ವಿಜಯಪುರ |ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ ಆಲಮಟ್ಟಿಯ 30ಕ್ಕೂ ಅಧಿಕ ಒಣಗಿದ ಮರಗಳ ತೆರವಿಗೆ ಚಾಲನೆ

Date:

ಪ್ರವಾಸಿಗರ ಆಕರ್ಷಣೆಯಾಗಿದ್ದ ಆಲಮಟ್ಟಿಯ ರಸ್ತೆ ಬದಿಯ ಮರಗಳ ಸಾಲಿನಲ್ಲಿ ಒಣಗಿ, ಅಪಾಯಕಾರಿಯಾಗಿದ್ದ 30ಕ್ಕೂ ಅಧಿಕ ಮರಗಳ ತೆರವು ಕಾರ್ಯಾಚರಣೆ ಬುಧವಾರ ಆರಂಭಗೊಂಡಿದೆ.

- Advertisement -

ಆಲಮಟ್ಟಿ ಅಣೆಕಟ್ಟು ವೃತ್ತದಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ಪುತ್ಥಳಿವರೆಗೆ ಸುಮಾರು ಒಂದು ಕಿ.ಮೀ. ಉದ್ದಕ್ಕೂ ಬೆಳೆದು ನಿಂತಿದ್ದ ಮಳೆ ಮರಗಳು ಆಲಮಟ್ಟಿಗೆ ವಿಶೇಷ ಸಸ್ಯಸಂಪತ್ತಿನ ಮೆರುಗು ನೀಡಿದ್ದವು. ದಟ್ಟ ನೆರಳು ಹಾಗೂ ಹಸಿರು ಸೌಂದರ್ಯದ ಮೂಲಕ ಪ್ರವಾಸಿಗರ ಹೃನ್ಮನ ಸೆಳೆಯುತ್ತಿದ್ದ ಈ ಮರಗಳ ಪೈಕಿ ಹಲವು ಮರಗಳು ನಾನಾ ಕಾರಣಗಳಿಂದ ಒಣಗಿ ನಿಂತಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

ಆಲಮಟ್ಟಿಗೆ ಹಸಿರಿನ ಸೊಬಗು ನೀಡುವುದರ ಜತೆಗೆ ವೇಗವಾಗಿ ಬೆಳೆದು ಉತ್ತಮ ನೆರಳು ಒದಗಿಸಲಿ ಎಂಬ ಉದ್ದೇಶದಿಂದ 2000ರಿಂದ 2002ರ ಅವಧಿಯಲ್ಲಿ ಅಂದಿನ ಡಿಎಫ್‌ಒ ಕೆ.ಡಿ. ಉದಪುಡಿ ಅವರ ವಿಶೇಷ ಆಸಕ್ತಿಯಿಂದ ನೂರಾರು ಮಳೆ ಮರಗಳನ್ನು ನೆಡಲಾಗಿತ್ತು. ಕಾಲಕ್ರಮೇಣ ಈ ಮರಗಳು ಬೆಳೆದು ಆಲಮಟ್ಟಿಯ ಸೌಂದರ್ಯ ಹೆಚ್ಚಿಸುವುದರೊಂದಿಗೆ ಪ್ರವಾಸಿಗರಿಗೆ ತಂಪಿನ ನೆರಳನ್ನೂ ನೀಡುತ್ತಿದ್ದವು.

ಆದರೆ, ಇತ್ತೀಚಿನ ದಿನಗಳಲ್ಲಿ ಸುಮಾರು 30ಕ್ಕೂ ಅಧಿಕ ಮರಗಳು ವಿವಿಧ ಕಾರಣಗಳಿಂದ ಒಣಗಿದ್ದವು. ಕೆಲವು ಮರಗಳ ಬೇರುಗಳಿಗೆ ಕಲ್ಲು ತಗುಲಿದ್ದರಿಂದ ಹಾನಿಯಾಗಿದ್ದರೆ, ಇನ್ನೂ ಕೆಲವು ಮರಗಳು ಹುಳುಗಳ ಬಾಧೆಯಿಂದ ದುರ್ಬಲಗೊಂಡಿದ್ದವು. ಒಣಗಿದ ಮರಗಳ ರೆಂಬೆ-ಕೊಂಬೆಗಳು ಮುರಿದು ಬೀಳುತ್ತಿದ್ದ ಪರಿಣಾಮ ಸಾರ್ವಜನಿಕರಿಗೆ ಗಾಯಗಳಾಗುವ ಘಟನೆಗಳೂ ನಡೆದಿದ್ದವು. ಹೀಗಾಗಿ ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸುವಂತೆ ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು ಎಂದು ಆಲಮಟ್ಟಿ ಕೆಬಿಜೆಎನ್‌ಎಲ್ ಅರಣ್ಯ ವಿಭಾಗದ ಆರ್‌ಎಫ್‌ಒ ಮಹೇಶ ಪಾಟೀಲ ತಿಳಿಸಿದರು.

ಅಪಾಯ ತಪ್ಪಿಸಲು ಮುಂಜಾಗ್ರತಾ ಕ್ರಮಎಲ್ಲ ಮರಗಳ ಸಮಗ್ರ ಸಮೀಕ್ಷೆ ನಡೆಸಿ ಒಣಗಿದ, ಹುಳು ತಿಂದ ಹಾಗೂ ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಸಾಧ್ಯತೆಯಿರುವ ಮರಗಳನ್ನು ಗುರುತಿಸಲಾಗಿದೆ. ಅವುಗಳ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕಾರ್ಯಾಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಇನ್ನೂ ಎರಡು-ಮೂರು ದಿನಗಳ ಕಾಲ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ವಿಭಾಗದ ಆರ್‌ಎಫ್‌ಒ ಬಸನಗೌಡ ಪಾಟೀಲ ತಿಳಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ಸಂವಿಧಾನದ ಕುರಿತು ವಿವೇಚನಾರಹಿತ ಹೇಳಿಕೆ: ಕನೇರಿ ಸ್ವಾಮೀಜಿ ಕ್ಷಮೆಯಾಚಿಸಲಿ

ಸಂವಿಧಾನದ ಕುರಿತು ಅಧ್ಯಯನ ಮಾಡದೆ ವಿವೇಚನಾರಹಿತ ಹಾಗೂ ಅತಿರೇಕದ ಹೇಳಿಕೆ ನೀಡಿರುವ...

ರಾಯಚೂರು | ಬರಗಾಲದ ಸಂಕಷ್ಟದ ನಡುವೆ ಬೆಲೆ ಏರಿಕೆ: ಸರ್ಕಾರದ ವಿರುದ್ಧ ಆಕ್ರೋಶ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಜಿಲ್ಲಾ ಸಮಿತಿ ವತಿಯಿಂದ...

ಹಾವೇರಿ‌ | ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಭೂಸ್ಪರ್ಶ

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌ ಶಿಗ್ಗಾವಿ ತಾಲೂಕಿನಲ್ಲಿ...

ಉಡುಪಿ | ವಿಶೇಷ ಚೇತನ ವಿದ್ಯಾರ್ಥಿಗಳ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು ವಿಶ್ವವಿದ್ಯಾನಿಲಯ, ಜಿಲ್ಲಾ ಪಂಚಾಯತ್ ಉಡುಪಿ, ಯುವಜನ ಸಬಲೀಕರಣ ಮತ್ತು ಕ್ರೀಡಾ...