​’ಅಪ್ರಾಪ್ತೆಯ ಜೊತೆ ವಿವಾಹವಾದರೆ ಪೋಕ್ಸೊದಿಂದ ಪಾರಾಗುವುದಿಲ್ಲ’: ದೆಹಲಿ ಹೈಕೋರ್ಟ್

Date:

ಅಪ್ರಾಪ್ತೆಯನ್ನು ವಿವಾಹವಾದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣವನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಬಾಲಕಿಯು ಆತನೊಂದಿಗೆ ವಾಸಿಸಲು ಇಚ್ಛಿಸುವುದು ಹಾಗೂ ಆತನ ಮೇಲಿರುವ ಅಪರಾಧ ಹೊಣೆಗಾರಿಕೆ ಇವೆರಡೂ ಕಾನೂನಿನ ದೃಷ್ಟಿಯಲ್ಲಿ ಎರಡು ಪ್ರತ್ಯೇಕ ವಿಚಾರಗಳಾಗಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

- Advertisement -

​ಮಕ್ಕಳನ್ನು ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯಿಂದ ರಕ್ಷಿಸುವ ವಿಶೇಷ ಉದ್ದೇಶದಿಂದಲೇ ಪೋಕ್ಸೊ (POCSO) ಕಾಯ್ದೆಯನ್ನು ಜಾರಿಗೆ ತರಲಾಗಿದೆ. 18 ವರ್ಷದೊಳಗಿನವರು ಲೈಂಗಿಕ ಕ್ರಿಯೆಗೆ ನೀಡುವ ಒಪ್ಪಿಗೆಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆಯಿಲ್ಲ ಎಂದು ಸಂಸತ್ತು ಉದ್ದೇಶಪೂರ್ವಕವಾಗಿಯೇ ವಯೋಮಿತಿಯನ್ನು ನಿಗದಿಪಡಿಸಿದೆ. ಲೈಂಗಿಕ ಕ್ರಿಯೆಗೆ ಬಲವಂತ ಅಥವಾ ವಂಚನೆ ನಡೆದಿದೆಯೇ ಎಂಬುದರ ಆಧಾರದ ಮೇಲೆ ಈ ರಕ್ಷಣೆ ನಿಂತಿಲ್ಲ ಎಂದು ನವೆಂಬರ್ 4ರಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ,...

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು,...

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ...

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ ಇತಿಹಾಸದ ದಾಖಲೆಯಷ್ಟೇ ಅಲ್ಲ, ಬದಲಿಗೆ ಮನುಷ್ಯನ ಮನಸ್ಸಿನ ಆಳದ ಸಂವೇದನೆಗಳ ಕನ್ನಡಿ. ಅಧಿಕಾರ ಸಿಕ್ಕ ಕೂಡಲೇ ಅದನ್ನು ಬಾಚಿಕೊಳ್ಳಲು ಹಾತೊರೆಯುವ...

​ವಿವಾಹವಾದ ಮಾತ್ರಕ್ಕೆ ಮಗುವಿಗೆ ಅಪರಾಧ ಕಾನೂನು ನೀಡುವ ರಕ್ಷಣೆ ಇಲ್ಲವಾಗುವುದಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಹೈಕೋರ್ಟ್ ಈ ವೇಳೆ ಉಲ್ಲೇಖಿಸಿದೆ. ಸಂತ್ರಸ್ತೆಯು ಅರ್ಜಿದಾರನೊಂದಿಗೆ (ಪತಿ) ವಾಸಿಸಲು ಬಯಸುತ್ತಿರುವುದು, ಅದಕ್ಕೆ ಆಕೆಯ ತಾಯಿಯ ಬೆಂಬಲ ಇರುವುದು ಮತ್ತು ಮಗುವಿನ ಭವಿಷ್ಯವನ್ನು ನ್ಯಾಯಾಲಯವು ಪರಿಗಣಿಸಿದೆ. ಆದರೆ, ಇವುಗಳ ಆಧಾರದ ಮೇಲೆ ಕೇವಲ ಮಾನವೀಯ ನೆಲೆಗಟ್ಟಿನಲ್ಲಿ ಪೋಕ್ಸೊದಂತಹ ಗಂಭೀರ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

2023ರಲ್ಲಿ ಅಪಹರಣ ಮತ್ತು ಪೋಕ್ಸೊ ಕಾಯ್ದೆಯಡಿ ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಉಭಯ ಪಕ್ಷಗಳ ನಡುವಿನ ರಾಜಿ ಮತ್ತು ಅವರ ವೈವಾಹಿಕ ಸಂಬಂಧದ ಆಧಾರದ ಮೇಲೆ ಈ ಅರ್ಜಿ ಸಲ್ಲಿಸಲಾಗಿತ್ತು.
​ಫೆಬ್ರವರಿ 2023ರಲ್ಲಿ ತನ್ನ 15 ವರ್ಷದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದರು. ಡಿಸೆಂಬರ್ 2023ರಲ್ಲಿ ಬಾಲಕಿ ಪತ್ತೆಯಾದಾಗ ಆಕೆ ಗರ್ಭಿಣಿಯಾಗಿದ್ದಳು. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದ ಬಾಲಕಿ, ತಾನು ಸ್ವಇಚ್ಛೆಯಿಂದ ಆತನೊಂದಿಗೆ ಹೋಗಿದ್ದು, ತನ್ನ ಒಪ್ಪಿಗೆಯಿಂದಲೇ ದೈಹಿಕ ಸಂಪರ್ಕ ಬೆಳೆಸಿರುವುದಾಗಿ ತಿಳಿಸಿದ್ದಳು.

​ತಾವು 2023ರ ಫೆಬ್ರವರಿಯಲ್ಲಿ ವಿವಾಹವಾಗಿದ್ದು, 2024ರ ಜೂನ್‌ನಲ್ಲಿ ಮಗು ಜನಿಸಿದೆ. ಸದ್ಯ ಕುಟುಂಬವಾಗಿ ಸಂತೋಷದಿಂದ ಜೀವಿಸುತ್ತಿರುವುದಾಗಿ ಅರ್ಜಿದಾರರ ಪರ ವಕೀಲರು ವಾದಿಸಿದರು. ಆದರೆ, ಇದನ್ನು ಸರ್ಕಾರಿ ಅಭಿಯೋಜಕರು (ಪ್ರಾಸಿಕ್ಯೂಟರ್) ತೀವ್ರವಾಗಿ ವಿರೋಧಿಸಿದರು. ಶಾಲಾ ದಾಖಲೆಗಳ ಪ್ರಕಾರ ಬಾಲಕಿಯ ಜನನ ದಿನಾಂಕ 2008ರ ಮಾರ್ಚ್ 15 ಆಗಿದ್ದು, ಫೆಬ್ರವರಿ 2023ರಲ್ಲಿ ಮನೆ ಬಿಟ್ಟು ಹೋಗುವಾಗ ಆಕೆಗೆ ಕೇವಲ 14 ವರ್ಷ 10 ತಿಂಗಳು ವಯಸ್ಸಾಗಿತ್ತು. ಹೀಗಾಗಿ ವಿವಾಹ ಅಥವಾ ರಾಜಿ ಸಂಧಾನದ ಆಧಾರದ ಮೇಲೆ ಈ ಪ್ರಕರಣವನ್ನು ಕೈಬಿಡಲಾಗದು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

​ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, “ಲಭ್ಯವಿರುವ ದಾಖಲೆಗಳು ವ್ಯಕ್ತಿ ಮತ್ತು ಅಪ್ರಾಪ್ತೆಯ ನಡುವಿನ ದೈಹಿಕ ಸಂಪರ್ಕವನ್ನು ಮೇಲ್ನೋಟಕ್ಕೆ ದೃಢಪಡಿಸುತ್ತವೆ ಮತ್ತು ಅರ್ಜಿದಾರನು ತಾನೇ ಮಗುವಿನ ತಂದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯವು ಗರ್ಭಧಾರಣೆಗೆ ಕಾರಣವಾಗಿದ್ದರೆ ಅದು ಪೋಕ್ಸೊ ಕಾಯ್ದೆಯಡಿ ಗಂಭೀರ ಸ್ವರೂಪದ ಅಪರಾಧವಾಗುತ್ತದೆ” ಎಂದು ಅಭಿಪ್ರಾಯಪಟ್ಟಿತು.

​ಮಾನವೀಯತೆಯ ಆಧಾರದಲ್ಲಿ ಪ್ರಕರಣ ರದ್ದು ಮಾಡಲು ನಿರಾಕರಿಸಿದ ಹೈಕೋರ್ಟ್, ಸಂವಿಧಾನದ 142ನೇ ವಿಧಿಯಡಿ ಲಭ್ಯವಿರುವ ಅಸಾಧಾರಣ ಅಧಿಕಾರ ವ್ಯಾಪ್ತಿಯಲ್ಲಿ ಪರಿಹಾರ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅರ್ಜಿದಾರನಿಗೆ ಅವಕಾಶ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಕಲಿ ಕೋರ್ಟ್ ಆದೇಶ ಆಧರಿಸಿ ಬೆಟ್ಟಿಂಗ್ ವೆಬ್‌ಸೈಟ್‌ ಬ್ಲಾಕ್‌: ಟೆಲಿಕಾಂ ಕಾರ್ಯದರ್ಶಿಗೆ ಪ್ರಧಾನಿ ಕಚೇರಿ ಸಮನ್ಸ್

ನಕಲಿ ನ್ಯಾಯಾಲಯದ ಆದೇಶಗಳನ್ನು ಆಧರಿಸಿ 100ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ (ಬ್ಲಾಕ್)...

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಸಹಕರಿಸಬೇಕು: ಡಿಕೆಶಿ

"ತಮಿಳುನಾಡಿನ 177 ಟಿಎಂಸಿ ನೀರಿನ ಹಕ್ಕಿನ ರಕ್ಷಣೆಯ ಜೊತೆಗೆ ಕರ್ನಾಟಕದ ಹಿತಾಸಕ್ತಿ...

ಶಿವಮೊಗ್ಗ | ಚಿನ್ನಕ್ಕೆ ತುಕ್ಕು ಹಿಡಿಯುವ ಕಾಲ ಬಂದಿದೆ: ಮಹಮ್ಮದ್ ಕುಂಞಿ

ಚಿನ್ನದಂತಹ ಮನಸ್ಸು ಹೊಂದಿದ್ದ ಭಾರತೀಯರು ಇಂದು ಪರಸ್ಪರ ಜನಾಂಗ ದ್ವೇಷ ಮಾಡುವ...