ಬೀದರ್‌ | ಬ್ರಿಮ್ಸ್‌ ಅಕ್ರಮದ ಗೂಡಾಗಿದೆ; ಆಸ್ಪತ್ರೆ ಹಾಳಾಗಲು ಸಚಿವ ಈಶ್ವರ ಖಂಡ್ರೆ ಕಾರಣ : ಬಿಜೆಪಿ ಆರೋಪ

Date:

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್‌) ಆಸ್ಪತ್ರೆ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗಡಿ ಭಾಗದ ಜಿಲ್ಲಾ ಕೇಂದ್ರದಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಇದೀಗ ಅಕ್ರಮ, ಭ್ರಷ್ಟಾಚಾರ, ಅವ್ಯವಸ್ಥೆಯ ಗೂಡಾಗಿದೆ. ಮೊದಲ ಬಾರಿಗೆ ಬ್ರಿಮ್ಸ್ ಈ ಪರಿಯಾಗಿ ಹಳಿ ತಪ್ಪಿ ಹಾಳಾಗಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಅಸಡ್ಡೆ, ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಪ್ರಭು ಚವ್ಹಾಣ್, ಶರಣು ಸಲಗರ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್ ದೂರಿದ್ದಾರೆ.

- Advertisement -

ʼಬ್ರಿಮ್ಸ್ ವ್ಯವಸ್ಥೆ ಹಾಳಾಗಿದೆ. ಇಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು 3 ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಮಾಧ್ಯಮಗಳಲ್ಲಿ ಸಹ ಈ ಕುರಿತು ವರದಿ ಬಂದಿವೆ. ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರ, ಅದರಲ್ಲಿನ ಅಂಶಗಳನ್ನು ನೋಡಿದರೆ ಖಂಡ್ರೆ ಅವರು ಬ್ರಿಮ್ಸ್ ಆಸ್ಪತ್ರೆ ವಿಷಯದಲ್ಲಿ ಎಷ್ಟೊಂದು ಅಸಹಾಕರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತುಕೊಂಡು ಒಂದು ಆಸ್ಪತ್ರೆ ವ್ಯವಸ್ಥೆಯನ್ನು ಸರಿ ದಾರಿಗೆ ತರುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಇದು ಸಚಿವರ ವೈಫಲ್ಯತೆ ಹಾಗೂ ನಿಷ್ಕ್ರಿಯತೆಯೂ ಸಾಬೀತುಪಡಿಸಿದೆʼಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ʼಈಶ್ವರ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತು ಎರಡೂವರೆ ವರ್ಷವಾಗುತ್ತಿದೆ. ಈ ಮುಂಚೆ ಸಹ ಎರಡು ವರ್ಷ ಅವರು ಸಚಿವರಾಗಿದ್ದರು. ಜಿಲ್ಲೆಯಲ್ಲಿನ ಎಲ್ಲ ಆಗುಹೋಗು ಜವಾಬ್ದಾರಿ ಉಸ್ತುವಾರಿ ಸಚಿವರ ಹೆಗಲ ಮೇಲಿರುತ್ತದೆ. ಆದರೆ ಬ್ರಿಮ್ಸ್ ಆಸ್ಪತ್ರೆ ವಿಷಯದಲ್ಲಿ ಸಚಿವರು ನನ್ನಿಂದ ಏನೂ ಸಾಧ್ಯವಾಗುತ್ತಿಲ್ಲ. ನೀವೇ ಇದು ಸುಧಾರಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವರಿಗೆ ಅಂಗಲಾಚಿರುವುದು ನೋಡಿದರೆ, ಬ್ರಿಮ್ಸ್ ಭ್ರಷ್ಟ ವ್ಯವಸ್ಥೆಯ ಮುಂದೆ ಸಚಿವ ಖಂಡ್ರೆಯವರು ಮಂಡಿಯೂರಿದರೆ ಎಂಬ ಅನುಮಾನ ಮೂಡುತ್ತದೆʼ ಎಂದು ಅವರು ಟೀಕಿಸಿದ್ದಾರೆ.

ʼಕಳೆದ ಅನೇಕ ತಿಂಗಳಿನಿಂದ 750 ಹಾಸಿಗೆ ಸಾಮರ್ಥ್ಯದ ಬ್ರಿಮ್ಸ್ ಆಸ್ಪತ್ರೆ ಬಗ್ಗೆ ಸಾರ್ವಜನಿಕರು, ರೋಗಿಗಳಿಂದ ನಿರಂತರವಾಗಿ ದೂರು ಬರುತ್ತಿವೆ. ಮಾಧ್ಯಮಗಳಲ್ಲಿ ಸತತವಾಗಿ ಈ ಬಗ್ಗೆ ಸುದ್ದಿಗಳು ಬರುತ್ತಿವೆ. ಇಡೀ ಸರ್ಕಾರದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ನಿಟ್ಟಿನಲ್ಲಿ ಬ್ರಿಮ್ಸ್ ವ್ಯವಸ್ಥೆ ಹಾಳಾಗಿದೆʼ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ʼಖುದ್ದು ಸಚಿವ ಖಂಡ್ರೆ ಅವರು ಸಹ ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಬ್ರಿಮ್ಸ್ ನಿತ್ಯ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಮುಜುಗರಕ್ಕೆ ಸಿಲುಕಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. ಹಾಗಾದರೆ ಈ ಮುಜುಗರದ ಪರಿಸ್ಥಿತಿ ನಿರ್ಮಾಣ ಆಗುವವರೆಗೆ ನೀವು ಯಾಕೆ ಸುಮ್ಮನಿದ್ದಿರಿ? ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಸ್ಪತ್ರೆ ಸಮಸ್ಯೆ ನಿವಾರಿಸುವ, ಅಕ್ರಮ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ, ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಕೊಡಿಸುವ ಹೊಣೆ ನಿಮ್ಮದಿಲ್ಲವೆ? ಇದಕ್ಕೆ ಖಂಡ್ರೆ ಅವರೇ ಉತ್ತರಿಸಬೇಕುʼ ಎಂದು ಹೇಳಿದ್ದಾರೆ.

ಅವ್ಯವಸ್ಥೆ ಗೂಡಾದ ಬ್ರಿಮ್ಸ್‌ :

ʼವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದರೆ ಜಿಲ್ಲಾ ಉಸ್ತುವಾರಿ ಸಚಿವರ ಕೆಲಸ ಮುಗಿತಾ? ಹಾಗಾದರೆ ಜಿಲ್ಲೆಗೆ ಉಸ್ತುವಾರಿ ಸಚಿವರು ಏಕೆ ಬೇಕು? ಆಸ್ಪತ್ರೆಯಲ್ಲಿ ಸಮಸ್ಯೆ ಇದ್ದರೆ ತಕ್ಷಣ ಅದಕ್ಕೆ ಸರ್ಜರಿ ಮಾಡಿ ಜನಹಿತ, ರೋಗಿಗಳ ಹಿತ ಕಾಪಾಡುವುದು ನಿಮ್ಮ ಹೊಣೆ? ಎರಡೂವರೆ ವರ್ಷದಿಂದ ಈ ಕಡೆ ಇಣುಕಿ ನೋಡಿಲ್ಲ. ಇಲ್ಲಿ ಏನಾಗುತ್ತಿದೆ? ಏನು ಮಾಡಬೇಕಿದೆ ಎಂಬ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಸಂಬಂಧಿತ ಇಲಾಖೆ ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಇಲ್ಲಿಗೆ ಕರೆಯಿಸಿ ಸಭೆ ನಡೆಸಿ ಅವ್ಯವಸ್ಥೆಗೆ ಚಾಟಿ ಬೀಸುವ ಕೆಲಸ ಮಾಡಿಲ್ಲ. ಇದರ ಪರಿಣಾಮ ಇಂದು ಬ್ರಿಮ್ಸ್ಆ ಸ್ಪತ್ರೆ ಸುಧಾರಣೆಯಾಗದ ರೀತಿಯಲ್ಲಿ ಅವ್ಯವಸ್ಥೆ ಗೂಡಾಗಿ ನಿಂತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಬ್ರಿಮ್ಸ್ ಆಸ್ಪತ್ರೆಯಲ್ಲಿ ನೇಮಕ ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಕ್ರಮ ನಡೆದಿದೆ ಎಂದು ನೀವೇ ಹೇಳುತ್ತಿರುವಿರಿ. ಹಾಗಾದರೆ ನೇಮಕಾತಿ ನಡೆಯುವ ಮುನ್ನ ಇತ್ತ ಗಮನಹರಿಸಿಲ್ಲವೇಕೆ? ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಬ್ರಿಮ್ಸ್ ಸ್ವಾಯತ್ತ ಸಂಸ್ಥೆ ಎನಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಟ್ಟಿಲ್ಲ. ಜಿಲ್ಲಾಡಳಿತಕ್ಕೂ ಮೇಲಿಲ್ಲ. ಜನರ ಹಿತದಿಂದ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರತಿಯೊಂದು ಇಲಾಖೆ, ಸಂಸ್ಥೆ ಉಸ್ತುವಾರಿಯನ್ನು ನೋಡಬೇಕಾಗುತ್ತದೆ. ಸಚಿವರು ಇದರ ಬಗ್ಗೆ ಗಂಭೀರತೆ ಪ್ರದರ್ಶಿಸಿಲ್ಲ, ಜಿಲ್ಲಾಡಳಿತವೂ ಕೇರ್ ಮಾಡಿಲ್ಲ. ಹೀಗಾಗಿ ನಿತ್ಯ ಇಲ್ಲಿ ದೂರು, ಆರೋಪಗಳು ಸಾಮಾನ್ಯವಾಗಿವೆʼ ಎಂದು ಹೇಳಿದ್ದಾರೆ.

ಬಾಗಿಲು ತೆರೆಯದ ಕ್ಯಾಥ್ ಲ್ಯಾಬ್:

ʼಈ ಭಾಗದ ಹೃದಯ ರೋಗಿಗಳಿಗೆ ವರದಾನ ಆಗಬೇಕಾದ ಕ್ಯಾಥ್ ಲಾಬ್ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಇದರ ಉದ್ಘಾಟನೆ ಮುಖ್ಯಮಂತ್ರಿ ಕೈಯಿಂದಲೇ ಮಾಡಿಸಲಾಗಿದೆ. ಆದರೆ ಈವರೆಗೆ ಇದು ಆರಂಭವಾಗಿಲ್ಲ. ಬಹುತೇಕ ಪೀಠೋಪಕರ ತುಕ್ಕು ಹಿಡಿಯುತ್ತಿವೆ. ಹೃದ್ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ಹೈರಾಣಾಗುತ್ತಿದ್ದಾರೆ. ಬಡವರು
ಹಣವಿಲ್ಲದೆ ಜೀವವೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಆದರೆ ಇಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡುತ್ತಿಲ್ಲ. ಇದೇ ರೀತಿ ಎಂಆರ್ ಐ, ಸಿಟಿ ಸ್ಕ್ಯಾನ್ ಮಾಡುವ ಸಮಸ್ಯೆಯಿದೆ. ಹೀಗೆ ಏಕೆ? ಖಾಸಗಿ ವೈದ್ಯರ, ಆಸ್ಪತ್ರೆಗಳ ಒತ್ತಡದಿಂದ ಹೀಗಾಗುತ್ತಿದ್ದೆಯೇʼ ಎಂದು ಪ್ರಶ್ನಿಸಿದ್ದಾರೆ.

ʼಮಳೆ ಬಂದರೆ ಬ್ರಿಮ್ಸ್ ಆಸ್ಪತ್ರೆ ನೆಲಮಹಡಿ ಸಂಪೂರ್ಣ ನೀರಿನಿಂದ ತುಂಬುತ್ತದೆ. ಇತ್ತೀಚೆಗೆ ಅತಿವೃಷ್ಟಿಯಾದಾಗ ಸುಮಾರು ಒಂದು ತಿಂಗಳು ನೆಲಮಹಡಿ ನೀರಿನಲ್ಲೇ ಇತ್ತು. ಇದರಿಂದ ಬಹುಮಹಡಿ ಕಟ್ಟಡದ ಬುನಾದಿ ಹಾಳಾಗುವ ಆತಂಕವಿದೆ. ಇನ್ನು ಸುಮಾರು 125 ಕೋಟಿ ರೂ.ಖರ್ಚು ಮಾಡಿ ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕಟ್ಟಲಾಗಿದೆ. ಇಪ್ಪತ್ತು ವರ್ಷದೊಳಗಡೆಯೇ ಕಟ್ಟಡದ ಬಹುತೇಕ ಕಡೆ ಲಿಕೇಜ್ ಶುರುವಾಗಿವೆ. ಅನೇಕ ಕಡೆ ಬಿರುಕು ಕಾಣಿಸುತ್ತಿವೆ. ಕಳಪೆ ಕಾಮಗಾರಿ ಸಹ ನಡೆದಿರುವುದು ಕಾಣುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವ ಜೊತೆಗೆ ಎಲ್ಲ ನಿರ್ವಹಣೆ ಕೆಲಸ ತಕ್ಷಣ ಗುತ್ತಿಗೆ ಸಂಸ್ಥೆಯಿಂದ ಮಾಡಿಸಿ ಮುಂದಾಗುವ
ಅನಾಹುತಗಳು ತಪ್ಪಿಸಬೇಕುʼ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೀದರ್‌ | ಗ್ರಾ.ಪಂ.ಸದಸ್ಯರಿಗೆ 11 ತಿಂಗಳ ವೇತನ ಬಾಕಿ; ಸರ್ಕಾರ ಕೊಟ್ಟರೂ ಕೈಸೇರದ ಗೌರವಧನ

ʼವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದರೆ ನಿಮ್ಮ ಕೆಲಸ ಮುಗಿಯಿತು ಎಂಬುದು ಸರಿಯಾದ ಧೋರಣೆ ಅಲ್ಲ. ಉಸ್ತುವಾರಿ ಸಚಿವರಾಗಿ ನೀವೇನು ಮಾಡಿತ್ತಿರುವಿರಿ ಎಂಬುದು ಮುಖ್ಯವಾಗುತ್ತದೆ. ಸಚಿವರಿಗೆ ಪತ್ರ ಬರೆದು ಅಸಹಾಯಕತೆ ತೋರಿಸಿದ್ದು ಸರ್ಕಾರದ ಆಡಳಿತ ವ್ಯವಸ್ಥೆಯೇ ಹಾಳಾಗಿದೆ ಎಂಬುದು ಸ್ಪಷ್ಟಪಡಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಇದರ ನೈತಿಕ ಹೊಣೆ ಹೊತ್ತು ನೀವು ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ. ಬ್ರಿಮ್ಸ್ ಬಗ್ಗೆ ತನಿಖೆ ನಡೆಯಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿ. ವ್ಯವಸ್ಥೆ ಸಂಪೂರ್ಣ ಸುಧಾರಣೆಯಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಈ ನಿಟ್ಟಿನಲ್ಲಿ ಪಕ್ಷ ಜನಹಿತದಿಂದ ಹೋರಾಟ ಮಾಡಲಿದೆʼ ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಿಧ ಕ್ಷೇತ್ರಗಳ ಗಣ್ಯರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 71...

ಹಾವೇರಿ | ಕಬ್ಬು ಬೆಲೆ ನಿಗದಿಗೆ ತಜ್ಞರ ವರದಿ ಬರಬೇಕಾಗಿದೆ: ಸಚಿವ ರುದ್ರಪ್ಪ ಲಮಾಣಿ

"ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ತಜ್ಞರ ಸಮಿತಿಯ ವರದಿ ಬರಬೇಕಾಗಿದೆ. ವರದಿ ಬಂದ...

ಬಾಗೇಪಲ್ಲಿ | ಶಾಸಕ ಸುಬ್ಬಾರೆಡ್ಡಿಯ ಎಲ್ಲಾ ಹಗರಣಗಳ ವಿರುದ್ದ ನ.11 ರಂದು ಬೃಹತ್ ಹೋರಾಟ

ಸರ್ಕಾರಿ ಅಧಿಕಾರಿಗಳಿಂದ, ಕ್ರಷರ್ ಮಾಲೀಕರಿಂದ ವಸೂಲಿ ಮಾಡಿರುವ ಹಾಗೂ ಬಡ ರೈತರಿಂದ...

ವಿಜಯಪುರ | ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾಳಜಿ: ಹೊನವಾಡದಲ್ಲಿ ಸರ್ಕಾರಿ ಶಾಲೆಗೆ ನೂತನ ಕಟ್ಟಡ

ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ, ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ...