ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

Date:

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.

ಗದಗ ಪಟ್ಟಣದ ಹೊರವಲಯದಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಗಾಂಧೀಜಿ ಅವರ ತತ್ವ, ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ, ಜನ ಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಸಬರಮತಿ ಆಶ್ರಮದ ಮೂಲಕ ನಡೆಯುತ್ತಿದೆ.

- Advertisement -

ಮಹಾತ್ಮ ಗಾಂಧೀಜಿ ಅವರು ತಮ್ಮ ಹೋರಾಟದ ಭಾಗವಾಗಿದ್ದ ಗುಜರಾತಿನ ಸಬರಮತಿ ಆಶ್ರಮದ ಪ್ರತಿಕೃತಿ ಯನ್ನು ವಿವಿ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದು, ಅವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಯುವ ಪೀಳೆಗೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಆರಂಭ ಮಾಡುವಾಗ ಗಾಂಧೀಜಿ ಅವರ ಸಬರಮತಿ ಆಶ್ರಮ ಇರಬೇಕು ಎನ್ನುವ ಆಶಯವೂ ಇತ್ತು. ಹಾಗೆ ಗಾಂಧೀಜಿಯವರು 1920 ನವಂಬರ್ 11ರಂದು ಮಹಾತ್ಮ ಗಾಂಧೀಜಿ ಅವರು ಗದಗಿಗೆ ಭೇಟಿ ನೀಡಿದ್ದರು. ಈ ಐತಿಹಾಸಿಕ ಭೇಟಿಗೆ ನೂರು ವರ್ಷ ತುಂಬಿದ ನೆನಪಿಗಾಗಿ, 2020 ನವಂಬರ್‌ 11ರಂದು ವಿವಿ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ಕುಲಪತಿ ಪ್ರೊ.ಡಾ. ಸುರೇಶ ವಿ. ನಾಡಗೌಡರ ಹೇಳಿದ್ದಾರೆ.

d5205b18 6189 43ca b63d 04c621075c0e

ವಿಶೇಷವಾಗಿ ಈ ಸಬರಮತಿ‌ ಆಶ್ರಮದಲ್ಲಿ ಪ್ರಾರ್ಥನಾ ಮಂದಿರ, ಕಸ್ತೂರಿ‌ಬಾ ಮಂದಿರ, ನಯೀತಾಲೀಮ್ ಮಂದಿರ, ಅಡುಗೆ ಮನೆ, ದ್ಯಾನ ಮಂದಿರ, ಗ್ರಂಥಾಯಲ ಒಳಗೊಂಡಿದೆ. ಗಾಂಧೀಜಿ ಅವರ ಧ್ಯಾನಸ್ಥ ಸ್ಥಿತಿಯ ಭವ್ಯ ಪ್ರತಿಮೆ, ಗಾಂಧೀಜಿ ಅವರ ಬ್ಯಾಲದ ಜೀವನದಿಂದ ಹೋರಾಟದ ಬದುಕಿನ ಪ್ರಮುಖ ಘಟನಾವಳನ್ನು‌ ಬಿಂಬಿಸುವ 100 ವಿಶೇಷ ಛಾಯಾಚಿತ್ರಗಳ ಪ್ರದರ್ಶನ, ಗಾಂಧೀಜಿ ಜೀವನ ಕುರಿತಾದ 500ಕ್ಕೂ ಹೆಚ್ಚು ಕೃತಿಗಳಿರುವ ಗ್ರಂಥಾಲಯ, 11 ಮುಖ್ಯ ಮೌಲ್ಯಾಧಾರಿತ ವಿಚಾರಗಳು, ಗಾಂಧೀಜಿ ಅವರ ಭಾಷಣಗಳು, ಭಜನೆ ಸೇರಿದಂತೆ ಗಾಂಧೀಜಿ ಜೀವನ ಆಧಾರಿತ ಆಡಿಯೊ ವಿಡಿಯೊ ಪ್ರದರ್ಶನ, ಗಾಂಧೀಜಿ ಅವರು ಬಳಸುತ್ತಿದ್ದ ಚರಕ, ಕನ್ನಡಕ, ವಾಂಕಿಂಗ್ ಸ್ಟಿಕ್, ಪೆನ್ ಮುಂತಾದ ವಸ್ತುಗಳ ಪ್ರತಿರೂಪಗಳನ್ನು ಪ್ರದರ್ಶನಕ್ಕೆ ಕಲ್ಪಿಸಲಾಗಿದೆ.

769ef328 78a3 488c ae21 7c804584a17c

ವಿವಿ ಪಠ್ಯಕ್ರಮದಲ್ಲಿ ಗಾಂಧೀಜಿ ಅವರ ಚಿಂತನೆಗಳನ್ನು‌ ಅಳವಡಿಸಿದ್ದರಿಂದ ವಿದ್ಯಾರ್ಥಿಗಳು ಆಶ್ರಮ ಗ್ರಂಥಾಲಯಕ್ಕೆ ಭೇಟಿ ನೀಡಿ, ಗಾಂಧೀಜಿಯವರ ಚಿಂತನೆಗಳನ್ನೊಳಗೊಂಡ ಪುಸ್ತಕಗಳನ್ನು ಓದುವರು.

“ಪ್ರತಿ ತಿಂಗಳು ಹನ್ನೊಂದನೆ ತಾರೀಕಿನಂದು ಆಶ್ರಮದಲ್ಲಿ ಚಿಂತನ-ಮಂತನ ಕಾರ್ಯಕ್ರಮ ಮಾಡಲಾಗುವುದು. ಗಾಂಧೀಜಿ ಅವರ ಬಗ್ಗೆ ಅರಿತವರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಅದ್ಯಾಪಕರು ಹಾಗೂ ಜನ ಸಾಮಾನ್ಯರು ಭಾಗವಹಿಸಿ, ಗಾಂಧೀಜಿ ಅವರ ಚಿಂತನೆಗಳನ್ನು ತಿಳಿದುಕೊಳ್ಳುವರು” ಎಂದು ಕುಲಪತಿ ಹೇಳುವರು.

