ಸುಮಾರು 2.57 ಕೋಟಿ ಮೌಲ್ಯದ ಸ್ವತ್ತು ವಾಪಾಸ್ ನೀಡಿದ ಎಸ್ಪಿ ಬಿ. ನಿಖಿಲ್

Date:

ಕೋಲಾರ: ನಗರದ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸರು ಸೋಮವಾರ ಹಮ್ಮಿಕೊಂಡಿದ್ದ ಆಸ್ತಿ ವಾಪಸ್‌ ವಾರ್ಷಿಕ ಪರೇಡ್‌ನಲ್ಲಿ 533 ಪ್ರಕರಣಗಳ ಒಟ್ಟು ₹ 2.57 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿದ್ದಾರೆ.

ಈ ವರ್ಷ ಅಂದರೆ 2025ರಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳುವು ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ನಗದು, ಚಿನ್ನ, ಬೆಳ್ಳಿ, ಮೊಬೈಲ್‌, ದ್ವಿಚಕ್ರ ವಾಹನ ಹಾಗೂ ಇತರ ವಸ್ತುಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ನೇತೃತ್ವದಲ್ಲಿ ಸಂಬಂಧಿತ ಮಾಲೀಕರಿಗೆ ವಾಪಸ್‌ ನೀಡಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್‌, ‘ಕಳುವಾಗಿದ್ದ 461 ಮೊಬೈಲ್‌ ವಾಪಸ್‌ ಮಾಡಲಾಯಿತು. 1 ಕೆ.ಜಿ 813 ಗ್ರಾಂ ಚಿನ್ನ, 3 ಕೆ.ಜಿ 143 ಗ್ರಾಂ ಬೆಳ್ಳಿ, ₹ 7.62 ಲಕ್ಷ ನಗದು ಹಾಗೂ 1,460 ಕೆ.ಜಿ ಶ್ರೀಗಂಧ ಹಾಗೂ 25 ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದೇವೆ’ ಎಂದರು.

ಜಿಲ್ಲಾ ಪೊಲೀಸರ ಕಾರ್ಯವೈಖರಿಯ ವಿಮರ್ಶೆಯನ್ನು ಕೂಡ ಮಾಡಲಾಗಿದೆ. ಈ ವರ್ಷ ದಾಖಲಾದ 30 ಪ್ರಕರಣಗಳಲ್ಲಿ ₹ 1.42 ಕೋಟಿ ಮೌಲ್ಯದ 888 ಗ್ರಾಂ ಎಂಡಿಎಂಎ, 107 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದೇವೆ. ಇತರೆ ಪ್ರಕರಣಗಳಲ್ಲಿ ಕೆಲ ಮಾಲೀಕರು ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಂದಿಲ್ಲ. ಎಲ್ಲಾ ಸೇರಿದರೆ ವಶಕ್ಕೆ ಪಡೆದಿರುವ ವಸ್ತುಗಳ ಒಟ್ಟು ಮೌಲ್ಯ ₹ 4.32ಕೋಟಿ ದಾಟುತ್ತದೆ ಎಂದು ವಿವರಿಸಿದರು.

ಸೈಬರ್‌ ಅಪರಾಧ ಪ್ರಕರಣಗಳಲ್ಲಿ ₹ 34.60 ಲಕ್ಷವನ್ನು ನ್ಯಾಯಾಲಯದ ಅನುಮತಿಯೊಂದಿಗೆ ವಾಪಸ್‌ ಅವರವರ ಖಾತೆಗೆ ಹಣ ಹಾಕಿದ್ದೇವೆ. ಕಳ್ಳತನವಾಗಿದ್ದ ಮೊತ್ತದಲ್ಲಿ ಕೆಲವರು ₹ 4.28 ಲಕ್ಷ ಮೌಲ್ಯದ 57 ಗ್ರಾಂ ಒಡವೆ ಮಾಡಿಸಿಕೊಂಡಿದ್ದರು. ಅದನ್ನೂ ಬಿಡದೆ ವಶಕ್ಕೆ ಪಡೆಯಲಾಗಿದೆ ಎಂದರು.

ಇದನ್ನು ಓದಿದ್ದೀರಾ…? ಕೋಲಾರ | ರಾಜನಹಳ್ಳಿಯಲ್ಲಿ ಫೆ.8 & 9ರಂದು ವಾಲ್ಮೀಕಿ ಜಾತ್ರೆ

ವಿವಿಧ ಠಾಣೆಗಳಲ್ಲಿ ಸ್ವತ್ತು ಕಳುವು ಪ್ರಕರಣ, ಸೈಬರ್‌ ಅಪರಾಧ ಪ್ರಕರಣ, ಮಾದಕ ದ್ರವ್ಯ, ಗಾಂಜಾ, ವಾಹನ ವಶಕ್ಕೆ ಪಡೆದಿದ್ದೇವೆ. ಒಟ್ಟು ಮೌಲ್ಯ ₹ 9.09 ಕೋಟಿ ವಸ್ತುಗಳನ್ನು ವಶಕ್ಕೆ ಪಡೆದಂತಾಗಿದೆ. ಎಲ್ಲಾ ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...