ನೀವು ಆ ಕುರ್ಚಿಗೆ ಅರ್ಹರಲ್ಲ: ಸುಪ್ರೀಂನಲ್ಲಿ ಸಿಜೆಐ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಕಟ್

Date:

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಅತ್ಯಂತ ಅಸಾಧಾರಣ ಮತ್ತು ಗಂಭೀರ ಬೆಳವಣಿಗೆಯೊಂದು ನಡೆದಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ವಿರುದ್ಧ ವಕೀಲರೊಬ್ಬರು ಆಕ್ರೋಶಗೊಂಡು, ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. “ನೀವು ಆ ಕುರ್ಚಿಗೆ ಅರ್ಹರಲ್ಲ” ಎಂದು ಸಿಜೆಐ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

- Advertisement -

ಸುಪ್ರೀಂ ಕೋರ್ಟ್‌ನಲ್ಲಿ ಕಲಾಪ ನಡೆಯುತ್ತಿದ್ದ ವೇಳೆ, ವಕೀಲರೊಬ್ಬರು ತಮ್ಮ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸುವಂತೆ ಪಟ್ಟು ಹಿಡಿದರು. “ಈ ವಿಷಯವನ್ನು ನವೆಂಬರ್ 2ರಂದೇ ನ್ಯಾಯಮೂರ್ತಿಗಳ (ಸಿಜೆಇ) ಕಚೇರಿಗೆ ಸಲ್ಲಿಸಲಾಗಿತ್ತು. 15 ದಿನಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ, ಹಾಗಾಗಿ ನಾನು ಅನಿವಾರ್ಯವಾಗಿ ನ್ಯಾಯಾಲಯದ ಮುಂದೆ ಬರಬೇಕಾಯಿತು” ಎಂದು ಆ ವಕೀಲರು ವಾದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಇದನ್ನೂ ಓದಿ: ಸಿಇಸಿ ವಿರುದ್ಧದ ಕಾದಾಟಕ್ಕೆ ಸುಪ್ರೀಂ ಕೋರ್ಟ್ಅನ್ನು ಎಳೆಯಬೇಡಿ: ಸಿಜೆಐ ಸೂರ್ಯಕಾಂತ್

ಆಗ ಪೀಠದಲ್ಲಿದ್ದ ನ್ಯಾಯಮೂರ್ತಿ ವಿ. ಮೊಹನಾ ಅವರು, “ಈ ರೀತಿಯಲ್ಲಿ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ಬರುವುದಿಲ್ಲ” ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ತುರ್ತು ಪರಿಸ್ಥಿತಿಯಿರುವ ಕಾರಣ ತಾವು ಬಂದಿರುವುದಾಗಿ ಸಮರ್ಥಿಸಿಕೊಂಡರು.

ಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ವಕೀಲರಿಗೆ ಶಾಂತವಾಗಿರಲು ಸೂಚಿಸಿ, “ನಾವು ಪರಿಶೀಲಿಸುತ್ತೇವೆ, ನೀವು ಸ್ವಲ್ಪ ಕಾಯಿರಿ” ಎಂದು ತಿಳಿಸಿದರು. ಆದರೆ, ಸಿಜೆಇ ಸೂಚನೆಯನ್ನು ದಿಕ್ಕರಿಸಿದ ಆ ವಕೀಲರು ಮಾತನಾಡಿ, “ನಾನು ಕಾಯುವುದಿಲ್ಲ. ನೀವು ಆ ಕುರ್ಚಿಯಲ್ಲಿ ಕೂರಲು ಅರ್ಹರಲ್ಲ. ನಿಮಗೆ ಅದಕ್ಕೆ ತಕ್ಕ ಸಮಗ್ರತೆ (ಇಂಟೆಗ್ರಿಟಿ) ಇಲ್ಲ!” ಎಂದು ನೇರವಾಗಿ ಮುಖ್ಯ ನ್ಯಾಯಮೂರ್ತಿಯವರನ್ನು ಉದ್ದೇಶಿಸಿ ಏಕವಚನದಲ್ಲಿ ಆಕ್ರೋಶ ಹೊರಹಾಕಿದರು.

ವಕೀಲರಿಂದ ಈ ರೀತಿಯ ಅನಿರೀಕ್ಷಿತ ವರ್ತನೆ ಮತ್ತು ವೈಯಕ್ತಿಕ ಟೀಕೆಗಳು ಬಂದ ತಕ್ಷಣವೇ ಸುಪ್ರೀಂ ಕೋರ್ಟ್ ಆಡಳಿತ ಮಂಡಳಿಯು, ನ್ಯಾಯಾಲಯದ ಕಲಾಪದ ಲೈವ್ ಪ್ರಸ್ರಾರದ ಆಡಿಯೋ ಮತ್ತು ವಿಡಿಯೋ ಫೀಡ್ ಅನ್ನು ತಕ್ಷಣವೇ ಕಟ್/ಮ್ಯೂಟ್ ಮಾಡಿತು.

ಇದರ ಬೆನ್ನಲ್ಲೇ, ಕೋರ್ಟ್‌ರೂಮ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಇತರೆ ವಕೀಲರ ಆಗ್ರಹದ ಮೇರೆಗೆ ಆ ವಕೀಲರನ್ನು ಬಲವಂತವಾಗಿ ಕೋರ್ಟ್‌ ರೂಮ್‌ನಿಂದ ಹೊರಲುವಂತೆ ಕಳುಹಿಸಲಾಯಿತು. ಕಲಾಪದಲ್ಲಿ ಹಾಜರಿದ್ದ ಇತರ ವಕೀಲರು ಸಹ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿ, ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಜೆಇ ಅವರನ್ನು ಒತ್ತಾಯಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾನು ಜೀವಂತವಾಗಿ ಮರಳದೇ ಇರಬಹುದು: ಜೈಲಿನಿಂದಲೇ ಪಾಕ್ ಸುಪ್ರೀಂ ನ್ಯಾಯಮೂರ್ತಿಗಳಿಗೆ ಇಮ್ರಾನ್ ಖಾನ್ ಪತ್ರ!

ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್...

ಯಮುನಾ ಮಾಲಿನ್ಯ| ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಚಾಟಿ; ಪ್ರತಿ ಗಡಿಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಆದೇಶ!

ಯಮುನಾ ನದಿಯ ಶುದ್ಧೀಕರಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ನದಿಯ...

ವಿಜಯಪುರ | ಕೈಗಾರಿಕಾ ಕ್ರಾಂತಿಗೆ ಮುನ್ನುಡಿ: 12,000 ಉದ್ಯೋಗ ಸೃಷ್ಟಿಯ ಗುರಿ

ಕೈಗಾರಿಕೆಗಳನ್ನು ಬೆಂಗಳೂರು ಸುತ್ತಮುತ್ತ ಮಾತ್ರ ಸೀಮಿತಗೊಳಿಸದೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ವಿಸ್ತರಿಸುವ...

ವಿಜಯಪುರ | ಆಲಮಟ್ಟಿ ನೀರು ತೆಲಂಗಾಣಕ್ಕೆ ಹರಿಸಿದ್ದರ ಲೆಕ್ಕ ಕೊಡಿ: ರೈತ ಸಂಘ ಆಗ್ರಹ

ವಿಜಯಪುರ–ಬಾಗಲಕೋಟ ಜಿಲ್ಲೆಗಳ ರೈತರಿಗೆ ಸಮರ್ಪಕ ನೀರು ಒದಗಿಸದೆ, ಆಲಮಟ್ಟಿ ಜಲಾಶಯದಿಂದ ನಾರಾಯಣಪುರದ...