ಕರ್ನಾಟಕದಲ್ಲಿ ಎರಡು ಸಬರಮತಿ ಆಶ್ರಮಗಳ: ಗಾಂಧೀಜಿ ಅವರಿಗೆ ಪ್ರೇರಣೆ ಆಗಿದ್ದ ಗುಜರಾತಿನ ಸಬರಮತಿ ಆಶ್ರಮ ಪ್ರತಿಕೃತಿಗಳು ಕರ್ನಾಟಕದಲ್ಲಿ ಎರಡು ಇವೆ. ಒಂದು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಬರಮತಿ‌ ಆಶ್ರಮವಿದೆ. ಇನ್ನೊಂದು‌ ಗದಗಿನ ಕಪ್ಪತಗುಡ್ಡದ ಸಾಲು, ನಾಗಾಗಿ ಗುಡ್ಡದ ವಿಶಾಲ ಪರಿಸರದ ನಡುವೆ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಬರಮತಿ ಆಶ್ರಮವಿದೆ.

ಸಾರ್ವಜನಿಕರಿಗೆ ಮುಕ್ತ ಅವಕಾಶ:
ವಿ ವಿ ಆವರಣದಲ್ಲಿ ಇರುವ ಸಬರಮತಿ ಆಶ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಗದಗ ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಜೆ ದಿನಗಳಲ್ಲಿ, ಸಾರ್ವಜನಿಕರು ಪ್ರವಾಸದ ಭಾಗವಾಗಿ ಸಾಕಷ್ಟು ಜನರು ಆಶ್ರಮಕ್ಕೆ ಭೇಟಿ ನೀಡುವರು. ಗಾಂಧೀಜಿ ಅವರ ಛಾಯಾ ಚಿತ್ರಗಳನ್ನು, ತತ್ವ ವಿಚಾರಗಳನ್ನು ತಿಳಿದುಕೊಳ್ಳುವರು. ಸಂಶೋಧನಾರ್ಥಿಗಳು ಭೇಟಿ ನೀಡಿ, ಅಲ್ಲಿರುವ ಗ್ರಂಥಾಲಯದ ಪುಸ್ತಕಗಳನ್ನು ಓದುವರು. ಈ ನಿಟ್ಟಿನಲ್ಲಿ ಈ ಸಬರಮತಿ ಆಶ್ರಮ ಪ್ರೇರಣಾ ಶಕ್ತಿ ಕೇಂದ್ರವಾಗಿದೆ ಎಂದು ಕುಲಪತಿ ಪ್ರೊ.ಡಾ. ಸುರೇಶ ವಿ. ನಾಡಗೌಡ ಅವರು ಹೇಳುವರು.

“ಗ್ರಾಮ ಸ್ವರಾಜ್ಯ ಮತ್ತು ಗ್ರಾಮಗಳ ಉದ್ದಾರವೇ, ದೇಶದ ಉದ್ದಾರ” ಎಂಬುದು ಮಹಾತ್ಮ ಗಾಂಧೀಜಿಯವರ ಪರಮೋಚ್ಚ ಕನಸಾಗಿತ್ತು. ವಿವಿ ಆವರಣದಲ್ಲಿ ಇರುವ ಸಬರಮತಿ ಆಶ್ರಮದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ, ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಗಾಂಧೀಜಿ ಅವರ ಜಿಂತನೆಗಳನ್ನು ಅರಿಯಲು ಪ್ರೇರಣೆ ಆಗಿದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾಲ್ಕಿ | ಹಬ್ಬಗಳ ಆಚರಣೆಯ ಹಿಂದಿರುವ ವೈಚಾರಿಕ ನೆಲೆ ಅರಿಯಬೇಕು: ಧನಲಕ್ಷ್ಮಿ ಪಾಟೀಲ್

ಹಬ್ಬಗಳು ಕೇವಲ ಸಂಭ್ರಮದ ಆಚರಣೆಗಳಾಗಿರದೆ, ಅವುಗಳ ಹಿಂದಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ...

ರಾಯಚೂರು | ಕಾರು ಪಲ್ಟಿ: ಕೃಷ್ಣಾ ಭಾಗ್ಯ ಜಲನಿಗಮದ ಸಹಾಯಕ ಎಂಜಿನಿಯರ್ ಸಾವು

ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೃಷ್ಣಾ ಭಾಗ್ಯ ಜಲನಿಗಮದ ನಾರಾಯಣಪುರ ವಲಯದ...

ರಾಯಚೂರು | ಯರಮರಸ್ ವಿದ್ಯುತ್ ಘಟಕ ಭೂ ಸಂತ್ರಸ್ಥರಿಗೆ ಉದ್ಯೋಗ ನೀಡಲು ಆಗ್ರಹ

ಯರಮರಸ್ ವಿದ್ಯುತ್ ಘಟಕಕ್ಕೆ ಭೂಮಿ ಕಳೆದುಕೊಂಡ ಭೂ ಸಂತ್ರಸ್ಥರಿಗೆ ಉದ್ಯೋಗ ನೀಡದೇ...

ರಾಯಚೂರು | ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸದ ಅಧಿಕಾರಿಗಳ ವಿರುದ್ಧ ಅ.2ರಂದು ರೈತರಿಂದ ಮುತ್ತಿಗೆ

ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ...