‘Instagram ಹೆಣ್ಮಕ್ಕಳಿಗೆ ಮಾತ್ರ’; ಎಲಾನ್ ಮಸ್ಕ್ ಹೀಗ್ಯಾಕಂದ್ರು?

Date:

ಟೆಕ್ ಜೈಂಟ್ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಆನ್‌ಲೈನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. Instagram ಎನ್ನುವುದು ಹೆಣ್ಮಕ್ಕಳಿಗೆ ಮೀಸಲಾದ ಸಾಮಾಜಿಕ ಜಾಲತಾಣ ಎಂದು ಹೇಳುವ ಮೂಲಕ ಮಸ್ಕ್ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

- Advertisement -

‘ಗೈಗರ್ ಕ್ಯಾಪಿಟಲ್’ (Geiger Capital) ಎಂಬ ಎಕ್ಸ್ (X) ಬಳಕೆದಾರರು ತಾವು Instagram ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಿರುವುದಾಗಿ ಪೋಸ್ಟ್ ಮಾಡಿದ್ದರು. “ಅಧಿಕೃತವಾಗಿ ಇನ್‌ಸ್ಟಾಗ್ರಾಮ್ ಡಿಲೀಟ್ ಮಾಡಿದ್ದೇನೆ. ಇದು ಅಂತರ್ಗತವಾಗಿಯೇ ಹೆಣ್ಮಕ್ಕಳ ಆಪ್. ಇದರಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಅವರು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, Instagram is for girls ಎಂದು ಕಮೆಂಟ್ ಮಾಡಿದ್ದಾರೆ. ಮಸ್ಕ್ ಅವರ ಈ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಎಲಾನ್ ಮಸ್ಕ್ ಈ ಹಿಂದೆ ಮೇ ತಿಂಗಳಿನಲ್ಲೂ ಸಾಮಾಜಿಕ ಜಾಲತಾಣದ ಅಭ್ಯಾಸಗಳ ಕುರಿತ ವೈರಲ್ ಥ್ರೆಡ್ ಒಂದಕ್ಕೆ ಉತ್ತರಿಸುತ್ತಾ ಇದೇ ಮಾತನ್ನು ಆಡಿದ್ದರು. ಆ ಸಂದರ್ಭದಲ್ಲಿ, ಆನ್‌ಲೈನ್‌ನಲ್ಲಿ “ಥರ್ಸ್ಟ್ ಟ್ರಾಪ್ಸ್” (ಆಕರ್ಷಕ ಫೋಟೋಗಳ ಮೂಲಕ ಗಮನ ಸೆಳೆಯುವುದು), ದಿನವಿಡೀ ಸ್ಟೋರಿಗಳನ್ನು ಅಪ್‌ಲೋಡ್ ಮಾಡುವುದು ಮತ್ತು ಮನೆಯಲ್ಲಿ ತಯಾರಿಸಿದ ಆಹಾರದ ಚಿತ್ರಗಳನ್ನು ಹಂಚಿಕೊಳ್ಳುವುದು ಇನ್‌ಸ್ಟಾಗ್ರಾಮ್‌ನ ಸಾಮಾನ್ಯ ಟ್ರೆಂಡ್‌ಗಳಾಗಿವೆ ಎಂದು ಚರ್ಚಿಸಲಾಗಿತ್ತು.

ಅದಕ್ಕೆ ಪ್ರತಿಕ್ರಿಯಿಸಿದ್ದ ಮಸ್ಕ್, ಇನ್‌ಸ್ಟಾಗ್ರಾಮ್ ಹೆಣ್ಮಕ್ಕಳಿಗೆ ಮಾತ್ರ ಎಂದು ಹೇಳಿದ್ದಲ್ಲದೆ, ಕೆಲವು ಗಂಡಸರು ಬಲವಂತವಾಗಿ ಅಥವಾ ಉತ್ಸಾಹದಿಂದ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಲಿಂಕ್ ಅನ್ನು ಮಸ್ಕ್ ಅವರಿಗೆ ಕಳುಹಿಸುವುದನ್ನು ಲೇವಡಿ ಮಾಡಿದ್ದರು.

ಅದಕ್ಕೆ ಮಸ್ಕ್, “ಹೀಗೆ ಗಂಡಸರಾಗಿ ಹುಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ತೋರಿಸುವ ಗಂಡಸರನ್ನು ನೋಡಿದರೆ, ಇವರು ಹುಡುಗರೇ ಅಥವಾ ಲಿಂಗ ಬದಲಾಯಿಸಿಕೊಂಡು ಹುಡುಗಿಯರಾಗುತ್ತಿರೋದಾ?” ಎಂದು ವ್ಯಂಗ್ಯವಾಡಿದ್ದರು.

