ಬಿಸಿಲಿನ ಧಗೆಯಿಂದ ತತ್ತರಿಸಿದ್ದ ಬೀದರ್ ಜಿಲ್ಲೆಯ ಜನರಿಗೆ ಮಂಗಳವಾರ ಮಧ್ಯಾಹ್ನ ಸುರಿದ ಬಿರುಗಾಳಿ ಸಹಿತ ಜೋರು ಮಳೆಯ ಸಿಂಚನ ಇಳೆ ತಂಪುಗೊಳಿಸಿದೆ. ಧಗೆಯಿಂದ ಬೇಸತ್ತಿದ ಜನ ಕೊಂಚ ನಿರಾಳವಾಗಿದ್ದಾರೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ 40 ಡಿಗ್ರಿ ಸೆಲ್ಸಿಯಸ್‌ಕ್ಕೂ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದರಿಂದ ಜನ ಮಧ್ಯಾಹ್ನದ ವೇಳೆ ರಸ್ತೆಗಿಳಿಯಲು ಹಿಂಜರಿಯುವಂತಾಗಿದೆ. ಹವಾಮಾನ ವರದಿಯಂತೆ ಎರಡು ದಿನಗಳಿಂದ ಜಿಲ್ಲೆಯ ಕೆಲವೆಡೆ ಸಂಜೆ ಅಲ್ಪ ಮಳೆಯಾಗಿತು.
ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಬಿಸಿಲಿನಲ್ಲೇ ವ್ಯವಹಾರ ನಡೆಸಿ ಬೆವರಿಳಿಸುವುದು, ತಂಪು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ರಾತ್ರಿಯಾದರೂ ಧಗೆ ಮಾತ್ರ ಕಡಿಮೆಯಾಗುತ್ತಿಲ್ಲ.
ಇದನ್ನೂ ಓದಿ : ಬೀದರ್ | ಮೇ 22ರಂದು ನೇರ ಸಂದರ್ಶನ : ಹೆಸರು ನೋಂದಾಯಿಸಿಲು ಮನವಿ
ಜಿಲ್ಲಾದ್ಯಂತ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಂದಿನಂತೆ ಬಿಸಿಲು ಪ್ರಖರವಾಗಿತು, ನಂತರ ದಟ್ಟ ಕಾರ್ಮೋಡ ಕವಿದು ಬಿರುಗಾಳಿ ಸಹಿತ ಜೋರು ಮಳೆ ಶುರುವಾಯಿತು.
ಜಿಲ್ಲೆಯ ಕಮಲನಗರ, ಔರಾದ್., ಬೀದರ, ಭಾಲ್ಕಿ ಸೇರಿದಂತೆ ಗ್ರಾಮೀಣ ಭಾಗದ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು. ಕೆಲವೆಡೆ ಮಳೆ ಅವಾಂತರದಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಗುಡುಗು, ಮಿಂಚಿನ ಮಳೆಯ ಆರ್ಭಟ ಸಂಜೆವರೆಗೂ ಮುಂದುವರೆಯಿತು.
ಫೋಟೊ-ವಿಡಿಯೊ : ಲೋಕೇಶ ಕಾಂಬಳೆ




