ಪೂಲವಾರಿಪಲ್ಲಿ ಗ್ರಾಮದಲ್ಲಿ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿರವರು ಮಾಡಿಸಿರುವ ಅಭಿವೃದ್ಧಿ ಕಾಮಗಾರಿಗಳ ಗಂಧ-ಗಾಳಿ ಗೊತ್ತಿಲ್ಲದೆ ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವ ದುರುದ್ದೇಶದಿಂದ ಶಾಸಕರ ಬಗ್ಗೆ
ಅವಹೇಳನಕಾರಿಯಾಗಿ ಮಾತನಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಪೂಲವಾರಿಪಲ್ಲಿ ಗ್ರಾಮದ ಮುಖಂಡರು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಹೆಚ್.ಕೃಷ್ಣಪ್ಪ, ವೆಂಕಟಸ್ವಾಮಿ ನಾಯ್ಡು ಮತ್ತಿತರ ಗ್ರಾಮದ ಮುಖಂಡರ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಯಾವುದೇ ತಾರತಮ್ಯವಿಲ್ಲದೆ ಮಾಡುತ್ತಿದ್ದಾರೆ. ನಮ್ಮ ಪೂಲವಾರಿಪಲ್ಲಿ ಗ್ರಾಮದಲ್ಲಿ 200 ಮೀ ಸಿ.ಸಿ.ರಸ್ತೆ ಕಾಮಗಾರಿ ಮತ್ತು ವಾಟರ್ ಫಿಲ್ಟರ್, ಓವರ್ ಹೆಡ್
ಟ್ಯಾಂಕ್ ಮಾಡಿಸಿದ್ದಾರೆ. 2016 ರಲ್ಲಿ 2 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಮಾಡಿಸಿದ್ದರು. ಗ್ರಾಮದ ಜನತೆಯ ಕುಡಿಯುವ ನೀರಿಗಾಗಿ 6 ಬೋರ್ ವೆಲ್ ಕೊರೆಸಿದ್ದಾರೆ ಹಾಗು ಚರಂಡಿ ನಿರ್ಮಾಣ ಮತ್ತು ಇನ್ನೂ ಹಲವು ಕೆಲಸಗಳನ್ನು ಮಾಡಿಸಿದ್ದಾರೆ. ಗ್ರಾಮದ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ ಮಾಡಿಸಲು ಹೆಚ್ಚುವರಿಯಾಗಿ 30 ಲಕ್ಷವನ್ನು ಮಂಜೂರು ಮಾಡಿಸಿದ್ದಾರೆ.
ಹೆದ್ದಾರಿಯಿಂದ ಪೂಲವಾರಿಪಲ್ಲಿ ಗ್ರಾಮದ ರಸ್ತೆ ಕೆಟ್ಟುಹೋಗಿದ್ದರಿಂದ ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಶಾಸಕರು 1.10 ಕೋಟಿ ವೆಚ್ಚದಲ್ಲಿ 2 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿ ಮಂಜೂರು ಮಾಡಿಸಿದ್ದಾರೆ. ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವಾಗ ಮಳೆಬಂದ ಕಾರಣ ರಸ್ತೆಯಲ್ಲಿ ಕೆಲವು ಕಡೆ ನೀರು ನಿಂತಿದ್ದ ರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಳೆ ಬಂದರೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಇಷ್ಟಕ್ಕೂ ಇದರಲ್ಲಿ ಶಾಸಕರ ಪಾತ್ರವೇನೂ ಇಲ್ಲ. ಅನುದಾನ ತರುವುದು ಶಾಸಕರ ಜವಾಬ್ದಾರಿ ಆ ಕೆಲಸವನ್ನು ಅವರು ಮಾಡಿದ್ದಾರೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಅಧಿಕಾರಿಗಳ ಕೆಲಸ. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ಶಾಸಕರ ಗಮನಕ್ಕಾಗಲಿ ಅಥವಾ ಅಧಿಕಾರಿಗಳ ಗಮನಕ್ಕಾಗಲೀ ತರದೆ ಕೇವಲ ಪ್ರಚಾರಗಿಟ್ಟಿಕೊಳ್ಳಲು
ಮಾಧ್ಯಮದ ಮುಂದೆ ಕ್ಷುಲ್ಲಕ ಹೇಳಿಕೆ ನೀಡಿರುವ ನಮ್ಮ ಗ್ರಾಮದ ಶಿವಕುಮಾರ್ ವರ್ತನೆಯನ್ನು ಖಂಡಿಸುತ್ತೇವೆ.
ಬೆಂಗಳೂರಿನಲ್ಲಿ ಇರುವ ಈತನಿಗೆ ನಮ್ಮ ಗ್ರಾಮದ ಬಗ್ಗೆಯೇ ತಿಳಿದಿಲ್ಲ. ಮೇಧಾವಿಯಂತೆ ಮಾತನಾಡುವ ಈತನ ಮನೆಯ ನೀರನ್ನು ರಸ್ತೆಗೆ ಬಿಟ್ಟು ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿದ್ದಾನೆ ಎಂದು ಕಿಡಿಕಾರಿದರು.
ಯಾವುದೇ ಕಾಮಗಾರಿಯಲ್ಲಿ ಗುತ್ತಿಗೆದಾರರು ತಪ್ಪು ಮಾಡಿದರೆ ಶಾಸಕರ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದು ಜವಾಬ್ದಾರಿ ನಾಗರೀಕನ ಕರ್ತವ್ಯವಾಗಿರುತ್ತದೆ. ಆದರೆ ಶಾಸಕರನ್ನು ನಿಂದಿಸುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಮುಖಂಡರು ಖಂಡಿಸಿದರು.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ಶಾಖಾಘಾತ ತಡೆಗೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಜಿಲ್ಲಾಧಿಕಾರಿ ಜಿ.ಪ್ರಭು
ಪತ್ರಿಕಾಗೋಷ್ಠಿಯಲ್ಲಿ ಪೂಲವಾರಿಪಲ್ಲಿ ಗ್ರಾಮದ ಮುಖಂಡರಾದ ಪಿ.ಡಿ.ರಾಜಗೋಪಾಲ, ಪಿ.ಎನ್. ನಾಗರಾಜು, ಪಿ.ಜಿ.
ಅಶೋಕ್,ಪಿ.ಸಿ.ನರಸಿಂಹಮೂರ್ತಿ, ಪಿ.ಆರ್.ನಾರಾಯಣಪ್ಪ, ಧನಾರ್ಜುನ, ಮಂಜುನಾಥ, ಅನಿಲ್ ಕುಮಾರ್, ರಾಜೇಶ್,
ಬಾಲಕೃಷ್ಣ, ರಮೇಶ್, ಶ್ರೀನಿವಾಸ, ವರ್ಧರಾಜು, ಮಧುರಾಜು, ವೆಂಕಟೇಶ್, ಗಂಗುಲಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬಾಗೇಪಲ್ಲಿ | ಶಾಸಕ ಸುಬ್ಬಾರೆಡ್ಡಿ ಬಗ್ಗೆ ಅವಹೇಳನಕಾರಿಹೇಳಿಕೆಗೆ ಗ್ರಾಮಸ್ಥರ ಖಂಡನೆ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




