ಬಳ್ಳಾರಿ | ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಬಾಣಂತಿಯರು, ಮಕ್ಕಳು

Date:

ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿ ಮತ್ತು ಮಕ್ಕಳ ವಾರ್ಡ್‌ನಲ್ಲಿ ವಿದ್ಯುತ್ ಇಲ್ಲದೆ ಎರಡು ರಾತ್ರಿ ಕತ್ತಲೆಯಲ್ಲೇ ಕಳೆಯುವಂತಾಗಿದೆ. ಬಾಣಂತಿಯರು ಮತ್ತು ಮಕ್ಕಳು ಮೊಬೈಲ್ ಫೋನ್‌ಗಳ ಬೆಳಕಿನಲ್ಲೇ ಇರಬೇಕಾದ ಪರಿಸ್ಥಿತಿಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

- Advertisement -

‘ಲೋಡ್‌ಶೆಡ್ಡಿಂಗ್‌ ನೆಪದಲ್ಲಿ ಹಗಲಿನಲ್ಲಿ ಅಲ್ಲದೆ ರಾತ್ರಿ ವೇಳೆಯಲ್ಲೂ ವಿದ್ಯುತ್ಕಡಿತಗೊಳಿಸಲಾಯಿತು. ಸಂಪೂರ್ಣ ವಾಗಿ ಕತ್ತಲು ಆವರಿಸಿದ್ದರಿಂದ ಮೊಬೈಲ್‌ಫೋನ್ ಬೆಳಕಿನಲ್ಲೇ ಇರಬೇಕಾಯಿತು. ಸೊಳ್ಳೆಗಳಿಂದ ಕಚ್ಚಿಸಿಕೊಂಡು, ಸೆಖೆಯಲ್ಲೇ ರಾತ್ರಿಯಿಡೀ ಕಳೆಯ ಬೇಕಾಯಿತು’ ಎಂದು ಬಾಣಂತಿಯರು ಮತ್ತು ಸಂಬಂಧಿಕರು ದೂರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

‘ಬುಧವಾರ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು, ಗುರುವಾರ ಮತ್ತು ಶುಕ್ರವಾರವೂ ಮುಂದುವರಿಯಿತು. ಆಸ್ಪತ್ರೆಯ ಹೊರಾಂಗಣ, ಚೀಟಿ ಬರೆಯುವ ಕೋಣೆ ಮತ್ತು ವೈದ್ಯರ ಕೋಣೆಯಲ್ಲಿ ಮಾತ್ರ ಜನರೇಟರ್ ವ್ಯವಸ್ಥೆ ಯಿದೆ. ಆದರೆ, ಬಾಣಂತಿಯರ ವಾರ್ಡ್‌ಗೆ ತುರ್ತು ವ್ಯವಸ್ಥೆ ಇರಲಿಲ್ಲ’ ಎಂದರು.

‘ಬಾಣಂತಿಯರ ವಾರ್ಡ್‌ಗೆ ಪ್ರತ್ಯೇಕ ವಾಗಿ ಯುಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಯುಪಿಎಸ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಟನ್ ಬಂದ್ ಆಗಿತ್ತು. ಹೀಗಾಗಿ ಸಮಸ್ಯೆ ತಲೆದೋರಿತು. ಈಗ ಸಮಸ್ಯೆ ಪರಿಹರಿಸಿ, ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ವೈದ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಹೊನ್ನಕುಣಿ ಕ್ರಾಸ್‌ನಿಂದ ಸಿರಿವಾರದವರೆಗೆ 8 ಸೇತುವೆಗಳ ಕಾಮಗಾರಿ ತಕ್ಷಣ ಆರಂಭಿಸಲು ಒತ್ತಾಯ

ವಿಷಯ ತಿಳಿದು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ ಸಿರುಗುಪ್ಪ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ ದಮ್ಮೂರು ಅವರು ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು. ತಕ್ಷಣ ಸ್ಪಂದಿಸಿ ಯಾಕೆ ಸಮಸ್ಯೆ ಬಗೆಹರಿಸಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...

ವಿಜಯಪುರ |ಬಸವ ತತ್ವದ ವಿರುದ್ಧದ ಅಪಪ್ರಚಾರ | ಎಸ್‌ಐಟಿ ತನಿಖೆಗೆ ಆಗ್ರಹ

ಬಸವಣ್ಣನವರ ವಚನಗಳು, ವಿಚಾರಧಾರೆ ಹಾಗೂ ಶರಣ ಚಳವಳಿಯ ಇತಿಹಾಸವನ್ನು ತಿರುಚಿ ಸಮಾಜದಲ್ಲಿ...

ದೊಡ್ಡಬಳ್ಳಾಪುರ | ಕೆವಿಎನ್ ಕನ್ನಡ ವ್ಯಾಕರಣದ ತೋರುದೀಪ’ದೊಡ್ಡಬಳ್ಳಾಪುರದಲ್ಲಿ ಚಿಂತನ -ಮಂಥನ

ಭಾಷೆ ಕಲಿಕೆಯಿಂದ ಬರುವಂಥದ್ದಲ್ಲ. ಹುಟ್ಟಿನಿಂದಲೇ ಬಂದಿರುವ ಸಾಮರ್ಥ್ಯ. ಇದನ್ನು ಯೂನಿವರ್ಸಲ್ ಗ್ರಾಮರ್...

ಹಾವೇರಿ | ಟನ್ ಕಬ್ಬಿಗೆ ₹3,225 ದರ ನಿಗದಿ: ಸಚಿವ ರುದ್ರಪ್ಪ ಲಮಾಣಿ

ಪ್ರತಿ ಟನ್ ಕಬ್ಬಿಗೆ ₹3,225 ದರ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು...