ಜೀವ ಉಳಿಸುವ ಔಷಧಿಗಳ ಹೆಸರಿನಲ್ಲಿ ‘ಹಗಲು ದರೋಡೆ’: ಕೇಂದ್ರಕ್ಕೆ ಸುಪ್ರೀಂ ಚಾಟಿ

Date:

ಕ್ಯಾನ್ಸರ್ ಸೇರಿದಂತೆ ಅತ್ಯಗತ್ಯ ಔಷಧಿಗಳ ಸಗಟು ದರ (ಚಿಲ್ಲರೆ ವ್ಯಾಪಾರಿಗಳಿಗೆ ನೀಡುವ ದರ) ಹಾಗೂ ಗ್ರಾಹಕರಿಗೆ ಮಾರಾಟ ಮಾಡುವ ಗರಿಷ್ಠ ಚಿಲ್ಲರೆ ದರಗಳ (MRP) ನಡುವಿನ ಅಗಾಧ ವ್ಯತ್ಯಾಸದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಪರೀತ ಬೆಲೆ ಏರಿಕೆಯು ತೆರಿಗೆದಾರರ ಮೇಲೆ ಭಾರೀ ಹೊರೆ ಹೊರಿಸುತ್ತಿದ್ದು, ಇದೊಂದು ರೀತಿಯ ‘ಕ್ರೂರ ಸುಲಿಗೆ’ (Carnage) ಎಂದು ನ್ಯಾಯಾಲಯ ಬಣ್ಣಿಸಿದೆ.

- Advertisement -

​ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ವಿಚಾರಣೆ ನಡೆಸಿತು. ‘ಔಷಧಿಗಳ ಬೆಲೆ ನಿಯಂತ್ರಣ ಆದೇಶ (DPCO)- 2013’ರ ಅಡಿಯಲ್ಲಿ ನಿಗದಿಪಡಿಸಲಾದ ಶೇಕಡಾ 16ರಷ್ಟು ಚಿಲ್ಲರೆ ವ್ಯಾಪಾರಿಗಳ ಲಾಭಾಂಶವನ್ನು (ಮಾರ್ಜಿನ್) ಎಲ್ಲಾ ಅಗತ್ಯ ಔಷಧಿಗಳಿಗೂ ಏಕರೂಪವಾಗಿ ಏಕೆ ಅನ್ವಯಿಸಬಾರದು ಎಂದು ಪೀಠವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. “ಎಲ್ಲಾ ಔಷಧಿಗಳ ಎಂಆರ್‌ಪಿ ಮೇಲೂ ಶೇ.16ರಷ್ಟು ಮಾರ್ಜಿನ್ ಅನ್ನು ಏಕೆ ಕಾಯ್ದುಕೊಳ್ಳಬಾರದು? ಈ ದುಬಾರಿ ಬೆಲೆಯಿಂದಾಗಿ ಅಂತಿಮವಾಗಿ ನಷ್ಟವಾಗುವುದು ತೆರಿಗೆದಾರರಿಗೆ. ಇದೊಂದು ರೀತಿಯ ಸುಲಿಗೆಯಷ್ಟೇ,” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಕ್ಯಾನ್ಸರ್ ಔಷಧಿಯೊಂದರ ಕಳವಳಕಾರಿ ಉದಾಹರಣೆ ನೀಡಿದರು. ಚಿಲ್ಲರೆ ವ್ಯಾಪಾರಿಗಳಿಗೆ ಕೇವಲ ₹3,000ಕ್ಕೆ ಪೂರೈಕೆಯಾಗುವ ಕ್ಯಾನ್ಸರ್ ಔಷಧಿಯನ್ನು ರೋಗಿಗಳಿಗೆ ಬರೋಬ್ಬರಿ ₹27,000ಕ್ಕೆ ಮಾರಾಟ ಮಾಡಲಾಗುತ್ತಿದೆ. “ಸುಮಾರು ಹತ್ತು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದು, ಈ ಮಧ್ಯದ ₹24,000 ಹಣ ಯಾರ ಜೇಬಿಗೆ ಸೇರುತ್ತಿದೆ? ಈ ಅಜಗಜಾಂತರ ವ್ಯತ್ಯಾಸವೇಕೆ?” ಎಂದು ಅವರು ಖಾರವಾಗಿ ಪ್ರಶ್ನಿಸಿದರು.

​ಹಾಗೆಯೇ, ರಕ್ತದೊತ್ತಡ/ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಾಮಾನ್ಯವಾಗಿ ಬಳಸುವ ‘ರೊಸಾವಾಸ್’ (Rosavas) ಎಂಬ ಔಷಧಿಯ ಬೆಲೆ ಒಂದು ಸ್ಟ್ರಿಪ್‌ಗೆ ₹240 ಇದೆ (ಇದು ಬೆಲೆ ನಿಯಂತ್ರಣ ಪಟ್ಟಿಯಲ್ಲಿಲ್ಲ). ಆದರೆ, ಇದೇ ಔಷಧಿಯನ್ನು ‘ಆಸ್ಪಿರಿನ್’ ಜೊತೆ ಸಂಯೋಜಿಸಿ ಮಾರಿದರೆ ಅದರ ಬೆಲೆ ಕೇವಲ ₹70 ಇದೆ (ಇದು ಬೆಲೆ ನಿಯಂತ್ರಣ ಪಟ್ಟಿಯಲ್ಲಿದೆ). ವಾಸ್ತವವಾಗಿ ಎರಡು ಔಷಧಿಗಳ ಸಂಯೋಜನೆಗೆ (Combination) ಹೆಚ್ಚಿನ ಬೆಲೆ ಇರಬೇಕಿತ್ತು, ಆದರೆ ಇಲ್ಲಿನ ಬೆಲೆ ತಾರತಮ್ಯ ಅಚ್ಚರಿ ಮೂಡಿಸುವಂತಿದೆ ಎಂದು ಅವರು ಬೆಟ್ಟು ಮಾಡಿದರು.

Advertisements

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಕಳವಳವನ್ನು ಒಪ್ಪಿಕೊಂಡರು. “ಈ ವಿಪರೀತ ಬೆಲೆ ಏರಿಕೆಯಿಂದ ಔಷಧಿ ತಯಾರಿಕಾ ಕಂಪನಿಗಳಿಗೆ ಲಾಭವಾಗುತ್ತಿಲ್ಲ, ಬದಲಾಗಿ ಖಾಸಗಿ ಆಸ್ಪತ್ರೆಗಳು ಇದರ ಸಂಪೂರ್ಣ ಲಾಭ ಪಡೆಯುತ್ತಿವೆ. ಎಲ್ಲವನ್ನೂ ಸರಿದೂಗಿಸಿಕೊಂಡು ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಿದೆ,” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ತಮ್ಮದೇ ಆದ ಆಂತರಿಕ ಔಷಧಾಲಯ (ಫಾರ್ಮಸಿ) ಗಳಿಂದಲೇ ಔಷಧಿಗಳನ್ನು ಖರೀದಿಸುವಂತೆ ರೋಗಿಗಳನ್ನು ಒತ್ತಾಯಿಸುತ್ತವೆ. ಇದರಿಂದಾಗಿ ರೋಗಿಗಳಿಗೆ ಹೊರಗಡೆ ಕಡಿಮೆ ಬೆಲೆಗೆ ಔಷಧಿ ಖರೀದಿಸುವ ಆಯ್ಕೆಯೇ ಇಲ್ಲದಂತಾಗಿದೆ ಎಂದು ಸುಪ್ರೀಂ ಪೀಠವು ಗಂಭೀರವಾಗಿ ಪರಿಗಣಿಸಿತು.

​ಅಲ್ಲದೆ, ‘ಆಯುಷ್ಮಾನ್ ಭಾರತ್’ನಂತಹ ಸರ್ಕಾರಿ ಅನುದಾನಿತ ಆರೋಗ್ಯ ಯೋಜನೆಗಳ ಅಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದಾಗ, ಈ ಅತಿಯಾದ ಔಷಧಿಗಳ ವೆಚ್ಚವನ್ನು ಅಂತಿಮವಾಗಿ ತೆರಿಗೆದಾರರೇ ಭರಿಸಬೇಕಾಗುತ್ತದೆ. ಇದು ಸಾರ್ವಜನಿಕ ಹಣಕಾಸಿನ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ ಎಂದು ನ್ಯಾಯಾಲಯವು ಎಚ್ಚರಿಸಿತು.

ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಜನರಿಕ್ ಔಷಧಿಗಳ ಬೆಲೆಗಳನ್ನು ನಿಯಂತ್ರಿಸಿ, ಅವು ಜನಸಾಮಾನ್ಯರಿಗೆ ಕೈಗೆಟಕುವಂತೆ ಮಾಡಲು ನಿರ್ದೇಶನ ಕೋರಿ ವಕೀಲ ಕಿಶನ್ ಚಂದ್ ಜೈನ್ ಮತ್ತು ಮಕ್ಕಳ ಶಸ್ತ್ರಚಿಕಿತ್ಸಕ ಸಂಜಯ್ ಕುಲಶ್ರೇಷ್ಠ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

​ಪ್ರಸ್ತುತ ಇರುವ ಔಷಧಿ ಬೆಲೆ ನಿಯಂತ್ರಣ ವ್ಯವಸ್ಥೆಯ ಸಮಗ್ರ ವಿವರಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಾಲಾವಕಾಶ ಕೋರಿದ್ದರಿಂದ, ಪೀಠವು ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಇದೇ ಪ್ರಕರಣದ ವಿಚಾರಣೆ ವೇಳೆ, ಔಷಧಿಗಳ ಸಗಟು ಬೆಲೆಗೂ ಹಾಗೂ ಗರಿಷ್ಠ ಚಿಲ್ಲರೆ ಬೆಲೆಗೂ (MRP) ಇರುವ ಈ ಭಾರೀ ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ‘ಹಗಲು ದರೋಡೆ’ (dacoity) ಎಂದು ಕರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರಿಲ್ಲದ ಸಂಪುಟ; ಮಾತು ತಪ್ಪಿತೇ ಕಾಂಗ್ರೆಸ್?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...