ಬೀದರ್‌ | ಜನಮನ ಸೆಳೆದ ʼಶಿವಶರಣ ಹರಳಯ್ಯʼ ನಾಟಕ

Date:

ಔರಾದ್ ಪಟ್ಟಣದ ಶ್ರೀ ಸಾಯಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಸಾಯಿ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಆಯೋಜಿಸಿದ ಕನ್ನಡ ದೀಪೋತ್ಸವ ಹಾಗೂ ʼಶಿವಶರಣ ಹರಳಯ್ಯʼ ನಾಟಕ ಪ್ರದರ್ಶನ ಜನಮನ ಸೆಳೆಯಿತು.

- Advertisement -

ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ʼನಾಟಕಗಳು ಸಮಾಜದ ಕನ್ನಡಿಯಂತಿದ್ದು, ಅವು ಜನಸಾಮನ್ಯರ ಮೇಲೆ ಹೆಚ್ಚು ಪ್ರಭಾವ ಬೀರುವ ಅತ್ಯಂತ ಗಟ್ಟಿ ಮಾಧ್ಯಮ. ಹಿಂದಿನಿಂದಲೂ ನಾಟಕಗಳು ಜನರಿಗೆ ಮನರಂಜನೆಯ ಜೊತೆಗೆ ಬದುಕಿನ ಮರ್ಮವನ್ನೂ ಅರುಹಿ, ಒಳ್ಳೆಯದು ಕೆಟ್ಟದ್ದು ಎಂದು ತಿಳಿಹೇಳುವ ಪಾಠಗಳಾಗಿದ್ದವು. ಇದರಿಂದ ಸಮಾಜ ತನ್ನಿಂದ ತಾನೇ ಸುಧಾರಿಸಿಕೊಳ್ಳಲು ಸಹಾಯವಾಗುತ್ತಿತ್ತುʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಕಸಾಪ ತಾಲೂಕು ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, ʼಇಂದು ಸಿನಿಮಾ, ಟಿ.ವಿ. ಮೊಬೈಲ್ ಸೇರಿದಂತೆ ಮನರಂಜನೆಗಾಗಿ ಹಲವಾರು ಮಾಧ್ಯಮಗಳಿದ್ದರೂ ಅವು ನಾಟಕದಷ್ಟು ಪರಿಣಾಮಕಾರಿಯಲ್ಲ. ನಾಟಕಗಳು ಬದುಕಿನ ಸೌಂದರ್ಯ ಹಾಗೂ ಬವಣೆ ಸೇರಿದಂತೆ ಎಲ್ಲ ಮಗ್ಗುಲುಗಳನ್ನೂ ನಮ್ಮ ಕಣ್ಣೆದುರೇ ತೋರುವುದರ ಜೊತೆಗೆ ಸರಿ ತಪ್ಪು, ಒಳಿತು ಕೆಡುಕುಗಳನ್ನೂ ಅನಾವರಣಗೊಳಿಸುತ್ತವೆ ಇದರಿಂದಾಗಿಯೇ ಒಳ್ಳೆಯ ಮೌಲ್ಯಗಳನ್ನು ಹೊತ್ತ ನಾಟಕ ಜನರಿಗೆ ಸನ್ಮಾರ್ಗವನ್ನು ತೋರುತ್ತವೆʼ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷೆ ಸರುಬಾಯಿ ಘುಳೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಬಸವಾದಿ ಶರಣರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕೆಲಸ ಖುಷಿ ತಂದಿದೆʼ ಎಂದರು.

WhatsApp Image 2025 11 03 at 10.24.30 PM

ಇದೇ ವೇಳೆ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನೀಲ ದೇಶಮುಖ, ನಿವೃತ್ತ ಬಸ್ ಚಾಲಕ ದೇವಪ್ಪ, ದೇವಸ್ಥಾನದ ಆವರಣ ರಂಗೋಲಿ ಮೂಲಕ ಅಲಂಕರಿಸಿದ ಪೋಲಪ್ಪ ಪವಾರ್ ಹಾಗೂ ರಮೇಶ ಪಾಂಚಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ : ಬೀದರ್ | ಕೆಟಿಪಿಪಿ ನಿಯಮ ಉಲ್ಲಂಘನೆ: ಹುಲಸೂರ ಪಿಡಿಒ ಅಮಾನತು

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜ ಹೆಬ್ಬಾಳೆ, ಹಿರಿಯರಾದ ಗುಂಡಯ್ಯ ರಘುನಾಥ ಬಿರಾದಾರ, ಭೀಮಾಶಂಕರ ಜೀರ್ಗೆ, ವಿಜಯಕುಮಾರ ಶಾಸ್ತ್ರಿ, ಪಿಎಸ್ಐ ವಸೀಮ ಪಟೇಲ್, ಅಬಕಾರಿ ಇನ್ಸ್‌ಪೆಕ್ಟರ್ ಶಬೀರ್, ಶಿವಾನಂದ ಮೊಕ್ತೆದಾರ್, ಅಶೋಕ ಶೆಂಬೆಳ್ಳೆ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನಳಗೆ, ಸಂದೀಪ ಪಾಟೀಲ್, ಮಹಾನಂದಾ ಎಂಡೆ, ರಾಜೇಂದ್ರ ನಾಯ್ಕ್, ಮಹಾದೇವ ಶಿಂಧೆ, ಅನೀಲ ಮೇತ್ರೆ ಸೇರಿದಂತೆ ಇನ್ನಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಕಳವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ...

ಯಲ್ಲಾಪುರ | ಉಡ ಬೇಟೆ ಆರೋಪ: ತಂದೆ-ಮಗ ಬಂಧನ

ಅಕ್ರಮವಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ...

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....