ಬೆಳಗಾವಿ ನಗರದ ಹಳೇ ಸಗಟು ತರಕಾರಿ ಮಾರುಕಟ್ಟೆ ಬಳಿ ಭಾನುವಾರ ಅಕ್ರಮವಾಗಿ ಮಾದಕವಸ್ತು (ಹೆರಾಯಿನ್) ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
- Advertisement -
ಬಂಧಿತರನ್ನು ಹೊಸ ಗಾಂಧಿ ನಗರ ನಿವಾಸಿ ಯುನೂಸ್ ಸನದಿ ಮತ್ತು ವೀರಭದ್ರ ನಗರ ನಿವಾಸಿ ಮುಶೈಬ್ ಪಟೇಲ್ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳಿಂದ ಸುಮಾರು ₹40,000 ಮೌಲ್ಯದ 48.22 ಗ್ರಾಂ ಹೆರಾಯಿನ್ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಕುರಿತು ಮಾದಕವಸ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



