ದೇಶದ ಮೊದಲ ಶಿಕ್ಷಣ ಸಚಿವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ವತಿಯಿಂದ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಅಜಾದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜಾವಿದ್ ಉಲ್ ಹಕ್ ಅವರ ನಿಧನಕ್ಕೆ ಎರಡು ನಿಮಿಷ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಡಿತರ ಚೀಟಿ ಇ-ಕೆವೈಸಿ ನ.30 ಕೊನೆ ದಿನ; ಜಿಲ್ಲೆಯಲ್ಲಿ 1.63 ಲಕ್ಷ ಫಲಾನುಭವಿಗಳ ಬಾಕಿ
ಉಪಾಧ್ಯಕ್ಷ ಡಾ.ಸೊಹೇಲ್, ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹ್ಮದ್ ಉಮರ್, ಉಪಾಧ್ಯಕ್ಷ ಇರ್ಫಾನ್ ಅಹ್ಮದ್ ಅಬಕಾರಿ, ಮೊಹಿನ್, ನಜೀರ್ ಅಹ್ಮದ್, ಪ್ರತಿಭಾ ರೆಡ್ಡಿ, ನೂರಜಹಾನ, ಕನೀಜ್ ಫಾತಿಮಾ, ಜಾಫರ್ ಅಹ್ಮದ್, ಶಹಬಾಜ್, ಬಾಬಾ, ಆದಿಲ್, ಶೇಖ್ ಮಹೆಬೂಬ್ ಆಲಂ, ಅನ್ಸರ್ ಹುಸೇನ್, ಜಿ.ಮುದ್ದುಕೃಷ್ಣ ಮಂಚಾಲ, ವೀರರಾಜು ಮಂಚಾಲ, ಕೃಷ್ಣ, ಅನ್ಸರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.




