ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ ಮತ್ತು ಮೇಕೆ

Date:

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ... ಗಾಂಧಿಯ ಜೀವನಶೈಲಿ ಅಪ್ಪಟ ಅವರ ಜೆರಾಕ್ಸ್ ಕಾಪಿಯಂತಿದೆ, ಅಲ್ಲವೇ?

ಇದು ಉತ್ಪ್ರೇಕ್ಷೆಯಲ್ಲ; ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದು ಮೇಕೆಗಳು. ಹೌದು ಅದು ಹೇಗೆ ಅಂತೀರಾ, ಕತೆ ಕೇಳಿ: ಅದು 1918ರ ಆಸುಪಾಸು. ಒಂದು ಕಡೆ ಖೇಡಾಸತ್ಯಾಗ್ರಹದ ಭರಾಟೆಯಲ್ಲಿ ದೇಶ ಮುಳುಗೇಳುತ್ತಿರುತ್ತದೆ. ಇನ್ನೊಂದೆಡೆ ರೌಲತ್ ಕಾಯ್ದೆಯ ಅಮಾನುಷ ಕ್ರಮಗಳನ್ನು ಪ್ರತಿರೋಧಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿರುತ್ತದೆ.

- Advertisement -

ಆದರೆ ಸತ್ಯ ಮತ್ತು ಅಹಿಂಸೆ ಎಂಬ ಎರಡು ಹೊಸ ಅಸ್ತ್ರಗಳನ್ನು ಜಗತ್ತಿನ ಹೋರಾಟದ ಚರಿತ್ರೆಗೆ ಕೊಟ್ಟ ಅಪೂರ್ವ ನಾಯಕ ಗಾಂಧಿ ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಾರೆ . ಒಂದು ದೊಡ್ಡ ಚಳವಳಿಯ ಪೂರ್ವ ತಯಾರಿಗೆ ಪ್ರವಾಸದಲ್ಲಿರುತ್ತಾರೆ. ಮಾತೆರಾನ್ ಎಂಬ ಹಳ್ಳಿಯಲ್ಲಿದ್ದಾಗ ಅಲ್ಲಿಯ ಗಡುಸು ನೀರಿಗೆ ಅವರಿಗೆ ಭೇದಿಯಾಗುತ್ತಿರುತ್ತದೆ. ಮಲವಿಸರ್ಜನೆಯ ಜಾಗದಲ್ಲಿ ಉರಿ ಕಾಣಿಸಿ ಹಿಂಸೆ ಅನುಭವಿಸುತ್ತಿರುತ್ತಾರೆ. ಮೊದಲೇ ಮಲಬದ್ಧತೆಯಿಂದ ತೀವ್ರವಾಗಿ ನರಳುತ್ತಿದ್ದ ಗಾಂಧೀಜಿಗೆ ಅದು Fissure ಸ್ಥಿತಿಗೆ ಹೋಗಿದ್ದು ಗಾಬರಿ, ಆತಂಕ ಉಂಟು ಮಾಡುತ್ತದೆ. ಊಟ ಮಾಡುವುದೇ ಕಷ್ಟವಾಗುತ್ತದೆ. ಹಾಗಾಗಿ ಪೂರ್ವಯೋಜಿತ ವೇಳಾಪಟ್ಟಿಗಿಂತ ಮೊದಲೇ ಆ ಊರನ್ನು ಬಿಟ್ಟು ದೌಡಾಯಿಸುತ್ತಾರೆ. ಆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬರುವುದಿಲ್ಲ. ಆಗ ಅವರ ಸಹ ಹೋರಾಟಗಾರ ಶಂಕರ್ ಲಾಲ್ ಬಂಕರ್, ಪರ್ಯಾಯ ವೈದ್ಯ ವಿಜ್ಞಾನವನ್ನು ಗೌರವಿಸುತ್ತಾ ಆಧುನಿಕ ವೈದ್ಯ ಪದ್ಧತಿ ಪ್ರಾಕ್ಟೀಸ್ ಮಾಡುವ ಡಾಕ್ಟರ್ ದಲಾಲ್ ಅವರನ್ನು ಕರೆತರುತ್ತಾರೆ .

