದುಕಿದ್ದಾರೆ. ಚುನಾವಣಾ ಆಯೋಗ ‘ಮೃತಪಟ್ಟಿದ್ದಾರೆಂದು ಪಟ್ಟಿ ಮಾಡಿರುವ ಆ ವ್ಯಕ್ತಿ ನಾನೇ ಎಂದು ಅವರು ಸಾರಿ ಹೇಳಿದ್ದಾರೆ. ಅಲ್ಲದೆ, ಅವರು ತಮ್ಮದೇ ಸ್ವಂತ ನಿವಾಸದಲ್ಲಿಯೇ ಇದ್ದೇನೆಂದು ಸ್ಪಷ್ಟವಾಗಿ ಸೂಚಿಸಿದ್ದಾರೆ. ತಮ್ಮ ಆಧಾರ್‌ ಕಾರ್ಡ್‌ಅನ್ನೂ ತೋರಿಸಿ, ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ.

ಆದರೂ, ಚುನಾವಣಾ ಆಯೋಗದ ಎಎಸ್‌ಡಿಡಿಒ ಪಟ್ಟಿಯಲ್ಲಿ ಆನೆ ಪ್ರಕಾಶ ಅವರನ್ನು ಸತ್ತಿದ್ದಾರೆ ಎಂದು ಪಟ್ಟಿ ಮಾಡಿ, ಡಿಲೀಟ್‌ ಮಾಡಿರುವುದು ಕೇವಲ ತಾಂತ್ರಿಕ ದೋಷವಲ್ಲ, ಬದಲಾಗಿ ಗಂಭೀರ ಲೋಪದೋಷವಾಗಿದೆ. ಬದುಕಿರುವ ವ್ಯಕ್ತಿಯನ್ನೇ ಸತ್ತಿದ್ದಾರೆ ಎಂದು ಪಟ್ಟಿ ಮಾಡುವ ಈ ಪ್ರಕ್ರಿಯೆಯು ಮತದಾರರ ಹಕ್ಕನ್ನು ಕಸಿದುಕೊಳ್ಳುವ ಸ್ಪಷ್ಟ ಪ್ರಯತ್ನವೂ ಆಗಿದೆ.

ಆಯೋಗದ ಎಡವಟ್ಟಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಜನಶಕ್ತಿ ಸಂಘಟನೆಯ ವಸಂತರಾಜ್ ಕಹಳೆ, “ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣ ಗೊಂದಲಕಾರಿ, ಅಸಂಬದ್ಧ ಮತ್ತು ಅಸಂವಿಧಾನಿಕವಾಗಿದೆ. ಎಎಸ್‌ಡಿಡಿಒ ಪಟ್ಟಿಯಲ್ಲಿ ಬದುಕಿರುವವರನ್ನೂ ಸತ್ತಿದ್ದಾರೆಂದು ಪಟ್ಟಿ ಮಾಡಿದೆ. ಇದಕ್ಕೆ ಜೀವಂತ ಸಾಕ್ಷಿ ಕಂಪ್ಲಿ ವಿಧಾನಸಭಾ ಕ್ಷೇತ್ರದ, ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ 1ನೇ ವಾರ್ಡ್‌ನಲ್ಲಿ ವಾಸಿಸುತ್ತಿರುವ ಆನೆ ಪ್ರಕಾಶ (ತಂದೆ: ಆನೆ ಈರಪ್ಪ). ಚುನಾವಣಾ ಆಯೋಗದ ಎಎಸ್‌ಡಿಡಿಒ ಲಿಸ್ಟ್‌ನಲ್ಲಿ ಈತ ಸತ್ತಿದ್ದಾನೆ ಎಂದು ನಮೂದಿಸಲಾಗಿದೆ. ಆದರೆ, ವಾಸ್ತವವಾಗಿ ಆತ ಬದುಕಿದ್ದು, ಇದೇ ಗ್ರಾಮದಲ್ಲಿ ಜೀವಿಸುತ್ತಿದ್ದಾನೆ. ಸಂವಿಧಾನ ನೀಡಿದ ಮೂಲಭೂತವಾದ ಮತಾಧಿಕಾರವನ್ನು ಕಸಿದುಕೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಿದವರು ಯಾರು? ಈ ಲೋಪಕ್ಕೆ ಚುನಾವಣಾ ಆಯೋಗ, ಸ್ಥಳೀಯ ಎಂಎಲ್‌ಎ, ಎಂಪಿ, ಗ್ರಾಮ ಪಂಚಾಯಿತಿ ಅಥವಾ ಬಿಎಲ್‌ಒ ಯಾರು ಹೊಣೆ? ಬದುಕಿರುವ ವ್ಯಕ್ತಿಯನ್ನೇ ಸತ್ತಿದ್ದಾನೆ ಎಂದು ಪಟ್ಟಿ ಮಾಡಿ, ಜನರ ಮತಾಧಿಕಾರವನ್ನು ಕಸಿಯುತ್ತಿರುವ ಈ ಅನ್ಯಾಯದ ವಿರುದ್ಧ ಚುನಾವಣಾ ಆಯೋಗವು ತಕ್ಷಣವೇ ಸ್ಪಷ್ಟನೆ ನೀಡಿ, ಆನೆ ಪ್ರಕಾಶ ಅವರಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.

ಮತದಾರರ ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳದೆ ಆಯೋಗವು ಎಎಸ್‌ಡಿಡಿಒ ಅಡಿಯಲ್ಲಿ ಪಟ್ಟಿ ಮಾಡಿ, ಡಿಲೀಟ್‌ ಮಾಡಲು ಮುಂದಾಗಿದೆ. ಈಗ, ಆನೆ ಪ್ರಕಾಶ ಅವರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಫಾರ್ಮ್‌ 6 ಅರ್ಜಿ ನೀಡಬೇಕೆಂದು ಚುನಾವಣಾ ಆಯೋಗ ಹೇಳುತ್ತಿದೆ.

ಈ ಲೇಖನ ಓದಿದ್ದೀರಾ?: ಮೀಸಲಾತಿಯ ಲಾಭ ಪಡೆದ ನ್ಯಾ ಸಂತೋಷ್ ಹೆಗ್ಡೆ ಮತ್ತು ಬಂಟರು

ಆಯೋಗದ ಎಡವಟ್ಟಿನಿಂದ ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಬಂದಿವವವರು ಲೋಪಗಳ ತಿದ್ದುವಿಕೆಗಾಗಿ ಫಾರ್ಮ್‌ 8 ಅನ್ನು ಸಲ್ಲಿಸಬೇಕು. ಆದರೆ, ಆಯೋಗವು ಎಲ್ಲರಿಗೂ ಫಾರ್ಮ್‌ 6 ಅರ್ಜಿ ಸಲ್ಲಿಸಬೇಕೆಂದು ಹೇಳುತ್ತಿದೆ. ಆಯೋಗ ಸೂಚನೆಯಂತೆ ಈಗಾಗಲೇ ಮತದಾರರಾಗಿರುವ ಫಾರ್ಮ್‌ 6 ಅಡಿ ಅರ್ಜಿ ಸಲ್ಲಿಸಿದರೆ, ಅವರು ಹೊಸ ಮತದಾರರಾಗಿ ಸೇರ್ಪಡೆಯಾಗಬೇಕಾಗುತ್ತದೆಯೇ ಹೊರತು, ಅಸ್ತಿತ್ವದಲ್ಲಿರುವ ಮತದಾನದ ಗುರುತು ಅಳಿಸಿ ಹೋಗುತ್ತದೆ.

ಗಮನಾರ್ಹವಾಗಿ, ಇದೇ ಎಎಸ್‌ಡಿಡಿಒ ಅಡಿಯಲ್ಲಿ ನಟ ಪ್ರಕಾಶ್‌ ರಾಜ್ ಅವರ ಹೆಸರನ್ನೂ ‘ಸ್ಥಳಾಂತರಗೊಂಡಿದ್ದಾರೆ’ ಎಂದು ಪಟ್ಟಿ ಮಾಡಲಾಗಿದೆ. ಅವರಿಗೂ ಫಾರ್ಮ್‌ 6 ಅರ್ಜಿ ಸಲ್ಲಿಸಲು ಆಯೋಗದ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ನಾನು ಈಗಾಗಲೇ ಮತದಾರನಾಗಿದ್ದು, ಫಾರ್ಮ್‌ 6 ಅಡಿ ಅರ್ಜಿ ಸಲ್ಲಿಸುವುದಿಲ್ಲ. ಫಾರ್ಮ್ 8 ಅಡಿಯಲ್ಲೇ ಅರ್ಜಿ ಸಲ್ಲಿಸುತ್ತೇನೆಂದು ಪ್ರಕಾಶ್‌ ರಾಜ್ ಹೇಳಿದ್ದಾರೆ. ಎಎಸ್‌ಡಿಡಿಒ ಅಡಿಯಲ್ಲಿ ಪಟ್ಟಿಯಾಗಿರುವ ಎಲ್ಲ ಅರ್ಹ ಮತದಾರರೂ ಫಾರ್ಮ್‌ 6 ಅರ್ಜಿ ಸಲ್ಲಿಸಬಾರದು, ಫಾರ್ಮ್‌ 8 ಅರ್ಜಿಯನ್ನೇ ಸಲ್ಲಿಸಬೇಕೆಂದು ಅವರು ಕರೆಕೊಟ್ಟಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...