ಬೀದರ್ | ಅನುಭವ ಮಂಟಪ ಉತ್ಸವ: ಅಶೋಕ ದೊಮ್ಮಲೂರು, ಬಸವರಾಜ ಧನ್ನೂರು ಸೇರಿ ನಾಲ್ವರಿಗೆ ಗೌರವ

Date:

ಬಸವಕಲ್ಯಾಣದಲ್ಲಿ ನಡೆಯಲಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-2026ರ ಅಂಗವಾಗಿ ಅನುಭವಮಂಟಪದಿಂದ ನೀಡಲಾಗುವ 2026ನೇ ಸಾಲಿನ ಪ್ರಶಸ್ತಿಗಳನ್ನು ಪೂಜ್ಯ ಬಸವಲಿಂಗ ಪಟ್ಟದ್ದೇವರು ಘೋಷಿಸಿದ್ದಾರೆ.

- Advertisement -

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ಬೆಂಗಳೂರಿನ ಅಶೋಕ ದೊಮ್ಮಲೂರು ಅವರಿಗೆ ಶರಣ ಬಾಬಾಸಾಹೇಬ್ ವಾರದ ಸ್ಮರಣಾರ್ಥವಾಗಿ ನೀಡುವ ‘ಡಾ.ಫ.ಗು.ಹಳಕಟ್ಟಿ ಪ್ರಶಸ್ತಿ’ ಘೋಷಿಸಲಾಗಿದೆ.

ದೊಮಲೂರ ಅವರು ದೇಶ-ವಿದೇಶಗಳ ಮಠಗಳು, ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿರುವ 60 ಲಕ್ಷಕ್ಕೂ ಅಧಿಕ ತಾಳೆಗರಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

ಬೀದರ್‌ನ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರು ಅವರಿಗೆ ಡಾ.ಬಿ.ವಿ.ಪಟೇಲ್ ಸ್ಮರಣಾರ್ಥವಾಗಿ ನೀಡುವ ‘ಶರಣ ಹರ್ಡೇಕರ ಮಂಜಪ್ಪ ಪ್ರಶಸ್ತಿ’ ಘೋಷಿಸಲಾಗಿದೆ.

ಉದ್ಯಮಶೀಲತೆ, ಬಸವತತ್ವದ ಬದ್ಧತೆ, ಸಂಘಟನಾ ಸಾಮರ್ಥ್ಯ ಹಾಗೂ ನಿಸ್ವಾರ್ಥ ಸಮಾಜಸೇವೆಯ ಮೂಲಕ ಉದ್ಯೋಗ ಸೃಷ್ಟಿ, ಶಿಕ್ಷಣ ದಾಸೋಹ, ವಚನ ಸಾಹಿತ್ಯ ಪ್ರಸಾರ, ಧಾರ್ಮಿಕ ಜಾಗೃತಿ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಲಬುರಗಿಯ ವೈದ್ಯ ಡಾ.ಗುರುಲಿಂಗಯ್ಯ ಸಿದ್ಧಯ್ಯ ಹಿರೇಮಠ ಅವರಿಗೆ ‘ಶರಣ ವೈದ್ಯ ಸಂಗಣ್ಣ ಪ್ರಶಸ್ತಿ’ ನೀಡಲಾಗುತ್ತಿದೆ.

1007028115
ಡಾ.ಆಕಾಶ ಮೋಳಕೆರೆ, ಡಾ.ಗುರುಲಿಂಗಯ್ಯ‌ ಹಿರೇಮಠ

ನಾಟಿವೈದ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಇವರು, ಪರಂಪರಾಗತ ನಾಟಿವೈದ್ಯ ಪದ್ಧತಿಯ ಮೂಲಕ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಇವರ ಕುಟುಂಬದಲ್ಲಿಯೂ ನಾಟಿವೈದ್ಯರ ಪರಂಪರೆ ಮುಂದುವರಿದಿದೆ.

ಕಲಬುರಗಿಯ ಆಕಾಶ ಮಲ್ಲಿಕಾರ್ಜುನ ಮೋಳಕೆರೆ ಅವರಿಗೆ ‘ಶರಣ ಒಕ್ಕಲಿಗ ಮುದ್ದಣ್ಣ ಪ್ರಶಸ್ತಿ’ ಘೋಷಿಸಲಾಗಿದೆ.

ಅರಣ್ಯ ಕೃಷಿ, ತೋಟಗಾರಿಕೆ ಹಾಗೂ ಸಾವಯವ ಆಹಾರ ಸಂಸ್ಕರಣೆ ಒಳಗೊಂಡ ಸಮಗ್ರ ಕೃಷಿ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿರುವ ಇವರು, ಒಬ್ಬ ವ್ಯಕ್ತಿಯೇ ಸುಮಾರು 100 ಹಸುಗಳನ್ನು ನಿರ್ವಹಿಸಬಹುದಾದ ವೈಜ್ಞಾನಿಕ ಹಾಗೂ ಶ್ರಮರಹಿತ ಗೋಶಾಲೆಯ ಮಾದರಿಯನ್ನೂ ವಿನ್ಯಾಸಗೊಳಿಸಿದ್ದಾರೆ.

ಇದನ್ನೂ ಓದಿ: ಬೀದರ್ ವಿಶ್ವವಿದ್ಯಾಲಯ ಆಡಳಿತ ಕುಲಸಚಿವರಾಗಿ ಧಮ್ಮ ಪ್ರಕಾಶ್ ಜ್ಯೋತಿ ನಿಯೋಜನೆ

ಈ ಎಲ್ಲ ಪ್ರಶಸ್ತಿಗಳನ್ನು 47ನೇ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವದ ಸಂದರ್ಭದಲ್ಲಿ ಪೂಜ್ಯರು ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | 74,000 ಅಡಿಕೆ ಮರಗಳನ್ನು ನೆಟ್ಟಿದ್ದೇನೆ, ಕೃಷಿಕರ ಸಮಸ್ಯೆ ಬಗ್ಗೆ ಅರಿವಿದೆ: ಮಧು ಬಂಗಾರಪ್ಪ

ಸಹಕಾರ ಸಂಘಗಳು ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ರೈತರ ಆರ್ಥಿಕ...

ಪರೀಕ್ಷೆಗಳಲ್ಲಿ ನಾಗರಿಕರನ್ನು ಧ್ವಂಸ ಮಾಡಬೇಕಿರುವ ಮಿಲಿಟರಿ ಟಾರ್ಗೆಟ್‌ಗಳು ಎಂದು ಗುರುತಿಸಿದ AI ಮಾಡೆಲ್‌ಗಳು

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಯುದ್ಧಭೂಮಿಯಲ್ಲಿ ಮುಕ್ತವಾಗಿ ಬಳಕೆಯಾದರೆ ಭವಿಷ್ಯದಲ್ಲಿ ಎದುರಾಗಬಹುದಾದ...

ಮನಿಲಾ: ಪತ್ರಕರ್ತರ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಮೋದಿ ಪೇಚಾಟ; ವಿಡಿಯೋ ವೈರಲ್!

23ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು...

ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ 3 ದಿನಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ....