ನನ್ನ ಹೊಟ್ಟೆ ಉರಿಸಲು ಅಭಿವೃದ್ಧಿ ಕಾರ್ಯ ಮಾಡಲು ಸಚಿವ ಸುಧಾಕರ್ ಮುಂದಾಗಿರುವುದು ಒಳ್ಳೆಯ ಸಂಗತಿ:ಜೆಕೆ

Date:

ಸಚಿವ ಡಾ.ಎಂ.ಸಿ ಸುಧಾಕರ್ ಕ್ಷೇತ್ರದ ಅಭಿವೃದ್ಧಿ,ಜನತೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಒಳಿತಾಗಿ ಇಂಜಿನಿಯರಿಂಗ್ ಕಾಲೇಜು ಮಾಡಿದಂತಿಲ್ಲ,ಬದಲಾಗಿ ನನ್ನ ಹೊಟ್ಟೆ ಉರಿಯಾಗಲೆಂದು ಮಾಡಿದ್ದಾರೆಂದು ಹೇಳಿರುವುದು ಸಂತೋಷವಾಗಿದೆ.ನನ್ನ ಭಯದಿಂದಲಾದರೂ ಸಾವಿರಾರು ಕೋಟಿ ರೂ.ಅನುದಾನ ತಂದು ಅಭಿವೃದ್ಧಿಪಡಿಸುತ್ತಿರುವುದು ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

- Advertisement -

ಚಿಂತಾಮಣಿ ನಗರ ಹೊರವಲಯದ ಜೆಕೆ ಭವನದಲ್ಲಿ ಜೆಡಿಎಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಜೆಡಿಎಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಉದ್ಘಾಟನೆ ಮಾಡಿ ಮಾತನಾಡಿ ಡಿಸೆಂಬರ್ ನಂತರ ಮುಂದಿನ ವರ್ಷದಲ್ಲಿ ಸಾಲು ಸಾಲು ಚುನಾವಣೆಗಳು ಬರಲಿದ್ದು ಕಾರ್ಯಕರ್ತರನ್ನು ಗ್ರಾಮ ಪಂಚಾಯಿತಿ,ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ,ಹಾಗೂ ನಗರಸಭೆ,ಎಪಿಎಂಸಿ,ಹಾಲು ಉತ್ಪಾದಕರ ಸಂಘ, ಸೊಸೈಟಿಗಳು ಸೇರಿದಂತೆ ಹಲವು ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ನಿಷ್ಟಾವಂತ ಕಾರ್ಯಕರ್ತರನ್ನು ಗೆಲ್ಲಿಸಿ ಅವರಿಗೂ ಅಧಿಕಾರವನ್ನು ಹಂಚಬೇಕಾಗಿದೆ ಇದರೊಂದಿಗೆ ಗೆದ್ದ ನಾವು ಅಲ್ಲಿಗೆ ನಿಲ್ಲಬಾರದು ಪಕ್ಷದ ಮುಂಬರುವ 50 ವರ್ಷಗಳ ನಿರಂತರ ಗೆಲುವು ಸಾಧಿಸುವಂತಹ ಕಾರ್ಯವನ್ನು ಮಾಡಬೇಕೆಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ;...

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ...

ಜೆಡಿಎಸ್ ಪಕ್ಷ ಸ್ಥಾಪನೆಯಾಗಿ 25 ವರ್ಷಗಳು ಕಳೆಯುತ್ತಿರುವ ಹಿನ್ನಲೆಯಲ್ಲಿ,ನವೆಂಬರ್ 29 ರಂದು ಚೆಂತಾಮಣಿ ನಗರದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು,ಆ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಚಿಂತಾಮಣಿಯಲ್ಲಿ ಜೆಕೆ ಕೃಷ್ಣಾರೆಡ್ಡಿ ಇರುವುದರಿಂದ ಸಾವಿರಾರು ಕೋಟಿ ಹಣ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಇಲ್ಲವೆಂದರೆ ಸಚಿವರು ಬೆಂಗಳೂರಿನಲ್ಲಿ ನಿದ್ದೆಗೆ ಜಾರುತ್ತಿದ್ದರೆಂದರು.

ಸಚಿವರು ಮತ್ತಷ್ಟು ಹಣವನ್ನು ತಂದು ಅಭಿವೃದ್ಧಿ ಕೆಲಸವನ್ನು ಮಾಡಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಲೆಂದರು.ಮಸ್ತೇನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಒಂದು ಮರಕ್ಕೆ 24 ಸಾವಿರ ಪರಿಹಾರವನ್ನು ಒದಗಿಸುತ್ತಿದ್ದು ಆದರೆ ಈಗ ಅದು 10 ಸಾವಿರ ರೂಪಾಯಿಗಳಿಗೂ ಕಡಿಮೆ ಪರಿಹಾರವನ್ನು ನೀಡಿ ರೈತರಿಗೆ ಅನ್ಯಾಯ ಮಾಡುತ್ತಿರುವುದು ನಾನಲ್ಲ ನೀವೆಂದು ಸಚಿವರ ವಿರುದ್ಧ ಕಿಡಿಕಾಡಿದರು.

