ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Date:

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದಿಂದ 2025-26ನೇ ಸಾಲಿನಲ್ಲಿ 1,970 ಮಂದಿಗೆ ಬಡ್ಡಿ ರಹಿತ ವ್ಯಾಪಾರ ಸಾಲ ನೀಡಲಾಗಿದೆ ಎಂದು ಸಂಘದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಮುಜ್ತಬಾ ಖಾನ್ ಹೇಳಿದರು.

- Advertisement -

ನಗರದ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‍ನಲ್ಲಿ ನಡೆದ ಸಂಘದ 9ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘ ಒಟ್ಟು ರೂ. 4.13 ಕೋಟಿ ಸಾಲ ವಿತರಿಸಿದೆ. ಒಟ್ಟು ವಹಿವಾಟು ರೂ. 97.26 ಕೋಟಿ ಆಗಿದ್ದು, ರೂ. 18.8 ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಸಂಘದಿಂದ ಬಡ್ಡಿ ರಹಿತ ವ್ಯಾಪಾರ ಸಾಲ, ಬಡ್ಡಿ ರಹಿತ ತುರ್ತು ಸಾಲ, ಶೈಕ್ಷಣಿಕ ಸಾಲ ಸೇರಿದಂತೆ ಅವಶ್ಯಕತೆ ಇರುವವರಿಗೆ ವಿವಿಧ ರೀತಿಯ ಸಾಲ ಕೊಡಲಾಗುತ್ತಿದೆ. ಬಡ್ಡಿ ರಹಿತ ಸಾಲ ಸಣ್ಣ ವ್ಯಾಪಾರಿಗಳಿಗೆ ಜೀವನಾಡಿಯಾಗಿದೆ. ವ್ಯಾಪಾರಿಗಳು ತಮ್ಮ ಲಾಭದ ಬಹು ಪಾಲನ್ನು ಬಡ್ಡಿಗೆ ಕೊಡುವುದನ್ನು ತಪ್ಪಿದೆ ಎಂದು ತಿಳಿಸಿದರು.

ಸಂಘದ ಬಡ್ಡಿ ರಹಿತ ಸಾಲದಿಂದ ಅನುಕೂಲವಾಗಿದೆ. ವ್ಯಾಪಾರದಲ್ಲಿ ಸಮೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಬಡ್ಡಿ ರಹಿತ ಸಾಲ ಪಡೆದ ಫಲಾನುಭವಿಗಳಾದ ಮುಹಮ್ಮದ್ ಅಬ್ದುಲ್ ನಯೀಮ್ ಹಾಗೂ ರವಿ ಕನೇರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ರಫೀಕ್ ಅಹಮ್ಮದ್ ಗಾದಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಕ್ರೋ ಫೈನಾನ್ಸ್ ಪರಿಣಿತರಾದ ಅಬ್ದುಲ್ ಜಬ್ಬಾರ್ ಸಿದ್ದಿಕಿ ಸಂಘದ ಅಭಿವೃದ್ಧಿಗೆ ಸಲಹೆ ನೀಡಿದರು.

ಸಹಕಾರ ಇಲಾಖೆಯ ಆಡಿಟ್ ವಿಭಾಗದ ಮಹೆಬೂಬ್ ಖಾನ್, ಹೈದರಾಬಾದ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಇಕ್ಬಾಲ್, ಬೀದರ್ ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಮಸಿಯುದ್ದೀನ್, ಸಂಘದ ನಿರ್ದೇಶಕರಾದ ಮುಹಮ್ಮದ್ ಆಸಿಫುದ್ದೀನ್, ಅಶ್ಫಾಕ್ ಅಹಮ್ಮದ್, ಮುಬಸ್ಸಿರ್ ಸಿಂಧೆ, ಮುಹಮ್ಮದ್ ಅಕ್ರಂ ಅಲಿ, ಮುಹಮ್ಮದ್ ಜಾವೀದ್, ಶೇಖರ್ ಚವಾಣ್, ಸಬಿಹಾ ಖಾನಂ, ಅಸ್ಮಾ ಬೇಗಂ, ಪ್ರಮುಖರಾದ ಓಂಪ್ರಕಾಶ್ ರೊಟ್ಟೆ, ಜಗದೀಶ್ವರ ಬಿರಾದಾರ, ವೇದಮಣಿ ಮತ್ತಿತರರು ಇದ್ದರು.

ಇದನ್ನೂ ಓದಿ : ಔರಾದ್ : ನಕಲಿ ವೈದ್ಯಕೀಯ ವೃತ್ತಿ: ಕ್ಲಿನಿಕ್ ಸೀಜ್

ಸಂಘದ ನಿರ್ದೇಶಕ ಮುಹಮ್ಮದ್ ನಿಜಾಮುದ್ದೀನ್ ವಾರ್ಷಿಕ ವರದಿ ವಾಚಿಸಿದರು. ರಹಮತ್ ಉಲ್ಲಾ ಖಾನ್ ಅವರ ಕುರ್‍ಆನ್ ಪಠಣದೊಂದಿಗೆ ಮಹಾಸಭೆ ಆರಂಭಗೊಂಡಿತು. ಸಂಘದ ಉಪಾಧ್ಯಕ್ಷ ಎಹತೆಶಾಮುಲ್ ಹಕ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...

ಮೋದಿ ಪ್ರಮಾಣಪತ್ರ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಗುಜರಾತ್...