ಬೀದರ್‌ | ಜುಲೈ 11ರಂದು ʼಮಹಮೂದ್ ಗವಾನ್’ ಐತಿಹಾಸಿಕ ನಾಟಕ ಪ್ರದರ್ಶನ

Date:

ಜುಲೈ 11ರಂದು ಸಂಜೆ 7.30 ಗಂಟೆಗೆ ಬೀದರ್‌ನ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಹಾಗೂ ಬೆಂಗಳೂರಿನ ಕಥ್‌ಪುತ್ಲಿಯಾನ್ ಥಿಯೇಟರ್ ಗ್ರೂಪ್ ಸಂಯುಕ್ತವಾಗಿ ʼಮಹಮೂದ್ ಗವಾನ್ʼ ಎಂಬ ಐತಿಹಾಸಿಕ ನಾಟಕವನ್ನು ನಗರದ ಹೊರವಲಯದಲ್ಲಿರುವ ಶಹಾಪುರ ಗೇಟ್ ಸಮೀಪದ ಶಾಹಿನ್ ನಗರದಲ್ಲಿನ ಅಬ್ದುಲ್ ರಹೆಮಾನ್ ಸಭಾಂಗಣದಲ್ಲಿ ಪ್ರಸ್ತುತಪಡಿಸುತ್ತಿವೆ ಎಂದು ಶಾಹಿನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಹೇಳಿದರು.

- Advertisement -

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ರಚಿಸಿರುವ ಈ ನಾಟಕವನ್ನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಫರ್ ಮೊಹಿಯುದ್ದೀನ್ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

​”ನಾಟಕವನ್ನು ಬೀದರ್‌ನಲ್ಲಿ ಪ್ರದರ್ಶಿಸುತ್ತಿರುವುದು ವಿಶೇಷ ಐತಿಹಾಸಿಕ ಮಹತ್ವವನ್ನು ಹೊಂದಿದೆ. 15ನೇ ಶತಮಾನದ ಮಹಾನ್ ರಾಜಕಾರಣಿ, ವಿದ್ವಾಂಸ, ಶಿಕ್ಷಣ ಪ್ರೇಮಿ ಖ್ವಾಜಾ ಮಹಮೂದ್ ಗವಾನ್ ಅವರ ಭವ್ಯ ಮದರಸಾ ಇಂದಿಗೂ ಬೀದರ್‌ನ ಐತಿಹಾಸಿಕ ಪರಂಪರೆಯ ಸಂಕೇತವಾಗಿ ಉಳಿದಿದೆ. ಈ ನಾಟಕವು 15ನೇ ಶತಮಾನದ ಬಹುಮನಿ ಸುಲ್ತಾನರ ಕಾಲಘಟ್ಟದ ಅಧಿಕಾರ, ಜ್ಞಾನ, ಸುಧಾರಣೆ, ಮಹತ್ವಾಕಾಂಕ್ಷೆ ಹಾಗೂ ದ್ರೋಹಗಳ ನಡುವಿನ ಸಂಘರ್ಷವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ” ಎಂದು ಹೇಳಿದರು.

​ಕಥ್‌ಪುತ್ಲಿಯಾನ್ ಥಿಯೇಟರ್ ಗ್ರೂಪ್‌ನ ಸಂಸ್ಥಾಪಕರೂ ಆಗಿರುವ ಝಫರ್ ಮೊಹಿಯುದ್ದೀನ್ ಮಾತನಾಡಿ, “ತಾವು 1979ರಿಂದ ಉರ್ದು ಹಾಗೂ ಹಿಂದಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಈ ಸೇವೆಗಾಗಿ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಡಾ.ಗಿರಿಶ ಕಾರ್ನಾಡ ಅವರ ಜೊತೆ ಹಲವಾರು ವರ್ಷಗಳ ಕಾಲ ರಂಗಭೂಮಿಯಲ್ಲಿ ತೋಡಗಿದ್ದಾಗಿ” ಹೇಳಿದರು.

ಈ ನಾಟಕದಲ್ಲಿ ಸಾಗ್ನಿಕ್ ಸಿನ್ಹಾ ಅವರು ‘ಮಹಮೂದ್ ಗವಾನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತೀಕ ಸುಲ್ತಾನಿಯಾ (ಟರ್ಕ್), ಅಶೋಕ ಧಾರಿವಾಲ್ (ಸೂತ್ರಧಾರ), ರಕ್ಷಿತ ರಾವ್ (ನಿಜಾಮ್-ಉಲ್-ಮುಲ್ಕ್), ಹಾಗೂ ಡಾ.ಕವಿತಾ ಅಗರ್ವಾಲ್ (ಬೇಗಂ ನರ್ಗಿಸ್) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಸೃಜನಾತ್ಮಕ ತಂಡದಲ್ಲಿ ಹಿರಿಯ ರಂಗಸಜ್ಜಿಕೆ ತಜ್ಞ ಶಶಿಧರ್ ಅಡಪ, ಬೆಳಕು ವಿನ್ಯಾಸಕಾರ ಪ್ರದೀಪ್ ಬೆಳವಾಡಿ ಮತ್ತು ಸಂಗೀತ ನಿರ್ದೇಶಕ ಉಸ್ತಾದ್ ಫಯಾಜ್ ಖಾನ್ ಕಾರ್ಯನಿರ್ವಹಿಸಿದ್ದು, ಪ್ರೇಕ್ಷಕರಿಗೆ ಅದ್ಭುತ ದೃಶ್ಯ ಹಾಗೂ ಸಂಗೀತದ ಅನುಭವವನ್ನು ನೀಡಲಿದ್ದಾರೆ ಎಂದರು.

ಇದನ್ನೂ ಓದಿ : ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎಂಗೆ ಮನವಿ

​ಶಾಹಿನ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಅಫ್ರಾನಾಝ್ ಮಾತನಾಡಿದರು. ಪ್ರಾಧ್ಯಾಪಕ ಡಾ.ಸಿರಾಜುಲ್ ಹಸನ್ ಪತ್ರಿಕಾಗೋಷ್ಠಿಯಲ್ಲಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐನಿಂದ ಉದ್ಯೋಗ ನಷ್ಟವಾದರೆ ವಿಡಿಯೊ ಗೇಮ್ಸ್ ಪರಿಹಾರ: ವಿವಾದಕ್ಕೆ ಕಾರಣವಾದ ಆಂಥ್ರೋಪಿಕ್ ಸಿಇಒ ಹೇಳಿಕೆ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಉಂಟಾಗುವ ನಿರುದ್ಯೋಗ ಮತ್ತು ಅದರಿಂದ ಸೃಷ್ಟಿಯಾಗುವ...

ಬಾಂಗ್ಲಾದೇಶಕ್ಕೆ ಮರಳಲು ಶೇಖ್ ಹಸೀನಾ ನಿರ್ಧಾರ: ಬಾಂಗ್ಲಾ ಸರ್ಕಾರದೊಂದಿಗೆ ಸಂಘರ್ಷದ ಮುನ್ಸೂಚನೆ!

ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ...

ಆಜ಼ಂ ಖಾನ್ ವಿರುದ್ಧ 20 ವರ್ಷ ಹಳೆಯ ಕೇಸು ತೆರೆದ ಯೂಪಿ ಪೊಲೀಸರು

ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆಜಂ...

ಕಿರುಕುಳ ಆರೋಪ: ಟಿವಿಕೆ ಶಾಸಕ ಅರುಳ್ ವಿಘ್ನೇಶ್ ವಿರುದ್ಧ ಜಿಲ್ಲಾಧಿಕಾರಿ ದೂರು!

ಕಲ್ಲಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಟಿವಿಕೆ ಶಾಸಕ ಸಿ. ಅರುಳ್ ವಿಘ್ನೇಶ್...