ಬೆಳಗಾವಿ |ಕ್ಲಸ್ಟರ್ ಕಿಚನ್‌ಗೆ ಅಡುಗೆ ಸಿಬ್ಬಂದಿ ವಿರೋಧ!

Date:

ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಬಿಸಿಯಾದ, ತಾಜಾ ಹಾಗೂ ಪೌಷ್ಟಿಕ ಆಹಾರ ಒದಗಿಸುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡುಗೆ ವ್ಯವಸ್ಥೆಯನ್ನೇ ಬದಲಿಸಲು ಹೊರಟಿರುವ ಕ್ಲಸ್ಟರ್ ಕಿಚನ್ ಪ್ರಸ್ತಾವಕ್ಕೆ ಅಡುಗೆ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

- Advertisement -

ಶಾಲೆಗಳಲ್ಲಿಯೇ ಅಡುಗೆ ತಯಾರಿಸುವ ಹಾಲಿ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬಿಸಿಯೂಟ ನೌಕರರು ಬೆಳಗಾವಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಒಂದೇ ಕೇಂದ್ರದಲ್ಲಿ ಆಹಾರ ತಯಾರಿಸಿ ಹಲವು ಶಾಲೆಗಳಿಗೆ ಪೂರೈಸುವ ಕ್ಲಸ್ಟರ್ ಕಿಚನ್ ವ್ಯವಸ್ಥೆ ಮಕ್ಕಳಿಗೆ ನೀಡುವ ಆಹಾರದ ತಾಜಾತನ ಮತ್ತು ಗುಣಮಟ್ಟಕ್ಕೆ ಧಕ್ಕೆ ತರಬಹುದು ಎಂಬುದು ಪ್ರತಿಭಟನಾಕಾರರ ಆತಂಕ. ಹೀಗಾಗಿ ಈ ಯೋಜನೆಯ ಪ್ರಸ್ತಾವವನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರತಿ ಶಾಲೆಯಲ್ಲೂ ಅಡುಗೆ ಮನೆ ನಿರ್ಮಾಣ, ಅಡುಗೆ ಪಾತ್ರೆಗಳು, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಇಷ್ಟೆಲ್ಲ ವ್ಯವಸ್ಥೆ ರೂಪಿಸಿರುವಾಗ ಶಾಲೆಗಳಲ್ಲೇ ಅಡುಗೆ ತಯಾರಿಸುವ ಬದಲು ಕೇಂದ್ರೀಕೃತ ಅಡುಗೆ ವ್ಯವಸ್ಥೆ ಜಾರಿಗೆ ತರುವ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಯಾದರೆ ಬಿಸಿಯೂಟ ಯೋಜನೆಯ ಮೂಲ ಆಶಯವೇ ಬದಲಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಯೋಜನೆ ಖಾಸಗಿ ಸಂಸ್ಥೆಗಳ ಪಾಲಾಗುವ ಅಪಾಯವನ್ನೂ ತಳ್ಳಿಹಾಕುವಂತಿಲ್ಲ. ಇದರೊಂದಿಗೆ ಧಾರ್ಮಿಕ ಹಾಗೂ ಜಾತಿ ಆಧಾರಿತ ಸಂಘಟನೆಗಳ ಹಸ್ತಕ್ಷೇಪಕ್ಕೆ ಅವಕಾಶ ಸೃಷ್ಟಿಯಾಗುವ ಆತಂಕವೂ ಇದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮಕ್ಕಳಿಗೆ ಶಾಲೆಗಳಲ್ಲೇ ತಾಜಾ ಆಹಾರ ಸಿಗುವ ವ್ಯವಸ್ಥೆಯನ್ನು ಉಳಿಸುವುದು ಸರ್ಕಾರದ ಜವಾಬ್ದಾರಿ. ಅಡುಗೆ ಸಿಬ್ಬಂದಿಯ ಉದ್ಯೋಗ ಭದ್ರತೆ ಹಾಗೂ ಮಕ್ಕಳ ಆಹಾರದ ಗುಣಮಟ್ಟ ಎರಡನ್ನೂ ಗಮನದಲ್ಲಿಟ್ಟುಕೊಂಡು ಕ್ಲಸ್ಟರ್ ಕಿಚನ್ ಪ್ರಸ್ತಾವವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ತುಳಸಮ್ಮ ಮಾಳದಕರ, ಮಾಶಾಬಿ ಡಾಲಾಯತ್, ಸಾವಿತ್ರಿ ಚಪ್ಪರದ, ಸುಮನ್ ಗಡಾದ, ಅನ್ನಪೂರ್ಣ ಹಲಮನಿ, ಪಾರ್ವತಿ ಕೌಜಲಗಿ, ಸುನೀತಾ ಚಾಳನ್ನವರ, ದೇವಕಿ ಹುಕ್ಕೇರಿ, ಸವಿತಾ ಬಾಲ್ಯಾಗೋಳ, ಭಾರತಿ ಜೋಗನ್ನವರ ಸೇರಿದಂತೆ ಹಲವು ಅಡುಗೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಟುಂಬದ ಬಗ್ಗೆ ಹಬ್ಬಿರುವ ‘ಅವಾಸ್ತವಿಕ’ ಕಥೆಗಳಿಗೆ ಉತ್ತರಿಸಲು ಆತ್ಮಚರಿತ್ರೆ ಬರೆದೆ: ಸೋನಿಯಾ ಗಾಂಧಿ

ತಮ್ಮ ಕುಟುಂಬದ ಬಗ್ಗೆ ಹಲವಾರು 'ಅವಾಸ್ತವಿಕ' ಮತ್ತು ಸತ್ಯಕ್ಕೆ ದೂರವಾದ ಕಥೆಗಳನ್ನು...

ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಮೇಳದ ಸಡಗರ

ಬೆಂಗಳೂರಿನ ಜಿಕೆವಿಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ 2026ರ ಕೃಷಿ ಮೇಳಕ್ಕೆ ಚಾಲನೆ...

ಮಣಿಪುರ ಹಿಂಸಾಚಾರ | ಹತ್ಯೆಯಾಗಿ ಆರು ತಿಂಗಳ ಬಳಿಕ ಆರು ನಾಗಾ ಯುವಕರ ಅಂತ್ಯಕ್ರಿಯೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೇಯ್ ಗ್ರಾಮದಿಂದ ಕಳೆದ ಮೇ 13...

ಅಂಕಿತಾ ಭಂಡಾರಿ ಹತ್ಯೆ: ಸಂತ್ರಸ್ತೆಯ ಖಾಸಗಿ ಚಾಟ್ ಬಹಿರಂಗಪಡಿಸಿದ ಹಂತಕನ ತಂದೆ, ಬಿಜೆಪಿ ಮಾಜಿ ಮುಖಂಡ ವಿರುದ್ಧ ದೂರು

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ...