ಪಟಾಕಿ ಚೀಟಿ ಮೋಸ ಆರೋಪಿ ಭರತ್ ವಿರುದ್ಧ ಎಫ್‍ಐಆರ್ ಸಂಕಷ್ಟದಲ್ಲಿ ಬ್ರೊಕರ್‍ಗಳು

Date:

ಬೇತಮಂಗಲ: ಬಂಗಾರಪೇಟೆ ಅಮರಾವತಿ ನಿವಾಸಿ ಭರತ್ ಎಂಬುವರು ದೀಪಾವಳಿ ಹಬ್ಬಕ್ಕೆ ಪಟಾಕಿ ಮತ್ತು ದಿನಸಿ ಸಾಮಗ್ರಿಗಳನ್ನು ಕೊಡಲಾಗುವುದು ಎಂದು ನಂಬಿಸಿ ತಾಯಿ ಚೌಡೇಶ್ವರಿ ದೀಪಾವಳಿ ಸಾಮಗ್ರಿಗಳು ಎಂಬ ಹೆಸರಿನಲ್ಲಿ ಚೀಟಿ ನಡೆಸಿಕೊಂಡು ಬಂದಿದ್ದು ಅವರನ್ನು ನಂಬಿ ನಮ್ಮ ಪರಿಚಯಸ್ಥರಿಂದ ಚೀಟಿಯಲ್ಲಿ ಸೇರಿಸಿ ಪ್ರತಿ ತಿಂಗಳು 600 ರೂ ನಂತೆ ಹಣವನ್ನು ನೀಡುತ್ತಾ ಬಂದಿದ್ದೇವು ವರ್ಷಕ್ಕೆ 6000 ಸಾವಿರ ಹಣವನ್ನು ನಮ್ಮಿಂದ ಪಡೆದು ಹಬ್ಬದ ಸಾಮಗ್ರಿಗಳನ್ನು ನೀಡುವುದಾಗಿ ನಂಬಿಸಿ ಇಂದಿನವರೆಗೂ ಹಬ್ಬದ ಸಾಮಗ್ರಿಗಳನ್ನು ನೀಡದೆ ವಂಚಿಸಿದ್ದಾರೆ ನಮ್ಮಿಂದ ಕೋಟ್ಯಾಂತರ ಹಣವನ್ನು ಪಡೆದು ಹಬ್ಬ ಬಂದರು ನಮಗೆ ನೀಡಬೇಕಿದ್ದ ಹಬ್ಬದ ಸಾಮಗ್ರಿಗಳನ್ನು ನೀಡದೆ ವಂಚಿಸಿದ್ದು ನಮ್ಮನ್ನು ನಂಬಿ ಚೀಟಿ ಹಾಕಿದವರು ನಮ್ಮ ಬೆನ್ನ ಹಿಂದೆ ಬಿದ್ದು ನಾವು ಏನು ಮಾಡಬೇಕು ಎಂದು ತೋಚದೆ ತಲೆ ಮೇಲೆ ಕೈ ಹೋತ್ತು ಕುಳಿತಿದ್ದೇವೆ ಎಂದು ಚೀಟಿ ಕಟ್ಟಿಸಿದ್ದ ಬ್ರೋಕರ್ ಬೇತಮಂಗಲ ರವಿಚಂದ್ರನ್ ಅಲವತ್ತುಕೊಂಡರು.

- Advertisement -

ಸೈಬರ್ ಕ್ರೈಮ್ ಪೊಲೀಸ್ ಠಾಣೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರೋಕರ್ ರವಿಚಂದ್ರನ್ ನಾವು ಬಡವರು ಚೀಟಿದಾರರನ್ನು ಸಂಖ್ಯೆ ಹೆಚ್ಚಿಸಿ ಕೊಟ್ಟರೆ ನಿಮಗೆ ಕಮಿಷನ್ ಹಣ ನೀಡಲಾಗುವುದು ಎಂದು ಕಮಿಷನ್ ಹಣದಾಸೆ ತೊರಿಸಿ ನಮ್ಮಿಂದ ನೂರಾರು ಚೀಟಿದಾರರನ್ನು ಸೇರಿಸಿ ಹಣ ಪಡೆದು ನಮ್ಮನ್ನು ವಂಚಿಸಿದ್ದಾರೆ ಚೀಟಿ ಕಟ್ಟಿದದವರು ನಮ್ಮ ಮನೆ ಬಳಿ ಬಂದು ಗಲಾಟೆ ಮಾಡುತ್ತಿರುವುದರಿಂದ ನಾವು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವು ನಂತರ ಪೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ತಂದ ನಂತರ ಅವರು ಬಂಗಾರಪೇಟೆ ಠಾಣೆಯಿಂದ ಕೆಜಿಎಫ್ ಸೈಬರ್ ಕ್ರೈಮ್ ಠಾಣೆಗೆ ಕೇಸ್ ವರ್ಗಾಯಿಸಿದ್ದು ಈಗಾಗಲೇ ಕೇಸ್ ದಾಖಲಿಸಿಕೊಂಡಿರುವ ಪೊಲೀಸ ಅಧಿಕಾರಿಗಳು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ ಆದ್ದರಿಂದ ನಮಗೆ ವಂಚನೆ ಮಾಡಿದ ಭರತ್‍ರನ್ನು ಬಂದಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಆದ್ದರಿಂದ ವಂಚನೆಗೆ ಒಳಗಾದವರು ಯಾರು ಸಹ ಆತಂಕಪಡುವ ಅವಶ್ಯಕತೆ ಇಲ್ಲ ನಿಮ್ಮ ಹಣವನ್ನು ಪೊಲೀಸರು ವಸೂಲಿ ಮಾಡಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿ ಮಾಡಲಿದ್ದಾರೆ ಎಂದು ಹೇಳಿದರು.

ಇದನ್ನು ಓದಿದ್ದೀರಾ..?ಮತ ಕಳ್ಳತನ ಬಿಜೆಪಿ ಆಯೋಗ ಶಾಮೀಲು: ಶಾಸಕ ಕೊತ್ತೂರು ಮಂಜುನಾಥ್ ಆರೋಪ

ಈ ವೇಳೆ ಸುಕನ್ಯ,ನಾರಾಯಣಸ್ವಾಮಿ,ನಾರಾಯಣಮ್ಮ, ಲಕ್ಷ್ಮಿದೇವಿ ಹಾಗೂ ಇತರರು ಹಾಜರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ವಸತಿ ಯೋಜನೆಗಳ ಪ್ರಗತಿಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ...

ಬಾಗೇಪಲ್ಲಿ | ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಬಗ್ಗೆ ಅಸಕ್ತಿ ಬೆಳೆಸಲು ಯುವ ಸಂಸತ್‌ ಕಾರ್ಯಕ್ರಮ ಸಹಕಾರಿ:- ತಹಶಿಲ್ದಾರ್ ಮನೀಷಾ ಎನ್ ಪತ್ರಿ

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವದ ಯಶಸ್ಸಿಗೆ ಯುವಜನರ ಪಾತ್ರ...

ಸ್ವಚ್ಛ ಮೈಸೂರು ನಿರ್ಮಾಣಕ್ಕೆ ನ್ಯಾಯಾಂಗ-ಪಾಲಿಕೆ ಸಾಥ್

ಮೈಸೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಸುವ ಉದ್ದೇಶದಿಂದ ನ್ಯಾಯಾಂಗ ಇಲಾಖೆ...