ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ದೇಶದ 508 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಬೀದರ್ ಸೇರಿದಂತೆ ದೇಶದ 508 ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ವೇಳೆ ಮಾತನಾಡಿದರು.
“ದೇಶದ 1,300 ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಮಾಡುವ ಗುರಿ ಇದರ ಮೊದಲ ಭಾಗವಾಗಿ 508 ರೈಲ್ವೆ ನಿಲ್ದಾಣಗಳ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಇದರಡಿ ರೈಲ್ವೆ ನಿಲ್ದಾಣಗಳಲ್ಲಿ ಉತ್ತಮ ಪಾರ್ಕಿಂಗ್ ವ್ಯವಸ್ಥೆ, ವೇಯ್ಟಿಂಗ್ ರೂಮ್, ಶಾಪಿಂಗ್ ಕಾಂಪ್ಲೆಕ್ಸ್, ಪ್ಲಾಟ್ ಫಾರಂನಲ್ಲಿ ಆಸನ ವ್ಯವಸ್ಥೆ ಸೇರಿದಂತೆ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ” ಎಂದರು.
“ಪ್ರಸಕ್ತ ಸಾಲಿನಲ್ಲಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕೈಗೊಂಡಿದ್ದು, ಹೆಚ್ಚಿನ ರೈಲ್ವೆ ನಿಲ್ದಾಣಗಲ್ಲಿ ಸೋಲಾರ್ ಬಳಕೆ ಮಾಡಲಾಗುತ್ತಿದೆ. ಹಸಿರುಕರಣಕ್ಕೆ ಹೆಚ್ಚು ಮಹತ್ವ ನಿಡಲಾಗಿದೆ. ಈಗಾಗಲೇ ಹೆಚ್ಚಿನ ರೈಲುಗಳಿಗೆ ವಿದ್ಯುತ್ ಚಾಲಿತ ರೈಲುಗಳಾಗಿ ಮಾರ್ಪಾಡು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೈಲುಗಳು ವಿದ್ಯುತ್ ಚಾಲಿತವಾಗಲಿವೆ. ಇದರಿಂದ ಪರಿಸರ ರಕ್ಷಣೆಯಾಗಿಲಿದೆ” ಎಂದರು.
ಅಮೃತ ಭಾರತ ಸ್ಷೇಷನ್ ಯೋಜನೆಯಡಿ ಬೀದರ ರೈಲ್ವೆ ನಿಲ್ದಾಣ ಅಭಿವೃದ್ಧಿ
ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಮಾತನಾಡಿ, “ಅಮೃತ ಭಾರತ ಸ್ಷೇಷನ್ ಯೋಜನೆಯಡಿ ಬೀದರ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಹೊಂದಲಿದ್ದು, ಇದರ ಲಾಭ ಬೀದರ್ ಜಿಲ್ಲೆಯ ಎಲ್ಲ ಜನರಿಗೆ ಸಿಗಲಿದೆ. ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಇದು ಪ್ರಮುಖ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಪ್ರಗತಿಗೆ ಸಹಕಾರವಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಅಮೃತ್ ಭಾರತ್ ನಿಲ್ದಾಣ ಯೋಜನೆ; ಬಳ್ಳಾರಿ ರೈಲು ನಿಲ್ದಾಣ ಆಯ್ಕೆ
“ರೈಲ್ವೆ ಪ್ರಯಾಣ ಬಡವರಿಗೆ ಮಾತ್ರ ಸೀಮಿತ ಎಂಬ ಹಣೆಪಟ್ಟಿ ಇತ್ತು. ಆದರೆ ಈಗ ದೃಷ್ಟಿಕೋನ ಬದಲಾಗಿದೆ. ಇಂದು ಎಲ್ಲ ವರ್ಗದ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಅಹಮದ್ ರಷೀದ್ ಖಾದ್ರಿ, ಹಜ್ ಕಮಿಟಿ ಅಧ್ಯಕ್ಷ ರಫುವುದ್ದಿನ್ ಕಚೇರಿವಾಲೆ, ರೈಲ್ವೆ ವಿಭಾಗಿ ಕಚೇರಿ ವ್ಯವಸ್ಥಾಪಕ ರಾಜೀವ ಕುಮಾರ ಕಂಗಲೆ, ಶಿವರಾಜ ಗಂದಗೆ, ಬಸವಲಿಂಗ ಪಟ್ಟದ್ದೇವರು, ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಶಾಲೆ-ಕಾಲೇಜಿನ ಮಕ್ಕಳು ಇದ್ದರು.