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಗಾಂಧಿ ದೇಹದ ಸ್ಥಿತಿಗತಿ ಪರೀಕ್ಷಿಸಿದ ಡಾ. ದಲಾಲ್ ಅಂತಿಮವಾಗಿ ಆಹಾರ ಕ್ರಮದ ಬಗ್ಗೆ ಸೂಚನೆಗಳನ್ನು ನೀಡುತ್ತಾ ಹಾಲನ್ನು ಗಾಂಧಿ ಕಡ್ಡಾಯವಾಗಿ ಸೇವಿಸಬೇಕು ಇಲ್ಲದಿದ್ದರೆ ದೇಹದ ಆರೋಗ್ಯ ಸುಧಾರಣೆ ಕಷ್ಟ ಎನ್ನುತ್ತಾರೆ. ಆಗ ಗಾಂಧಿ ತಾನು ಹಾಲನ್ನು ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದನ್ನು ನೆನಪಿಸುತ್ತಾರೆ. ಹಸುವಿನ ಹಾಲು, ಹಿಂಸೆಯ ಸಂಕೇತ, ಹಾಗೆಯೇ ಎಮ್ಮೆ ಹಾಲು ಕೂಡ. ಮತ್ತೆ ಹಾಲು ಮನುಷ್ಯನಿಗೆ ಸಹಜ ಆಯ್ಕೆಯು ಅಲ್ಲ, ಅನಿವಾರ್ಯವೂ ಅಲ್ಲ ಎನ್ನುವ ಗಾಂಧಿಯ ಮನಸ್ಥಿತಿ ಮತ್ತು ಹಾಲಿನ ಸಿದ್ಧಾಂತ ಕೇಳಿ ಡಾಕ್ಟರ್ ದಲಾಲ್ ದಿಗ್ಮೂಢರಾಗುತ್ತಾರೆ. ಅಲ್ಲಿಗೆ ಬಂದ ಕಸ್ತೂರಿಬಾ “ಆಯ್ತು, ಮೇಕೆ ಹಾಲು ಯಾಕಾಗಬಾರದು?” ಎಂದು ಅವರ ಚರ್ಚೆಗೆ ಮತ್ತೊಂದು ಆಯಾಮ ನೀಡುತ್ತಾರೆ. ಕಸ್ತೂರಿಬಾ ಸಲಹೆ ಕೇಳಿ ಡಾಕ್ಟರ್ ದಲಾಲ್‌ಗೆ ಕತ್ತಲಲ್ಲಿ ಮಿಂಚು ಹೊಳೆದಂತಾಗುತ್ತದೆ. ಆಗ ಡಾಕ್ಟರ್ ದಲಾಲ್ ಪಟ್ಟು ಹಿಡಿಯುತ್ತಾರೆ. ಮೇಕೆಯ ಹಾಲು ಕುಡಿಯಲು ಆರಂಭಿಸಿದರೆ ಚಿಕಿತ್ಸೆ ಪ್ರಾರಂಭಿಸುವುದಾಗಿ ಒತ್ತಾಯ ಹೇರುತ್ತಾರೆ.

ಇದನ್ನು ಓದಿದ್ದೀರಾ?: ಕಾಲಮಾನ | ದೇಹವೇ ನೈತಿಕ ಹೋರಾಟದ ತಾಣವಾದಾಗ…

ಗಾಂಧೀಗೆ ಸತ್ಯ ಮತ್ತು ಅಹಿಂಸೆ ಎರಡೂ ಜೋಡೆತ್ತುಗಳು. ಅವುಗಳಲ್ಲಿ ಒಂದನ್ನೊಂದು ಬಿಟ್ಟು ಗಾಂಧಿಯ ಹೋರಾಟದ ಬಾಳ ಬಂಡಿ ಮುನ್ನುಗ್ಗುವುದಿಲ್ಲ. ಆಣೆ, ಪ್ರಮಾಣ, ವಚನ ನೀಡಿರುವುದು ಸತ್ಯ. ಅದರ ಹಿಂದಿರುವ ನಿಲುವು ಕೂಡ ಸಮರ್ಥನೀಯ. ಆದರೆ ತಾನು ಕೈಗೊಂಡಿರುವ ಭಾರತ ಬಿಡುಗಡೆಯ ಹೋರಾಟದ ಹಿನ್ನೆಲೆಯಲ್ಲಿ ಹಾಲಿನ ಬಗೆಗಿನ ಪ್ರತಿಜ್ಞೆ ಬಗ್ಗೆ ಚಿಂತಿಸತೊಡಗಿದರು. ಅವರು ಪ್ರಮಾಣ ಮಾಡುವಾಗ ಅವರ ಮನಸ್ಸಿನಲ್ಲಿ ಹಸು, ಎಮ್ಮೆ ಇದ್ದವೇ ಹೊರತು ಆಡು ಕುರಿ ಇರಲಿಲ್ಲ. ಹಾಗಾಗಿ ಪದಶಃ ಆಡಿನ ಹಾಲು ಕುಡಿಯುವುದು ಆಣೆಯ ನಿರಾಕರಣೆಯಲ್ಲ. ಆದರೆ ಪ್ರತಿಜ್ಞೆಯ ಸ್ಪಿರಿಟ್ ಮಾತ್ರ ಹಾಲಿನ ಸೇವನೆಗೆ ವಿರುದ್ಧವಾದದ್ದು. ಸತ್ಯ ಯಾವಾಗಲೂ ಪದ ಮತ್ತು ಅಂತಸತ್ವ (spirit ) ಎರಡರಲ್ಲೂ ಮನೆ ಮಾಡಿರುತ್ತದೆ. ಹೀಗೆ ಯೋಚಿಸುತ್ತಿದ್ದ ಗಾಂಧಿಯ ದೇಹದ ಸ್ಥಿತಿ ಗಂಭೀರವಾಗುತ್ತಾ ಸಾವು ಬದುಕಿನ ಹೋರಾಟಕ್ಕೆ ಬಂದು ನಿಂತಿತು. ಅವರನ್ನು ಕೈಬೀಸಿ ಕರೆಯುತ್ತಿರುವ ಸ್ವಾತಂತ್ರ್ಯ ಸಂಗ್ರಾಮ ಕೊನೆಗೂ ಒಂದು ನಿಲುವಿಗೆ ಬರುವಂತೆ ಒತ್ತಾಯಿಸಿತು. ಹಾಲಿನ ಸೇವನೆ ವಿರುದ್ಧದ ಪ್ರತಿಜ್ಞೆಯನ್ನು ಮುರಿದು ತನ್ನನ್ನು ದೊಡ್ಡ ಉದ್ದೇಶಕ್ಕೆ ತೆತ್ತುಕೊಳ್ಳಲು ಅಂತಿಮವಾಗಿ ನಿರ್ಣಯಿಸಿದರು.

ನಂತರ ಅವರ ಬದುಕಿನ ಭಾಗವಾಗಿಯೇ ಆಗಿ ಹೋಯಿತು- ಆಡು ಮತ್ತು ಆಡಿನ ಹಾಲು. ಅಲ್ಲಿಂದಾಚೆಗೆ ಮೇಕೆ ಗಾಂಧಿ ಕುಟುಂಬದ ಮಹತ್ವದ ಭಾಗವಾಗುತ್ತದೆ. ಗಾಂಧಿ ಎಲ್ಲಿಗೆ ಹೋದರೂ ಮೇಕೆಯನ್ನು ಅವರ ಜೊತೆಯಲ್ಲಿ ಒಯ್ಯುತ್ತಿರುತ್ತಾರೆ. ಹೀಗೇ ಮೇಕೆ ಲಂಡನ್‌ಲ್ಲಿ ನಡೆದ ಎರಡನೇ ದುಂಡುಮೇಜಿನ ಪರಿಷತ್ ಸಭೆಗೆ ಹೋಗಿಬರುತ್ತದೆ.

ಗಾಂಧಿ ಆಡು 1
ಗಾಂಧಿಯನ್ನು ಬದುಕಿಸಿ ಬೆಳಗಿಸಿದ ಆಡುಪಾಡು

ಲಂಡನ್ ಹಡಗು ಹತ್ತಿದ ಆಡು
1931ರಲ್ಲಿ ಎರಡನೇ ದುಂಡು ಮೇಜಿನ ಪರಿಷತ್ ಲಂಡನ್‌ನಲ್ಲಿ ಆಯೋಜಿಸಲಾಗಿರುತ್ತದೆ. ಈಗಾಗಲೇ ಮೊದಲ ಸುತ್ತಿನ ಸಭೆಗೆ ಗಾಂಧಿ ಗೈರಾಗಿರುತ್ತಾರೆ. ಗಾಂಧಿಗೆ ಹೋಗಬೇಕಾದ ಅನಿವಾರ್ಯದ ಜೊತೆ ಹಡಗಿನ ದೀರ್ಘ ಪ್ರಯಾಣದಲ್ಲಿ ಕಾಪಾಡಿಕೊಳ್ಳಬೇಕಾದ ಆರೋಗ್ಯದ ಕಾಳಜಿಯೂ ಮುಖ್ಯವಾಗಿರುತ್ತದೆ. ಗಾಂಧಿ ತಂಡ ಎಸ್.ಎಸ್. ರಾಜಪುಠಾಣ ಎಂಬ ಹಡಗಿನಲ್ಲಿ ಬೊಂಬಾಯಿಯಿಂದ ಲಂಡನಿಗೆ ದೀರ್ಘ ಪ್ರವಾಸ ಕೈಗೊಳ್ಳುತ್ತದೆ.

ಆ ಹಡಗಿನ ಕೆಳಗಿನ ಹಂತದಲ್ಲಿ ಮೇಕೆಗೆ ವಸತಿ ವ್ಯವಸ್ಥೆ ಆಗಿರುತ್ತದೆ. ಅಶಾಂತ ಸಮುದ್ರದ ಕುಲಕಾಟಕ್ಕೆ ಮೇಕೆ ಒಗ್ಗುತ್ತದೆ. ಒಂದು ಸಾರಿ ಅನಾರೋಗ್ಯಕ್ಕೆ ಈಡಾದರೂ ಬಿಸಿಲ ನಾಡಿನಿಂದ ಚಳಿ ಸೀಮೆಗೆ ಸಲೀಸಾಗಿ ಸಾಗುತ್ತದೆ. ಈಜಿಪ್ಟಿನಲ್ಲಿ ಗಾಂಧಿಯ ಬೆಂಬಲಿಗರು ಮೇಕೆಯ ಹಾಲಿನ ಕೊಡಪಾನಗಳೊಂದಿಗೆ ಸ್ವಾಗತಿಸುತ್ತಾರೆ. ಪ್ಯಾರಿಸ್‌ನಲ್ಲಿ ಪೊಲೀಸರೊಂದಿಗೆ ಉಂಟಾದ ಗೊಂದಲದಲ್ಲಿ ಮೇಕೆ ಪ್ಲಾಟ್ ಫಾರ್ಮ್‌ನಲ್ಲಿ ಇಳಿಯಲು ಅವಕಾಶ ಕೊಡುವುದಿಲ್ಲ. ಹಾಗಾಗಿ ಆ ದಿನ ಗಾಂಧಿಗೆ ಮೇಕೆಯ ಹಾಲು ತಪ್ಪುತ್ತದೆ ಎಂದು ಆಡಿನ ಮೇಲ್ವಿಚಾರಕಿಯಾಗಿ ಪರಿವರ್ತನೆಗೊಂಡ ಮೀರಾ ಬೆನ್ ತಮ್ಮ ನೆನಪಿನ ಪುಸ್ತಕ “ಸ್ಪಿರಿಟ್ ಆಫ್ ಪಿಲ್ ಗ್ರಿಮೇಜ್”ನಲ್ಲಿ ದಾಖಲಿಸಿದ್ದಾರೆ.

ಇದನ್ನು ಓದಿದ್ದೀರಾ?: ಗಾಂಧಿ ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಲಂಡನ್ನಿನಲ್ಲಿ ಮೇಕೆಯೊಂದಿಗಿನ ಗಾಂಧಿ ಟೀಮ್‌ಗೆ ರಾಜೋಚಿತ ಸ್ವಾಗತ ದೊರೆಯುತ್ತದೆ. ಇಂದು ನಾವು ಎಲ್ಲೆಡೆಯೂ ಕಾಣುತ್ತಿರುವ ಗಾಂಧಿಯೊಂದಿಗಿನ
ಆಡಿನ ಫೋಟೋವೇ ಅಂದು ಜಾಗತಿಕ ಪತ್ರಿಕೆಗಳ ಮುಖಪುಟ ಅಲಂಕರಿಸಿತ್ತು.

ಭಾರತದಲ್ಲಿ ಶಾರದಾ ಎಂಬ ಮೇಕೆಗೆ ಗಾಂಧಿಯೊಂದಿಗೆ ಕಾಶ್ಮೀರಕ್ಕೂ ಹೋಗಿಬರುವ ಅವಕಾಶ ಒದಗಿಬಂದಿತ್ತು. ಆಗಿನ ಯುವಕ ಮುಂದೆ ಸಾಹಿತ್ಯ ಸಂವೇದನೆಯ ರಾಜಕಾರಣ ಮಾಡಿದ ಕರಣ್ ಸಿಂಗ್ ಆ ಮೇಕೆಗೆ ಕಾಡಿನ ತುಳಸಿಯನ್ನು ತರಿಸಿ ವಿಶೇಷ ಮೇವಾಗಿ ಕೊಡಿಸುತ್ತಾರೆ. ಹೀಗೆ ಗಾಂಧಿಯ ಆಡಿನ ಬಗ್ಗೆ ಹಲವು ದಾಖಲೆಗಳಿವೆ. ಅವುಗಳಲ್ಲಿ ಗಾಂಧಿ ಪ್ರವಾಸದಲ್ಲಿ ಮೇಕೆಗೆ ಬೇಕಾದ ವ್ಯವಸ್ಥೆ ಬಗ್ಗೆ ವೈಸರಾಯ್ ಆದ ಸರ್ ಸ್ಟಾಫೋರ್ಡ್ ಕ್ರಿಪ್ಸ್‌ನೊಂದಿಗೆ ನಡೆಸಿದ ಪತ್ರ ವ್ಯವಹಾರಗಳು ಮುಖ್ಯವಾಗಿವೆ.

ಕ್ವಿಟ್ ಇಂಡಿಯಾ ಚಳವಳಿ ನಂತರ ಗಾಂಧಿ ಯರವಾಡ ಜೈಲಿನಲ್ಲಿದ್ದಾಗ ಮೀರಾ ಬೆನ್ ಅವರ ಕಾಳಜಿ ಜೈಲುಗಳಲ್ಲಿದ್ದ ಆಡುಗಳ ಕುರಿತಾಗಿರುತ್ತಿತ್ತು. ಇತಿಹಾಸ ಪ್ರಸಿದ್ಧ ಗಾಂಧಿ ಇರ್ವಿನ್ ಮಾತುಕತೆ ಇಂದಿನ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿತ್ತು, ಸುದೀರ್ಘವಾದ ಮಾತುಕತೆಗಳ ನಡುವೆಯೂ ಮೇಕೆ ಹಾಲಿನ ಚಂಬುಗಳೊಂದಿಗೆ ಅಲ್ಲಿಗೆ ಹೋಗಿ ಖರ್ಜೂರಗಳ ಮೇಲೆ ಹಾಲನ್ನು ಸುರಿದು ಕೊಡುವುದನ್ನು ತಪ್ಪಿಸುತ್ತಿರಲಿಲ್ಲ ಮೀರಾ ಬೆನ್.

ಹೀಗೆ ಗಾಂಧಿಯನ್ನು ಬದುಕಿಸಿ ಬೆಳಗಿಸಿದ ಆಡು ಮೇಕೆಗಳು ಚರಿತ್ರೆಯಲ್ಲಿ ಮತ್ತು ಪ್ರಸ್ತುತ ಭಾರತದಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವುದು ಯಾಕೆ?

ಫ್ರಾನ್ಸ್ ದೇಶದ ನೆಪೋಲಿಯನ್ ಬೋನಾಪಾರ್ಟೆಯ ಎಲ್ಲಾ ಯುದ್ಧಗಳಲ್ಲಿ ಜೊತೆಗಿದ್ದು ಕೊನೆಯ ವಾಟರ್ಲೂ ಕದನದಲ್ಲಿ ಪ್ರಾಣಬಿಟ್ಟ ಕುದುರೆ ಮೊರೆಂಗೊ ಫ್ರೆಂಚ್ ಇತಿಹಾಸದ ಪುಟದಲ್ಲಿ ಇಂದಿಗೂ ಮಿಂಚುತ್ತಿದೆ. ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್‌ನ ಹೋರಿ ಮುಖ ಹೋಲುವ ಬುಸೆಪಾಲ ಕುದುರೆ ಚರಿತ್ರೆಯ ಪುಟಗಳಲ್ಲಿ ಇಂದಿಗೂ ನೆಗೆಯುತ್ತಿದೆ. ಬ್ರಿಟಿಷ್ ಸಾಮ್ರಾಜ್ಯದ ಹಲವು ಪಾಶ್ಚಿಮಾತ್ಯ ಅಭಿವೃದ್ಧಿ ಮಾದರಿಗಳ ವಿರುದ್ಧ ಅಹಿಂಸೆ ಸತ್ಯಗಳ ಹೊಸ ಹತಾರಗಳೊಂದಿಗೆ ಸೆಣಸಿದ ಗಾಂಧಿಗೆ ಶಕ್ತಿ ನೀಡಿದ ಮೇಕೆಯ ಮಹತ್ವ ಇಂದು ನಮಗೆ ಕಾಣುತ್ತಿಲ್ಲವೇಕೆ?

ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಕೇವಲ ರಾಜಕೀಯ ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದು ಗಾಂಧಿಗೆ ಮುಖ್ಯವಾಗಿರಲಿಲ್ಲ. ಪಶ್ಚಿಮದ ಅಭಿವೃದ್ಧಿ ಮಾದರಿಗಳಿಗೆ ಪರ್ಯಾಯವಾಗಿ ಚರಕ, ಖಾದಿ, ಉಪ್ಪು ಬಳಸಿದ ಗಾಂಧಿಗೆ ಅವುಗಳಂತೆ ಮೇಕೆ ಸಹ ಮುಖ್ಯವಾಗಿತ್ತು. ಇಂದಿಗೂ ದಲಿತ ಮತ್ತು ಮುಸ್ಲಿಂ ಕೇರಿಗಳಲ್ಲಿ ಕಾಣುವ ಏಕೈಕ ಸಾಕುಪ್ರಾಣಿ ಮೇಕೆ. ಈ ದೇಶದ ಬಹುತೇಕ ತಳಸಮುದಾಯಗಳಿಗೆ ಭೂಹೀನರಿಗೆ ಗ್ರಾಮೀಣ ಕಸುಬುಗಳು ವಿಶೇಷವಾಗಿ ಪಶುಪಾಲನೆ ಗ್ರಾಮೀಣ ಆರ್ಥಿಕತೆಯನ್ನು ಪೊರೆಯುವ ಸಾಧನವಾಗಿದೆ ಎಂಬುದನ್ನು ಬಲ್ಲವರಾಗಿದ್ದರು ಗಾಂಧಿ. ಅದರ ಸಂಕೇತವಾಗಿಯೇ ಮೇಕೆಯನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು.

ಇದನ್ನು ಇನ್ನೂ ಆಳವಾಗಿ ನೋಡುವುದಾದರೆ ಗ್ರಾಮೀಣ ಭಾರತದಲ್ಲಿ ಬಹುಸಂಖ್ಯಾತ ರೈತರ ಸಂಕೇತ ನೇಗಿಲು. ಆದರೆ ಗ್ರಾಮೀಣ ಲೋಕದಲ್ಲಿ ಭೂಹೀನ ಕುಶಲ ಕಸುಬಗಳಾಧಾರಿತ ಸಮುದಾಯಗಳು ಅಲ್ಪಸಂಖ್ಯಾತರು. ಅವರ ಅಸ್ಮಿತೆ ಕಾಪಾಡಲು ನೇಗಿಲ ಬದಲಾಗಿ ಚರಕ ಹಿಡಿದರು ಗಾಂಧಿ!

ಈ ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ… ಗಾಂಧಿಯ ಜೀವನಶೈಲಿ ಅಪ್ಪಟ ಅವರ ಜೆರಾಕ್ಸ್ ಕಾಪಿಯಂತಿದೆ, ಅಲ್ಲವೇ?

ಹೀಗೆ ಪಶುಪಾಲಕ ಸಮುದಾಯಗಳ ಸುಸ್ಥಿರ ಅಭಿವೃದ್ಧಿ ಮಾದರಿಗಳಲ್ಲಿ ಗಾಂಧಿತನವಿದೆ. ಹಾಗಾಗಿಯೇ ಈ ಗಾಂಧಿತನ ಗಾಂಧಿಗೆ ಕಡವಾಗಿ ಬಂದಿದ್ದು ಮುಖ್ಯವಾಹಿನಿಯಿಂದ ದೂರವಿರುವ ದನಿ ಇಲ್ಲದ ಪಶುಪಾಲಕ ಸಮುದಾಯಗಳಿಂದಲೇ ಅಲ್ಲವೇ?

ಗಾಂಧಿ cow
WhatsApp Image 2026 08 23 at 4.34.49 PM e1787483943519
ಡಾ.ರಘುಪತಿ ಪಶುವೈದ್ಯರು.
+ posts

ಡಾ ರಘುಪತಿ. ವೃತ್ತಿಯಲ್ಲಿ ಪಶು-ವೈದ್ಯ. ಊರು ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ
ಇವರು ಪರ್ಯಾಯ ಸಾಧ್ಯತೆಗಳ ಚಿಂತಕ, ಬರಹಗಾರ ಹಾಗೂ ಅವಿರತ ಅಲೆಮಾರಿ ಸಂಗಾತಿ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ 'ಕುರಿಮಿತ್ರ' ಪತ್ರಿಕೆಗೆ ಸಂಪಾದಕರಾಗಿದ್ದರು.

ಆದಿಯಿಂದಲೂ ಪಶುಪಾಲನೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಬರುತ್ತ ದೇಶದ ʼಜಿಡಿಪಿ'ಯಲ್ಲಿ ದೊಡ್ಡಮಟ್ಟದ ಕೊಡುಗೆ ನೀಡುತ್ತಿರುವ ಆಡು-ಕುರಿ ಸಾಕುವ ಎಲ್ಲ ಹಿಂದುಳಿದ ಜಾತಿ-ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 'ಪಶುಪಾಲಕ-ಕರ್ನಾಟಕ' ಹೆಸರಿನಲ್ಲಿ ದೊಡ್ಡಮಟ್ಟದ ಯೋಜನೆಯೊಂದನ್ನು ರೂಪಿಸಿ, ಅದರ ಸಾಕಾರದಲ್ಲಿ ಕಾರ್ಯನಿರತರಾಗಿದ್ದಾರೆ!

ಪೋಸ್ಟ್ ಹಂಚಿಕೊಳ್ಳಿ:

ಡಾ.ರಘುಪತಿ ಪಶುವೈದ್ಯರು.
ಡಾ.ರಘುಪತಿ ಪಶುವೈದ್ಯರು.
ಡಾ ರಘುಪತಿ. ವೃತ್ತಿಯಲ್ಲಿ ಪಶು-ವೈದ್ಯ. ಊರು ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ ಇವರು ಪರ್ಯಾಯ ಸಾಧ್ಯತೆಗಳ ಚಿಂತಕ, ಬರಹಗಾರ ಹಾಗೂ ಅವಿರತ ಅಲೆಮಾರಿ ಸಂಗಾತಿ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ 'ಕುರಿಮಿತ್ರ' ಪತ್ರಿಕೆಗೆ ಸಂಪಾದಕರಾಗಿದ್ದರು. ಆದಿಯಿಂದಲೂ ಪಶುಪಾಲನೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಬರುತ್ತ ದೇಶದ ʼಜಿಡಿಪಿ'ಯಲ್ಲಿ ದೊಡ್ಡಮಟ್ಟದ ಕೊಡುಗೆ ನೀಡುತ್ತಿರುವ ಆಡು-ಕುರಿ ಸಾಕುವ ಎಲ್ಲ ಹಿಂದುಳಿದ ಜಾತಿ-ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 'ಪಶುಪಾಲಕ-ಕರ್ನಾಟಕ' ಹೆಸರಿನಲ್ಲಿ ದೊಡ್ಡಮಟ್ಟದ ಯೋಜನೆಯೊಂದನ್ನು ರೂಪಿಸಿ, ಅದರ ಸಾಕಾರದಲ್ಲಿ ಕಾರ್ಯನಿರತರಾಗಿದ್ದಾರೆ!

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು? ವಿಮಾನದ ಕಾಕ್‌ಪಿಟ್‌ ಹೇಗಿರುತ್ತದೆ ಬಲ್ಲಿರಾ?

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ...

SIR ವಿವಾದದ ನಡುವೆ ಒಡಿಶಾ ಮುಖ್ಯ ಚುನಾವಣಾಧಿಕಾರಿ ಸ್ವಯಂ ನಿವೃತ್ತಿಗೆ ಅರ್ಜಿ; ಆರ್ ಎಸ್ ಗೋಪಾಲನ್ ಹೇಳಿದ್ದೇನು?

ಒಡಿಶಾದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ...