ಓಟದ ಪರೀಕ್ಷೆಯಲ್ಲಿ ಕೇವಲ 3 ಸೆಕೆಂಡ್ ವಿಳಂಬ: ವಿಕಲಚೇತನ ಮಹಿಳೆಗೆ ಉದ್ಯೋಗ ನೀಡಲು ಜಾರ್ಖಂಡ್ ಹೈಕೋರ್ಟ್ ಆದೇಶ

Date:

ಸರ್ಕಾರಿ ಹುದ್ದೆಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ (ಓಟ) ಕೇವಲ 3 ಸೆಕೆಂಡ್ ತಡವಾಗಿ ಗುರಿ ತಲುಪಿದ್ದಕ್ಕಾಗಿ ಉದ್ಯೋಗದಿಂದ ವಂಚಿತರಾಗಿದ್ದ 38 ವರ್ಷದ ವಿಕಲಚೇತನ ಮಹಿಳೆಯ ನೆರವಿಗೆ ಬಂದಿರುವ ಜಾರ್ಖಂಡ್ ಹೈಕೋರ್ಟ್‌, ಆಕೆಗೆ ಮಾನವೀಯತೆ ನೆಲೆಯಲ್ಲಿ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

- Advertisement -

​ಗ್ರಾಮ ಮಟ್ಟದಲ್ಲಿ ಕಾವಲು ಕಾಯುವ ‘ಚೌಕಿದಾರ್’ ಹುದ್ದೆಗೆ 2025ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ದುಮ್ಕಾ ಜಿಲ್ಲೆಯ ಜರುವಾಡಿಹ್ ಗ್ರಾಮದ ಜುತಿಕಾ ಪಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ರೋಷನ್ ಅವರಿದ್ದ ಪೀಠವು ನವೆಂಬರ್ 4ರಂದು ಈ ಮಹತ್ವದ ತೀರ್ಪು ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

​ಅರ್ಜಿದಾರರು ‘ವಿಕಲಚೇತನರ ಹಕ್ಕುಗಳ ಕಾಯ್ದೆ– 2016’ರ ಅಡಿ ಚಲನವಲನ ದೋಷ (Locomotor disability) ಹೊಂದಿರುವವರ ಕೋಟಾದಡಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 5, 2025ರಂದು ನಡೆದಿದ್ದ ಲಿಖಿತ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾಗಿದ್ದರು. ಆದರೆ, ದೈಹಿಕ ಪರೀಕ್ಷೆಯ ವೇಳೆ ವಿಕಲಚೇತನರಿಗೆ ನೀಡಬೇಕಾದ ‘ಸಮಂಜಸವಾದ ವಿನಾಯಿತಿ’ (Reasonable accommodation) ಅಥವಾ ಹೆಚ್ಚುವರಿ ಸಮಯವನ್ನು ನೀಡದೆ, ಸಾಮಾನ್ಯ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ 10 ನಿಮಿಷಗಳ ಕಾಲಾವಕಾಶವನ್ನೇ ಇವರಿಗೂ ನೀಡಲಾಗಿತ್ತು. 10 ನಿಮಿಷ 3 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿದ ಕಾರಣಕ್ಕೆ ಅವರನ್ನು ಅನರ್ಹಗೊಳಿಸಲಾಗಿತ್ತು ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

​ದುಮ್ಕಾ ಜಿಲ್ಲಾಡಳಿತವು ಒಟ್ಟು 328 ಚೌಕಿದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ 13 ಹುದ್ದೆಗಳನ್ನು ವಿಕಲಚೇತನರಿಗೆ ಮೀಸಲಿಡಲಾಗಿತ್ತು. ಈ ಪೈಕಿ ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದು, ಇನ್ನೂ 11 ಹುದ್ದೆಗಳು ಖಾಲಿ ಉಳಿದಿವೆ ಎಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ದೈಹಿಕ ನ್ಯೂನತೆ ಹೊಂದಿರುವ ಅಭ್ಯರ್ಥಿಯನ್ನು ಸಾಮಾನ್ಯ ಅಭ್ಯರ್ಥಿಗಳ ಮಾನದಂಡದಲ್ಲೇ ಅಳೆದು, ಕೇವಲ ಮೂರು ಸೆಕೆಂಡುಗಳ ವಿಳಂಬವನ್ನು ಮುಂದಿಟ್ಟುಕೊಂಡು ಉದ್ಯೋಗ ನಿರಾಕರಿಸುವುದು ವಿಕಲಚೇತನರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

​ಸರ್ಕಾರದ ಪರ ವಕೀಲರು ವಾದ ಮಂಡಿಸಿ, “ನಿಯಮಗಳ ಪ್ರಕಾರ 8 ನಿಮಿಷದಲ್ಲಿ ಓಟ ಪೂರ್ಣಗೊಳಿಸುವ ಮಹಿಳೆಯರಿಗೆ 20 ಅಂಕ ಹಾಗೂ 10 ನಿಮಿಷದೊಳಗೆ ಪೂರ್ಣಗೊಳಿಸುವವರಿಗೆ 10 ಅಂಕ ನಿಗದಿಪಡಿಸಲಾಗಿತ್ತು. 10 ನಿಮಿಷ ಮೀರಿದರೆ ಅನರ್ಹಗೊಳಿಸುವ ನಿಯಮವಿತ್ತು. ಚೌಕಿದಾರ್ ನೇಮಕಾತಿ ನಿಯಮಾವಳಿ- 2015ರ ಪ್ರಕಾರ ವಿಕಲಚೇತನರಿಗೆ ದೈಹಿಕ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ನೀಡುವ ಯಾವುದೇ ಅವಕಾಶವಿಲ್ಲ,” ಎಂದು ಸಮರ್ಥಿಸಿಕೊಂಡಿದ್ದರು.

​ಆದರೆ ಸರ್ಕಾರದ ವಾದವನ್ನು ತಳ್ಳಿಹಾಕಿದ ಹೈಕೋರ್ಟ್‌, “ಸಂಸತ್ತು ರೂಪಿಸಿರುವ 2016ರ ಕಾಯ್ದೆಯ ನಿಯಮಗಳನ್ನು ಮೀರಿ ಸರ್ಕಾರದ ಯಾವುದೇ ಅಧಿಸೂಚನೆ ಅಥವಾ ನೇಮಕಾತಿ ನಿಯಮಗಳು ಮೇಲುಗೈ ಸಾಧಿಸಲು ಸಾಧ್ಯವಿಲ್ಲ,” ಎಂದು ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್‌ ‘ವಿಕಾಸ್ ಕುಮಾರ್ ವರ್ಸಸ್ ಯುಪಿಎಸ್‌ಸಿ’ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಪೀಠ, ಸರ್ಕಾರಿ ಉದ್ಯೋಗಗಳಲ್ಲಿ ವಿಕಲಚೇತನರಿಗೆ ತಾರತಮ್ಯ ಮಾಡಬಾರದು ಮತ್ತು ಅವರಿಗೆ ತಡೆರಹಿತ ವಾತಾವರಣ ಕಲ್ಪಿಸುವುದು ಸರ್ಕಾರದ ಕರ್ತವ್ಯ ಎಂದು ಎಚ್ಚರಿಸಿದೆ.

​ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರುವ ಅರ್ಜಿದಾರರು ವಿಕಲಚೇತನರ ಕೋಟಾದಡಿ ಖಾಲಿ ಇರುವ ಹುದ್ದೆ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ಆದೇಶದ ಪ್ರತಿಯನ್ನು ಸ್ವೀಕರಿಸಿದ ಎಂಟು ವಾರಗಳ ಒಳಗೆ ಅರ್ಜಿದಾರರಿಗೆ ನೇಮಕಾತಿ ಪತ್ರವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ದುಮ್ಕಾ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್‌ಗೆ (ಸಿಬ್ಬಂದಿ ವಿಭಾಗ) ನ್ಯಾಯಾಲಯ ನಿರ್ದೇಶನ ನೀಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

1.27 ಕೋಟಿ ಹಿಂದೂಗಳ ಹೆಸರು ಡಿಲೀಟ್- ಆಯೋಗದ ಕಡೆಗೆ ಬುಲ್ಡೋಜರ್ ತಿರುಗಿಸಿ ಎಂದ ಅಖಿಲೇಶ್

ಉತ್ತರಪ್ರದೇಶದ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರನ್ನು ಕೈಬಿಡಲಾಗಿದೆ ಎಂಬ...

ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ: ಭಯೋತ್ಪಾದಕ ಲತೀಫ್ ಭಟ್‌ಗಾಗಿ ಭದ್ರತಾ ಪಡೆಗಳ ಶೋಧ!

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 18) ಬೆಳಿಗ್ಗೆ...

ಜಂತರ್ ಮಂತರ್ ಪ್ರತಿಭಟನೆಗೆ ನಕಾರ: ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ದೆಹಲಿ ಪೊಲೀಸ್

ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿಗೆ...

ಪ್ರತಿಪಕ್ಷಗಳ 48 ಪ್ರಶ್ನೆಗಳಿಗೆ ಉತ್ತರಿಸಲು ಚುನಾವಣಾ ಆಯೋಗ ನಕಾರ; ಮುಂದಿನ ವಿಚಾರಣೆ ಡಿ.9ಕ್ಕೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷಗಳ ಮುಖಂಡರು...