ಔರಾದ್ ಪಟ್ಟಣದ ಎಂ.ನಾಮದೇವರಾವ ತಾರೆ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 77ನೇ ಸಂಸ್ಥಾಪನಾ ದಿನ ಹಾಗೂ ಧ್ವಜ ದಿನಾಚರಣೆಯನ್ನು ನ.7ರಂದು ಸಂಭ್ರಮದಿಂದ ಆಚರಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ದಿನದ ವಿಶೇಷ ಚೀಟಿಗಳನ್ನು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರಿಗೆ ಚೀಟಿಗಳನ್ನು ವಿತರಿಸಿ, ಸಂಸ್ಥೆಯ ಸೇವಾ ಚಟುವಟಿಕೆಗಳಿಗಾಗಿ ನಿಧಿ ಸಂಗ್ರಹಣೆಗೆ ಚಾಲನೆ ನೀಡಲಾಯಿತು.
ಔರಾದ್ ತಾಲ್ಲೂಕು ಅನುದಾನರಹಿತ ಶಾಲೆಗಳ ಸಂಘದ ಅಧ್ಯಕ್ಷ ಗುರುನಾಥ ದೇಶಮುಖ ಮಾತನಾಡಿ, “ಮಕ್ಕಳಲ್ಲಿ ಶಿಸ್ತು, ನಾಯಕತ್ವ, ಸೇವಾ ಮನೋಭಾವ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ” ಎಂದು ಹೇಳಿದರು.
ಶಾಲೆಯ ಅಧ್ಯಕ್ಷೆ ಲಕ್ಷ್ಮೀಬಾಯಿ ನಾಮದೇವರಾವ ತಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮಿಲಿಂದ್, ಕಮಲನಗರ ತಾಲ್ಲೂಕು ಅನುದಾನರಹಿತ ಶಾಲೆಗಳ ಸಂಘದ ಅಧ್ಯಕ್ಷ ರಾಜಕುಮಾರ್ ಹಂಬಲಪುರೆ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕಾಧ್ಯಕ್ಷ ಅನಿಲ್ ದೇವಕತ್ತೆ ಸೇರಿದಂತೆ ಪ್ರಮುಖರಾದ ನಾರಾಯಣ ಸ್ವಾಮಿ, ಗೌತಮ್ ತಾರೆ, ದಿಲೀಪ್ ತಾರೆ, ನಬಿ ಬಾಗವಾನ್ ಹಾಗೂ ಮಹೇಂದ್ರ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಂದಿನಿ ಭಾಲ್ಕೆ ಸ್ವಾಗತಿಸಿದರು. ನಾಗಸೇನ್ ತಾರೆ ನಿರೂಪಿಸಿದರು. ಜ್ಯೋತಿ ತಾರೆ ವಂದಿಸಿದರು.

ಶಾಲೆಯ ಶಿಕ್ಷಕರಾದ ಚೈತನ್ಯ, ಹೇಮಾ ಕೆ., ಸುಜಾತಾ, ಆಯಿಷಾ, ಸಾಬಾ, ಪಲ್ಲವಿ ಕೆ., ಅಂಬಿಕಾ, ಪಲ್ಲವಿ ಬಿ., ನಂದಿನಿ ಎ., ಆದಿತ್ಯ, ಲಕ್ಷ್ಮಣ್ ಆರ್., ಸುನೀತಾ ಎಲ್., ರುಕ್ಸಾರ್ ಬೇಗಂ, ಪೂಜಾ ಕಾಂಬ್ಳೆ, ಸುದರ್ಶನ್ ಹಾಗೂ ಭಾಗ್ಯಶ್ರೀ ದಯಡೆ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ : ಬೀದರ್ | ಬಗದಲ ಸೇತುವೆ ನಿರ್ಮಾಣಕ್ಕೆ ₹21 ಕೋಟಿ ಅನುದಾನಕ್ಕೆ ಶಾಸಕ ಬೆಲ್ದಾಳೆ ಆಗ್ರಹ





