ಬೀದರ್‌ | ಪುರಾತನ ʼಕರೇಜ್‌ʼಗೆ ಹಾನಿ : ಡಿಸಿ ಶಿಲ್ಪಾ ಶರ್ಮಾ ಭೇಟಿ, ಪರಿಶೀಲನೆ

Date:

ಬೀದರ್‌ ನಗರದ ನೌಬಾದ್-ಅಲಿಯಾಬಾದ್‌ ಸಮೀಪದ‌ ಪುರಾತನ ಕಾಲದ ʼಕರೇಜ್‌ʼ ಸುತ್ತಮುತ್ತ ಖಾಸಗಿಯವರು ನೆಲ ಅಗೆಯುತ್ತಿದ್ದು, ಇದರಿಂದ ‘ಕರೇಜ್‌’ನ ಸ್ವರೂಪಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ.

- Advertisement -

ಅಲಿಯಬಾದ್‌ ಸಮೀಪ ಇರುವ ʼಕರೇಜ್‌ ದ್ವಾರʼ ಎದುರಲ್ಲೇ ಜೆಸಿಬಿಯಿಂದ ನಾಲೆ ತೆಗೆಯುತ್ತಿರುವ ಕಾಮಗಾರಿ ಎಗ್ಗಿಲದೇ ನಡೆಯುತ್ತಿದೆ. ಇದರಿಂದ ನೆಲದಾಳದ ನೀರಿನ ಮಾರ್ಗಕ್ಕೂ ಧಕ್ಕೆಯಾಗುವ ಸಾಧ್ಯತೆಯಿದೆ. ಸುರಂಗ ಬಾವಿ ಮೂಲಕ ಹೋಗುವ ಸಮೀಪದ ಕಿರು ಪುಷ್ಕರಣಿಯನ್ನು ಅಗೆಯಲಾಗಿದೆ. ವರ್ಷಪೂರ್ತಿ ಒಂದೇ ಮಟ್ಟದಲ್ಲಿ ನೀರು ಹರಿಯುವುದು ಕರೇಜ್‌ ವಿಶೇಷ. ಈಗ ಖಾಸಗಿಯವರು ನೆಲ ಅಗೆದಿರುವುದರಿಂದ ನೀರು ವೇಗವಾಗಿ ಹರಿಯುತ್ತಿದ್ದು, ಕರೇಜ್‌ನ ನೀರು ಖಾಲಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ವಿನಯ್‌ ಕುಮಾರ್‌ ಮಾಳಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ :

ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಪುರಾತನ ಕರೇಜ್‌ ದ್ವಾರ ಸಮೀಪದಲ್ಲಿ ನೆಲ ಅಗೆಯುತ್ತಿದ್ದು, ಇದರಿಂದ ಸುರಂಗ ಬಾವಿ (ಕರೇಜ್) ಹಾನಿಯಾಗಿ ನೀರಿನ ಹರಿವಿನ ವ್ಯವಸ್ಥೆ ಅಡ್ಡಿಪಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ಅಲಿಯಾಬಾದ್‌ ಸಮೀಪದ ಕರೇಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.

WhatsApp Image 2026 01 15 at 4.34.19 PM 1
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ʼಕರೇಜ್‌ʼʼಗೆ ಭೇಟಿ ನೀಡಿ ಪರಿಶೀಲಿಸಿದರು.

ʼಅನಧಿಕೃತವಾಗಿ ನೆಲ ಅಗೆಯುವುದರಿಂದ ಪುರಾತನ ಕರೇಜ್‌ಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ನೆಲ ಅಗೆಯುವ ಖಾಸಗಿ ವ್ಯಕ್ತಿಗಳಿಗೆ ತಿಳಿಸಿದ ಅವರು ʼಈ ಬಗ್ಗೆ ನಾಳೆ ಸಭೆ ಕರೆದು ಪರಿಶೀಲಿಸಲಾಗುವುದುʼ ಎಂದಿದ್ದಾರೆʼ ಎಂದು ತಿಳಿದು ಬಂದಿದೆ.

ʼಬೀದರ್‌ ಕರೇಜ್‌ ಪ್ರವಾಸಿ ಸ್ಥಳವಷ್ಟೇ ಅಲ್ಲ, ಅದು ಅಂತರ್ಜಲಾಶಯ. ದೀರ್ಘಕಾಲೀನ ಯೋಜನೆ ರೂಪಿಸಿ, ಅದನ್ನು ಸಂರಕ್ಷಿಸಬೇಕಿದೆ. ಕರೇಜ್‌ ಅಭವೃದ್ಧಿಪಡಿಸಿ, ಸಂರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿದೆʼ ಎಂದು ವಿನಯ ಮಾಳಗೆ ತಿಳಿಸಿದ್ದಾರೆ.

ʼಕರೇಜ್‌ ಸಂರಕ್ಷಣೆ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಸ್ಪಂದಿಸಿ ಭೇಟಿ ನೀಡಿ ಪರಿಶೀಲಿಸಿದ್ದು ಸ್ವಾಗತಾರ್ಹ. ಖಾಸಗಿ ವ್ಯಕ್ತಿಗಳು ಕರೇಜ್‌ ಹತ್ತಿರ ನೆಲ ಅಗೆಯುತ್ತಿರುವುದನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದು ಕರೇಜ್ ಸಂರಕ್ಷಣೆ ಹಾಗೂ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಿದ್ದಾರೆ. ಭವಿಷ್ಯದ ದೃಷ್ಟಿಯಿಂದ ನೌಬಾದ್-ಅಲಿಯಾಬಾದ್‌ ಹತ್ತಿರದ ಪುರಾತನ ʼಕರೇಜ್‌ʼ ಅಭಿವೃದ್ಧಿಪಡಿಸಿ ವಿಶ್ವ ಪಾರಂಪರಿಕ ತಾಣವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕುʼ ಎಂದು ಕೋರಿದ್ದಾರೆ.

14-15ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ನಿರ್ಮಾಣಗೊಂಡಿರುವ ‘ಕರೇಜ್‌’ ನಿಜಕ್ಕೂ ಒಂದು ವಿಸ್ಮಯ. ಸುಮಾರು 3 ಕಿ.ಮೀ ಪ್ರದೇಶದವರೆಗೆ ವ್ಯಾಪಿಸಿಕೊಂಡಿದೆ. ಕರೇಜ್ ನಿರ್ವಹಣೆ ಹಾಗೂ ಗಾಳಿ, ಬೆಳಕಿನ ವ್ಯವಸ್ಥೆಗೆ ಅಲ್ಲಲ್ಲಿ 27 ತೆರೆದ ಬಾವಿಗಳನ್ನು (ವೆಂಟ್ಸ್‌) ನಿರ್ಮಿಸಲಾಗಿದ್ದು. ಈ ಪೈಕಿ 7 ತೆರೆದ ಬಾವಿಗಳನ್ನು ಗುರುತಿಸಲಾಗಿದೆ. 2024ರಲ್ಲಿ ಕರೇಜ್‌ ಹಾದು ಹೋಗಿರುವ 100 ಮೀಟರ್‌ ಸುತ್ತಮುತ್ತಲಿನ ಪ್ರದೇಶವನ್ನು ʼಬಫರ್‌ ಜೋನ್‌ʼ ಎಂದು ಜಿಲ್ಲಾಡಳಿತ ಗುರುತಿಸಿ ಜಾಗ ಹದ್ದುಬಸ್ತು ಮಾಡಿದೆ.

ಇದನ್ನೂ ಓದಿ : ಬೀದರ್‌ | ಕೋಟಿ ಖರ್ಚಾದರೂ ಉದ್ಘಾಟನೆಯಾಗದ ಪದವಿ ಕಾಲೇಜು ಹಾಸ್ಟೆಲ್‌ : ಕುಸಿಯುತ್ತಿದೆ ದಾಖಲಾತಿ

2017ರಲ್ಲಿ ಅಂದಿನ ಜಿಲ್ಲಾಧಿಕಾರಿ ದಿ.ಅನುರಾಗ ತಿವಾರಿ ಅವರು ಮುತುವರ್ಜಿ ವಹಿಸಿ ಕರೇಜ್‌ನಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಿದರು. ಕಳೆದ ಬಾರಿ ರಾಜ್ಯ ಸರ್ಕಾರ ಬೀದರ್-‌ವಿಜಯಪುರನಲ್ಲಿರುವ ಪುರಾತನ ಕರೇಜ್‌ ಅಭಿವೃದ್ಧಿಗಾಗಿ 15 ಕೋಟಿ ಅನುದಾನ ನೀಡಿತು. ಆದರೆ, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ʼಕರೇಜ್‌ʼ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. 2013ರಿಂದ ಬೀದರ್‌ನ ಟೀ ಯುವಾ ತಂಡವು ಕರೇಜ್‌ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಬೇಕೆಂಬ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್ | ಶೋಷಿತ ಸಮುದಾಯಗಳ ರಾಜಕೀಯ ಜಾಗೃತಿಗೆ ಶ್ರಮಿಸಿದ ಕಾನ್ಶಿರಾಂ

ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ರಾಜಕೀಯ ಹಕ್ಕುಗಳಿಗಾಗಿ ಹೋರಾಟ ರೂಪಿಸಿ, ಬಹುಜನ...

ಪರಪ್ಪನ ಅಗ್ರಹಾರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಎತ್ತಂಗಡಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ...

Form 7 ಅರ್ಜಿ ವಿವಾದ; ತನಿಖೆಗೆ SIT ರಚನೆಗೆ ಸರ್ಕಾರ ಚಿಂತನೆ

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಬೃಹತ್‌ ಪ್ರಮಾಣದಲ್ಲಿ Form...

ಹುಮನಾಬಾದ್ ತಾಲೂಕು ಟೋಕರೆ ಕೋಳಿ ಸಮಾಜ ಸಂಘದ ಅಧ್ಯಕ್ಷರಾಗಿ ಸಂತೋಷ ಸಂಗಮ ಆಯ್ಕೆ

ಬೀದರ್‌ ಜಿಲ್ಲೆಯ ಹುಮನಾಬಾದ್ ತಾಲೂಕು ಎಸ್‌ಟಿ ಟೋಕರೆ ಕೋಳಿ ಸಮಾಜ ಸಂಘದ...