ಬೀದರ್‌ | 3 ತಿಂಗಳಿಂದ ಕಲಾವಿದರ ಕೈಗೆ ಸೇರದ ಮಾಸಾಶನ : ತಪ್ಪದ ಅಲೆದಾಟ

Date:

ಸಂಕಷ್ಟದಲ್ಲಿರುವ ಹಿರಿಯ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿರುವ ʼಮಾಸಾಶನʼ ಮೂರು ತಿಂಗಳಿಂದ ಕಲಾವಿದರ ಕೈಸೇರಿಲ್ಲ. ಇದರಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿದ್ದ ಗೌರವಧನವನ್ನೇ ಅವಲಂಬಿಸಿದ್ದ ಜಿಲ್ಲೆಯ ಹಿರಿಯ ಕಲಾವಿದರು ಸಂಕಷ್ಟ ಬದುಕು ದೂಡುವಂತಾಗಿದೆ.

- Advertisement -

2025 ಮಾರ್ಚ್‌ ತಿಂಗಳವರೆಗೆ ಕಲಾವಿದರಿಗೆ ಮಾಸಾಶನ ಹಣ ಸಂದಾಯವಾಗಿದೆ. ಕೆಲ ಕಲಾವಿದರಿಗೆ ಮಾರ್ಚ್‌ ತಿಂಗಳ ಹಣ ಸಹ ಬಂದಿಲ್ಲ. ಇನ್ನು 2026ರ ಎಪ್ರಿಲ್‌, ಮೇ, ಜೂನ್‌ ಕಳೆದು ಜುಲೈ ಮೊದಲ ವಾರ ಕಳೆದರೂ ಕಲಾವಿದರಿಗೆ ಆರ್ಥಿಕ ನೆರವು ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಇದರಿಂದಾಗಿ ಕಲಾವಿದರು, ಸಾಹಿತಿಗಳು ಬ್ಯಾಂಕ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗಳಿಗೆ ನಿತ್ಯ ಅಲೆದಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ;...

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ...

ಬೀದರ್‌ ಜಿಲ್ಲೆಯಲ್ಲಿ 2022-23ರಲ್ಲಿ 632 ಜನ ಕಲಾವಿದರು, 2023-24ರಲ್ಲಿ 666 ಜನರಿಗೆ, 2024-25ರಲ್ಲಿ 713 ಹಾಗೂ ಪ್ರಸಕ್ತ ವರ್ಷ 2025-26ರಲ್ಲಿ ಒಟ್ಟು 792 ಜನ ಸಾಹಿತಿ, ಕಲಾವಿದರು ಇಲಾಖೆಯ ನೆರವು ಪಡೆಯುತ್ತಿದ್ದಾರೆ. 2025-26ನೇ ಸಾಲಿನಲ್ಲಿ ಇಲಾಖೆಯಿಂದ ಮಾಸಿಕ ಮಾಸಾಶನ ಪಡೆಯುತ್ತಿರುವ 792ಜನ ಸಾಹಿತಿ, ಕಲಾವಿದರ ಪೈಕಿ ಔರಾದ್‌ ತಾಲೂಕಿನಲ್ಲಿಯೇ 353 ಜನರಿದ್ದಾರೆ. ಇನ್ನು ಬೀದರ್-‌96, ಹುಲಸೂರ-83, ಬಸವಕಲ್ಯಾಣ-79, ಕಮಲನಗರ-75, ಚಿಟಗುಪ್ಪ-42, ಭಾಲ್ಕಿ -38 ಹಾಗೂ ಹುಮನಾಬಾದ್‌ ತಾಲೂಕಿನಲ್ಲಿ-26 ಜನ ಕಲಾವಿದರು ಮಾಸಿಕ ಮಾಸಾಶನ ಪಡೆಯುತ್ತಿರುವ ಅರ್ಹ ಕಲಾವಿದರಿದ್ದಾರೆ ಎಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ಅಂಕಿ-ಅಂಶಗಳು ಹೇಳುತ್ತಿವೆ.

ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಲಲಿತ ಕಲೆ ಸೇರಿ ವಿವಿಧ ಕಲಾ ಪ್ರಕಾರಗಳಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ, ಸಂಕಷ್ಟದಲ್ಲಿರುವ ಕಲಾವಿದರು ಹಾಗೂ ಸಾಹಿತಿಗಳಿಗೆ ಇಲಾಖೆ ಮಾಸಿಕ ಮಾಸಾಶನ ನೀಡುತ್ತಿದೆ. ಈ ಯೋಜನೆಯ ನಿಯಮ ಪ್ರಕಾರ ಫಲಾನುಭವಿಗಳಿಗೆ 58 ವರ್ಷ ವಯಸ್ಸಾಗಿರಬೇಕು. ಇಲಾಖೆ ನಡೆಸುವ ಸಂದರ್ಶನದಲ್ಲಿ ಆಯ್ಕೆಯಾದ ಅರ್ಹ ಕಲಾವಿದರಿಗೆ ಮಾಸಿಕ ₹2,500 ‘ಮಾಸಾಶನ’ ನೀಡಲಾಗುತ್ತಿದೆ.

ಮಾಸಿಕ ಮಾಸಾಶನ ಹಣವು ಕಲಾವಿದರಿಗೆ ಆಸ್ಪತ್ರೆ, ಔಷಧ ಖರೀದಿಯಂತಹ ವೆಚ್ಚಗಳಿಗೆ ಪಾವತಿಸಲು ಸಹಕಾರಿಯಾಗಿತ್ತು. ಕಲಾವಿದರು ಈಗ ಕುಟುಂಬದ ಸದಸ್ಯರನ್ನು ಅವಲಂಬಿಸಬೇಕಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಮಾಸಾಶನ ಬರದಿರುವುದರಿಂದ ʼಇನ್ಮುಂದೆ ಮಾಸಾಶನ ಹಣ ಬರುತ್ತದೊ ಅಥವಾ ಬಂದ್‌ ಆಗುತ್ತದೊʼ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

“ಮೂರು ತಿಂಗಳಿಂದ ಮಾಸಾಶನ ಹಣ ಬಂದಿಲ್ಲ. ಹಣ ಜಮೆಯಾಗಿರಬಹುದು ಎಂದು ವಾರಕ್ಕೊಮ್ಮೆ ಬ್ಯಾಂಕ್‌ಗೆ ತೆರಳಿ ಖಾತೆ ಚೆಕ್‌ ಮಾಡಿಸಿ ಬರಿಗೈಯಲ್ಲಿ ವಾಪಸ್‌ ಬರುತ್ತಿದ್ದೇವೆ. ಯಾವಾಗ ಹಣ ಬರುತ್ತದೆ ಎಂದು ಖಚಿತವಾಗಿಯೂ ಗೊತ್ತಾಗುತ್ತಿಲ್ಲ. ಈ ಯೋಜನೆಯನ್ನು ನಿಲ್ಲಿಸಲು ಹೀಗೆ ಮಾಡ್ತಾ ಇರಬಹುದೇ ಎಂಬುದು ಅರ್ಥವಾಗುತ್ತಿಲ್ಲ. ಯೋಜನೆಯ ಅಲ್ಪಹಣ ಬರದೇ ಇರುವುದರಿಂದ ನಮ್ಮ ದಿನನಿತ್ಯದ ಖರ್ಚು ವೆಚ್ಚಗಳಿಗೆ ತೊಂದರೆಯಾಗುತ್ತಿದೆ” ಎಂದು ಔರಾದ್‌ ತಾಲೂಕಿನ ಕೋಲಾಟ ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ,”ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆಯಡಿ ನೀಡುತ್ತಿದ್ದ ಅಲ್ಪ ಮಾಸಾಶನ ಕಳೆದ 3 ತಿಂಗಳಿಂದ ಸ್ಥಗಿತಗೊಂಡ ಪರಿಣಾಮ ಕಲಾವಿದರು ಚಿಂತೆಗೀಡಾಗಿದ್ದಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ವಿಚಾರಿಸಿದಾಗ ʼಮೃತ ಕಲಾವಿದರ ಹೆಸರು ಕೈಬಿಟ್ಟು, ವಾರದೊಳಗೆ ಮಾಸಾಶನ ಹಣ ನೇರವಾಗಿ ಅರ್ಹ ಕಲಾವಿದರ ಖಾತೆಗೆ ಜಮೆಯಾಗುತ್ತದೆʼ ಎಂದಿದ್ದಾರೆ. ಹೀಗಾಗಿ ಕಲಾವಿದರು ಯಾವುದೇ ಗೊಂದಲ ಆತಂಕಕ್ಕೆ ಒಳಗಾಗಬಾರದು” ಎಂದು ಹೇಳಿದರು.

ಇದನ್ನೂ ಓದಿ : ಬೀದರ್‌ | ಕೆಕೆಆರ್‌ಟಿಸಿ ಬಸ್‌-ಬೈಕ್‌ ಮಧ್ಯೆ ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು

ಈ ಬಗ್ಗೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮಾತನಾಡಿ, “ಈ ಹಿಂದೆ ಕಲಾವಿದರ ಮಾಸಾಶನ ಹಣ ಖಜಾನೆ-2 ಮೂಲಕ ಪಾವತಿಸಲಾಗುತ್ತಿತ್ತು, ಈಗ ಇಲಾಖೆ ನೂತನ ವ್ಯವಸ್ಥೆ ರೂಪಿಸಿದೆ. ಇದರಿಂದ ಮಾಸಾಶನ ಹಣ ಜಮೆಯಾಗಲು ವಿಳಂಬವಾಗುತ್ತಿದೆ. ಪ್ರತಿಯೊಬ್ಬ ಕಲಾವಿದರ ಮಾಹಿತಿಯನ್ನು ನೂತನ ವ್ಯವಸ್ಥೆಯ ಸೇವಾಸಿಂಧು ಪೋರ್ಟಲ್‌ ನಲ್ಲಿ ಅಳವಡಿಸಲಾಗುತ್ತಿದ್ದು, ಕೆಲ ಕಲಾವಿದರ ಹಣ ಜಮೆ ಮಾಡಲಾಗಿದ್ದು, ಉಳಿದವರ ಹಣ ಶೀಘ್ರದಲ್ಲಿಯೇ ಬಿಡುಗಡೆಯಾಗುತ್ತದೆ” ಎಂದು ತಿಳಿಸಿದ್ದಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಎಸ್‌ಸಿ ಮೀಸಲಾತಿ ಕೈಬಿಟ್ಟಿದ್ದಕ್ಕೆ ಆಕ್ರೋಶ: ಅ.16ರಂದು ಹೋರಾಟದ ಎಚ್ಚರ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ...

‘ನಮ್ಮನ್ನು ದಮನಿಸುವ ಪೊಲೀಸ್ ಆದೇಶ ಕೂಡಲೇ ರದ್ದಾಗಲಿ’: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಲಿಂಗತ್ವ ಅಲ್ಪಸಂಖ್ಯಾತರು

ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ...

ಎಸ್‌ಸಿ, ಎಸ್‌ಟಿ ಮೀಸಲಾತಿ ಶೇ.56ಕ್ಕೆ ಏರಿಕೆ ಮಾಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್!

ರಾಜ್ಯದ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ)...

ದೆಹಲಿಯಲ್ಲಿ ಹೆಚ್ಚಿದ ಕಟ್ಟೆಚ್ಚರ: ಒಂದು ತಿಂಗಳು 20,000 ಅರೆಸೇನಾ ಸಿಬ್ಬಂದಿ ನಿಯೋಜನೆ

ಪ್ರತಿಪಕ್ಷ 'ಇಂಡಿಯಾ' ಒಕ್ಕೂಟದ ಪ್ರತಿಭಟನೆ ಹಾಗೂ ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ...