ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಲ್ಲೂಕಿನ ಹುಡಾ ಗ್ರಾಮದ ಖಾಸಗಿ ಬ್ಯಾಂಕ್ ಉದ್ಯೋಗಿ ಮೃತಪಟ್ಟ ಘಟನೆ ಜರುಗಿದೆ.
ಮೃತ ದುರ್ದೈವಿ ಶಿವಶಂಕರ ಕರಿಯಪ್ಪ (33) ಎನ್ನಲಾಗಿದೆ. ಅವರು ಎಂದಿನಂತೆ ಬ್ಯಾಂಕ್ ಕೆಲಸ ಮುಗಿಸಿಕೊಂಡು, ಸಂಜೆ ಸಿಂಧನೂರಿನಿಂದ ಹುಡಾ ಗ್ರಾಮಕ್ಕೆ ಗೆಳೆಯನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಗಂಗಾವತಿ ಮಾರ್ಗವಾಗಿ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಚಕ್ರದಡಿ ಬಿದ್ದು ಮೃತಪಟ್ಟಿದ್ದಾರೆ.
ಹಿಂಬದಿ ಸವಾರ ಅಸ್ಮಿತ್ ಸಾಬ್ ಮೆಹಬೂಬ್ ಸಾಬ್ ಹುಡಾ ಅವರ ಬಲಗಾಲಿನ ಮೂಳೆ ಮುರಿದಿದ್ದು, ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ ಭಯದಲ್ಲಿ ವಿದ್ಯಾರ್ಥಿಗಳು!
ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಸುವಾರ್ತಾ ತಿಳಿಸಿದ್ದಾರೆ.



