ಕರಡಕಲ್ ಹೊರ ವಲಯದಲ್ಲಿ ₹35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಶಾಸಕ ಮಾನಪ್ಪ ವಜ್ಜಲ ಅಡ್ಡಿಪಡಿಸುತ್ತಿದ್ದಾರೆ’ ಎಂದು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ಅಧಿಕಾರದ ಅವಧಿಯಲ್ಲಿ 100 ಹಾಸಿಗೆ ಸಾಮಾರ್ಥ್ಯದ ತಾಯಿ-ಮಕ್ಕಳ ಆಸ್ಪತ್ರೆ ಮಂಜೂರು ಮಾಡಿಸಿ, ಕರಡಕಲ್ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿದೆ. ಆಸ್ಪತ್ರೆ ಕಟ್ಟಡ ಸಿದ್ಧಗೊಂಡು ಈಗಾಗಲೇ ವರ್ಷ ಕಳೆದಿದೆ. ಆದರೆ ಉದ್ಘಾಟನೆಗೆ ಶಾಸಕ ಮಾನಪ್ಪ ವಜ್ಜಲ ಅವರಿಗೆ ಆಸಕ್ತಿಯಿಲ್ಲ.
ತಾಲ್ಲೂಕಿನ ಜನರು, ಸಂಘಟನೆಗಳು ನನಗೆ ಒತ್ತಾಯಿಸಿದ್ದು. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾನೇ ಕಾಳಜಿವಹಿಸಿ ಆರೋಗ್ಯ ಸಚಿವರಿಂದ ಸೆ. 29ರಂದು ಉದ್ಘಾಟನೆ ನಿಗದಿಗೊಳಿಸಲಾಗಿತ್ತು. ಆದರೆ ವಿಧಾನ ಪರಿಷತ್ ಸದಸ್ಯ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದ್ದರಿಂದ ಮುಂದೂಡಲಾಯಿತು. ಬಳಿಕ ಆರೋಗ್ಯ ಸಚಿವರನ್ನು ಭೇಟಿ ಮಾಡಿ ನ. 29ರಂದು ಮತ್ತೆ ಸಮಯ ತೆಗೆದುಕೊಂಡಿದ್ದೆ, ಆದರೆ ಶಾಸಕ ಮಾನಪ್ಪ ವಜ್ಜಲ ಅವರ ವೈಯಕ್ತಕ ಹಿತಾಸಕ್ತಿ, ರಾಜಕೀಯ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ತಾಲ್ಲೂಕಿಗೆ ಬಂದರೆ ಕಾನೂನು ಸುವ್ಯವಸ್ಥೆ ಸಚಿವರು ತಾಲ್ಲೂಕಿಗೆ ಬಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ.
ಹೀಗಾಗಿ ತಾಲ್ಲೂಕಿಗೆ ಬರೋದು ಬೇಡ ಎಂದು ಅಧಿಕಾರಿಗಳ ಮುಖಾಂತರ ಸಚಿವರಿಗೆ ಹೇಳಿದ್ದರಿಂದ ಸಚಿವರು ಲಿಂಗಸುಗೂರು ಪ್ರವಾಸ ರದ್ದುಗೊಳಿಸಿ ಮಸ್ಕಿ, ಮಾನ್ವಿ ಹಾಗೂ ರಾಯಚೂರು ಪ್ರವಾಸ ನಿಗದಿ ಮಾಡಿದ್ದಾರೆ. ಸಚಿವರು ಪಕ್ಕದ ತಾಲ್ಲೂಕು ಮಸ್ಕಿ, ಮಾನ್ವಿಗೆ ಬರುತ್ತಾರೆ. ಆಗ ಕಾನೂನು ಸುವ್ಯವಸ್ಥೆ ಹಾಳಾಗುವುದಿಲ್ಲ. ಆದರೆ ಲಿಂಗಸುಗೂರಿಗೆ ಬಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಾ? ಎಂದು ಆರೋಪಿಸಿದರು.’
ಶಾಸಕರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಸಮಾರಂಭ ನಡೆಯುತ್ತೆ, ನನ್ನ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯೋಲ್ಲ. ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು. ಮುಂದೆ ಜಿ.ಪಂ, ತಾ.ಪಂ ಚುನಾವಣೆ ನೀತಿ ಸಂಹಿತೆ ಬರುವುದರಿಂದ ಉದ್ಘಾಟನೆ ಕಾರ್ಯ ಮತ್ತೆ ನನೆಗುದಿಗೆ ಬೀಳುವ ಮೂಲಕ ಕೋಟ್ಯಾಂತರ ವೆಚ್ಚದ ಕಟ್ಟಡ ಹಾಳಾಗುವಂತೆ ಶಾಸಕ ವಜ್ಜಲ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಕಳೆದ ಮೂರೂವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಆದರೆ ಜನರ ಸೇವೆ ಮಾಡಲೆಂದು ಕ್ಷೇತ್ರದ ಜನ ಮಾನಪ್ಪ ವಜ್ಜಲ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಶಾಸಕ ವಜ್ಜಲ್ ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಮುದಕಪ್ಪ ನೀರಲಕೇರಾ, ಉಮೇಶ ಹುನಕುಂಟಿ, ಸಂಜೀವಪ್ಪ ಹುನಕುಂಟಿ, ಜೀವನ ಬಾಳೇಗೌಡ, ಅಮರೇಶ ಹೆಸರೂರು ಇನ್ನಿತರಿದ್ದರು.