ಸಚಿವ ಡಾ.ಎಂ.ಸಿ ಸುಧಾಕರ್ ರವರು ನನ್ನ ಹೊಟ್ಟೆ ಉರಿಸಲೆಂದು ಇಂಜನೀಯರಿಂಗ್ ಕಾಲೇಜು ತಂದಿದ್ದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದಾಗಿ ತಿಳಿಸಿದ್ದು, ಸಚಿವರಿಗೆ ಕ್ಷೇತ್ರದ ಅಭಿವೃದ್ಧಿ,ಜನತೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಒಳಿತಾಗಿ ಇಂಜನೀಯರಿಂಗ್ ಕಾಲೇಜು ತಂದಿಲ್ಲ.ಬದಲಾಗಿ ಚಿಂತಾಮಣಿಯಲ್ಲಿ ಜೆಕೆ ಕೃಷ್ಣಾರೆಡ್ಡಿರವರು ಇದ್ದಾರೆ ಎಂಬ ಭಯದಿಂದ ಇಂಜನೀಯರಿಂಗ್ ಕಾಲೇಜು ಹಾಗೂ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಗರಸಭಾ ಸದಸ್ಯ ಆಗ್ರಹಾರ ಮುರಳಿ ಮಾತನಾಡಿ ಕಾರ್ಯತಂತ್ರವನ್ನು ರೂಪಿಸುವುದೇ ಬೇರೆ ಕಾರ್ಯಕರ್ತರ ಪಡೆಯನ್ನು ಹೊಂದಿರುವುದೇ ಬೇರೆಯಾಗಿದ್ದು ಕಳೆದ 20 ವರ್ಷಗಳಿಂದ ಚುನಾವಣಾ ಚಾಣುಕ್ಯನಂತಾಗಿದ್ದ ಪ್ರಶಾಂತ್
ಭೂಷನ್ ಬಿಹಾರದ ಚುನಾವಣೆಯಲ್ಲಿ ತಮ್ಮ ಸ್ವಂತ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲವೆಂದರು.ಮುಂಬರುವ ಚುನಾವಣೆಗಳಿಗೂ ಮೊದಲು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಸಿದ್ಧವಾಗಿದ್ದು,ಸತ್ತವರು.ಊರು ಬಿಟ್ಟಿರುವ ಮತ್ತು ಎರಡು ಕಡೆ ವೋಟ್ ಇರುವವರನ್ನು ಡಿಲಿಟ್ ಮಾಡುತ್ತಿದ್ದು ಅಂತಹ ಸಂದರ್ಭದಲ್ಲಿ ಕಾರ್ಯಕರ್ತರು ಇವೆಲ್ಲವನ್ನು ಗಮನಿಸಬೇಕು ಎಂದರು.

ಇದನ್ನು ಓದಿದ್ದೀರಾ..? ಮೈದಾನ ಸಿದ್ಧಪಡಿಸಿ ಕೊಡುವ ಭರವಸೆ ನೀಡಿದ ಡಿಸಿಪಿ ಡಿ.ದೇವರಾಜ್‌

ಚಿಕ್ಕಬಳ್ಳಾಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ,ಗೌರಿಬಿದನೂರು ನರಸಿಂಹಮೂರ್ತಿ,ಸೀಕಲ್ ಶ್ರೀನಿವಾಸಗೌಡ ಮಾತನಾಡಿದರು.ರಾಜ್ಯ ಯುವ ಘಟಕದ ಉಪಾಧ್ಯಕ್ಷ ಸಂತೇಕಲ್ಲಹಳ್ಳಿ ಪ್ರಭಾಕರ್,ಚಿಂತಾಮಣಿ ತಾಲೂಕು ಜೆಡಿಎಸ್ ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರಾರೆಡ್ಡಿ, ಅಬ್ದುಗುಂಡು ಶ್ರೀನಿವಾಸರೆಡ್ಡಿ,ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಗುಡೇ ಶ್ರೀನಿವಾಸರೆಡ್ಡಿ,ದೇವಳಂ ಶಂಕರ್,ಟಮೋಟ್ ಗೌಸ್, ಅಲ್ಲಾಬಕಾಷ್,ಮಂಜುನಾಥ್,ವೆಂಕಟರವಣಪ್ಪ,ಶ್ರೀನಿವಾಸರೆಡ್ಡಿ, ಪ್ರಕಾಶ್.ಎಸ್.ಸಿ ಘಟಕ ಜಿಲ್ಲಾಧ್ಯಕ್ಷ ಮಾದಮಂಗಲ ಅಂಜಿ,ಅಬ್ದುಲ್ ಸಮದ್,ಅಲ್ಲಾಬಕಾಶ್,ಜಮೀಲ್ ಪಾಷಾ,ಶಫಿ,ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | 2018ರಿಂದ ಬಾಕಿ ಉಳಿದ ನಿವೇಶನ ಹಕ್ಕು: ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ

ವಾಮಂಜೂರು ಮಂಗಳಜ್ಯೋತಿಯ ಕೊರಗ ಸಮುದಾಯದ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಾಗೂ...

ತರೀಕೆರೆ | ಅ. 15ರ ವರೆಗೆ ಕೈಗಾರಿಕಾ ತರಬೇತಿಗೆ ಅವಕಾಶ 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ...

ಮಂಗಳೂರು | ಬರದ ಸಂಕಷ್ಟದ ನಡುವೆ ಕಂಬಳ ಬೇಡ: ಕೋಣಗಳ ಮಾಲೀಕರಿಗೆ ಎ.ಟಿ. ರಾಮಸ್ವಾಮಿ ಮನವಿ

ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ರೈತರು ಹಾಗೂ...

ಚಿಕ್ಕಮಗಳೂರು | ಮಹಿಳೆಗೆ ದೌರ್ಜನ್ಯ ಆರೋಪದಡಿ ಅರ್ಚಕ ಬಂಧನ 

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದ ಅರ್ಚಕ ಸತೀಶ್ ಪಾತ್ರಿ ಎಂಬಾತ ದೆವ್ವ...