ಹಳೆ ಬಟ್ಟೆ, ಮರುಬಳಕೆಯ ವಸ್ತುಗಳ ಸಂಗ್ರಹ ಕೇಂದ್ರ ತೆರೆದ ಬಿಬಿಎಂಪಿ

Date:

ಹಳೆಯ ಬಟ್ಟೆಗಳು, ಆಟಿಕೆಗಳು, ವಿದ್ಯುತ್ ವಸ್ತುಗಳು ಮತ್ತು ಇತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡುವುದು ಎಂದು ಹಲವರಲ್ಲಿ ಕಾಡುತ್ತಿರುತ್ತದೆ. ಕಸಕ್ಕೆ ಹಾಕಿಬಿಡುವುದೇ ಎಂದೂ ಕೆಲವರು ಚಿಂತಿಸುತ್ತಿರುತ್ತಾರೆ. ಇದೀಗ, ಅದಕ್ಕೊಂದು ಪರಿಹಾರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದ್ದು, ಅವುಗಳ ಸಂಗ್ರಹಣೆ ಸೇವೆಯನ್ನು ಒದಗಿಸಲು ಮುಂದಾಗಿದೆ.

ಸ್ವಚ್ಛ ಭಾರತ್ ಮಿಷನ್‌ನ ಭಾಗವಾಗಿ ಬಿಬಿಎಂಪಿ ನಗರದಾದ್ಯಂತ 48 ಮರುಬಳಕೆ ಸಂಗ್ರಹಣೆ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕ್ರಮವು ‘ಮೈ ಲೈಫ್, ಮೈ ಕ್ಲೀನ್ ಸಿಟಿ’ ಅಭಿಯಾನದ ಭಾಗವಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಸಂಗ್ರಹಣಾ ಕೇಂದ್ರಗಳು ಜೂನ್ 5 ರವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಕಾರ್ಯನಿರ್ವಹಿಸುತ್ತವೆ. ನಗರದ ನಾಗರಿಕರು, ಶಿಕ್ಷಣ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ತಮ್ಮ ಬಳಿ ಇರುವ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಈ ಕೇಂದ್ರಗಳಿಗೆ ನೀಡಬಹುದು ಎಂದು ಪಾಲಿಕೆ ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಸ್ತುಗಳನ್ನು ಕೊಡುಗೆ ನೀಡುವವರಿಗೆ ಇ-ಪ್ರಮಾಣಪತ್ರ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯ ವಸ್ತುಗಳನ್ನು ನೀಡುವವರಿಗೆ ಉಡುಗೊರೆ ಜೊತೆಗೆ ಬಹುಮಾನ ನೀಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

ಈ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಚೀಲಗಳು, ಆಟಿಕೆಗಳು, ಹಳೆಯ ಬಟ್ಟೆಗಳು, ಪುಸ್ತಕಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಸಿಪಿಐಎಂ ಚುನಾವಣಾ ಪ್ರಣಾಳಿಕೆ ಬಿಡುಗಡೆ; ಭಾರತ ಉಳಿಸುವಂತೆ ಮತದಾರರಲ್ಲಿ ಮನವಿ

ಕಡುಭ್ರಷ್ಟ ಮತ್ತು ಕೋಮುವಾದಿ ಬಿಜೆಪಿ ಮತ್ತದರ ಮಿತ್ರ ಪಕ್ಷಗಳನ್ನು ಈ ಲೋಕಸಭಾ...

ಸಂವಿಧಾನ ರಕ್ಷಣೆಗೆ ಸ್ಲಂ ಜನರ ಮತ; ಬೈಕ್ ರ‍್ಯಾಲಿ ಸಮಾರೋಪ

ಜಾತಿ ಜನಗಣತಿ ಮೂಲಕ ಸಂಪತ್ತನ್ನು ಬಡವರಿಗೆ ಹಂಚಿಕೆ ಮಾಡುವುದೇ ಕಾಂಗ್ರೇಸ್‌ನ ಗುರಿ....

ಬೆಂಗಳೂರು | ಅಗ್ನಿ ಅವಘಡ: ₹5 ಕೋಟಿ ಮೌಲ್ಯದ ಬಟ್ಟೆ, 40 ಬೈಕ್ ಭಸ್ಮ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್​ ಕಂಟ್ರಿ ರೋಡ್​​ನಲ್ಲಿರುವ ಟಿಂಬರ್​ ಯಾರ್ಡ್​ನಲ್ಲಿ...

ಬೀದರ್‌ | ಒಳಮೀಸಲಾತಿ ಹೆಸರಿನಲ್ಲಿ ಬಿಜೆಪಿ ಮೋಸದಾಟ : ಬಸವರಾಜ ಕೌತಾಳ್

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಒಳಮೀಸಲಾತಿ ಹೆಸರಿನಲ್ಲಿ ದಲಿತರೊಂದಿಗೆ ಮೋಸದಾಟ ಆಡುತ್ತಿದೆ ಎಂದು...