ಇನ್‌ಸ್ಟಾಗ್ರಾಮ್ ಅನ್ನು ಬಳಸುವುದು ಗಂಡಸಿನ ಲಕ್ಷಣವಲ್ಲ, ಅದು ಹೆಂಗಸರ ಕೆಲಸ ಎಂಬಂತೆ ಅವರು ಜೆಂಡರ್‌ಗೆ ತಳುಕುಹಾಕಿ ಮಾತನಾಡಿದ್ದರು. ಇದೇ ಕಾರಣಕ್ಕೆ ನೆಟ್ಟಿಗರು ಮಸ್ಕ್ ಅವರ ಈ ಮಾತು ಸ್ತ್ರೀದ್ವೇಷದಿಂದ ಕೂಡಿದೆ (ಹೆಣ್ಣು ಜಾತಿಯನ್ನು ಕೀಳಾಗಿ ಕಾಣುವಂತಿದೆ) ಹಾಗೂ ಬೇರೆಯವರನ್ನು ನೋಯಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮಸ್ಕ್ ಅವರ ಈ ಹಳೆಯ ಹೇಳಿಕೆ ಮತ್ತೊಮ್ಮೆ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ಬಳಕೆದಾರರು, “ಹಾಗಾದರೆ ‘ಎಕ್ಸ್’ (X) ಯಾರಿಗಾಗಿ?” ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, “ನಾನು ಇದನ್ನು ಒಪ್ಪುವುದಿಲ್ಲ. ಇನ್‌ಸ್ಟಾಗ್ರಾಮ್ ಎಲ್ಲಾ ಲಿಂಗಗಳಿಗೂ ಸ್ವಾಗತಾರ್ಹ ವೇದಿಕೆಯಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಇನ್‌ಸ್ಟಾಗ್ರಾಮ್ ಎಲ್ಲರಿಗೂ ಸೇರಿದೆ” ಎಂದು ಮಸ್ಕ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಮಸ್ಕ್ ಜಗತ್ತಿನ ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ‘X’ ನ ಒಡೆಯ. ಇನ್‌ಸ್ಟಾಗ್ರಾಮ್ ಎನ್ನುವುದು ಅವರ ಮುಖ್ಯ ಪ್ರತಿಸ್ಪರ್ಧಿ (ಮೆಟಾ ಕಂಪನಿಯ ಒಡೆತನದಲ್ಲಿದೆ). ಹೀಗಾಗಿ, ಇನ್‌ಸ್ಟಾಗ್ರಾಮ್ ಅನ್ನು ಟೀಕಿಸುವುದರ ಮೂಲಕ ಅವರು ತಮ್ಮದೇ ಪ್ಲಾಟ್‌ಫಾರ್ಮ್ ‘X’ ಹೆಚ್ಚು ಗಂಭೀರವಾದ, ರಾಜಕೀಯ, ತಂತ್ರಜ್ಞಾನ ಮತ್ತು ಬೌದ್ಧಿಕ ಚರ್ಚೆಗಳು ನಡೆಯುವ ಜಾಗ ಎಂಬುದಾಗಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: Instagram ʼರೀಮಿಕ್ಸ್ʼ ಫೀಚರ್‌ಗೆ ತಕರಾರು; ಕಾಪಿರೈಟ್‌ ದುರ್ಬಳಕೆ ಸಾಧ್ಯತೆ ಎಂದ ದೆಹಲಿ ಹೈಕೋರ್ಟ್‌

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು, ಸೆಲ್ಫಿಗಳು, ರೀಲ್ಸ್, ‘ಥರ್ಸ್ಟ್ ಟ್ರಾಪ್ಸ್’ (ಆಕರ್ಷಕವಾಗಿ ಕಾಣಿಸಿಕೊಳ್ಳುವುದು) ಮತ್ತು ದಿನಚರಿಯ ಸಣ್ಣಪುಟ್ಟ ವಿಷಯಗಳನ್ನು ಹಂಚಿಕೊಳ್ಳುವುದು ಹೆಚ್ಚು. ಮಸ್ಕ್ ಇದನ್ನು “ಮೇಲ್ಮೈ ಮಟ್ಟದ (Superficial) ಪ್ರದರ್ಶನ ರಾಜಕಾರಣ” ಎಂದು ಪರಿಗಣಿಸುತ್ತಾರೆ. ಗಂಡಸರು ಇಂತಹವುಗಳಲ್ಲಿ ತೊಡಗುವುದನ್ನು ಅವರ ಗಂಡಸಿನ ಅಹಂಗೆ (Masculinity) ಸವಾಲು ಎಂಬಂತೆ ವ್ಯಂಗ್ಯ ಮಾಡಿದ್ದಾರೆ.

ಮಸ್ಕ್ ಯಾವಾಗಲೂ ಯಾವುದಾದರೊಂದು ವಿವಾದಾತ್ಮಕ ಹೇಳಿಕೆ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುತ್ತಾರೆ. ಇದರಿಂದ ಅವರ ಪ್ಲಾಟ್‌ಫಾರ್ಮ್ ‘X’ ನಲ್ಲಿ ಎಂಗೇಜ್‌ಮೆಂಟ್ ಹೆಚ್ಚಾಗುತ್ತದೆ ಮತ್ತು ಎಲ್ಲರ ಗಮನ ತಮ್ಮ ಮೇಲೆಯೇ ಉಳಿಯುವಂತೆ ಮಾಡಿಕೊಳ್ಳುವುದು. ತಮ್ಮ ಎದುರಾಳಿ ಜನಪ್ರಿಯತೆಯನ್ನು ಕುಂದಿಸುವ ಮತ್ತು ‘X’ ಪ್ಲಾಟ್‌ಫಾರ್ಮ್‌ನ ಶೈಲಿಯನ್ನು ಪ್ರಮೋಟ್ ಮಾಡುವ ಅವರ ತಂತ್ರದ ಭಾಗ ಇದು ಎನ್ನುತ್ತಿದ್ದಾರೆ ಹಲವರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಚಿಕ್ಕಮಗಳೂರು | ಬೇಟೆ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಯುವಕ ಸಾವು

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹಿರೇಗದ್ದೆ ಗ್ರಾಮದಲ್ಲಿ ಗುರುವಾರ ರಾತ್ರಿ ಬೇಟೆಯಾಡುತ್ತಿದ್ದ...

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...