ಅಕ್ಷರದಾಸೋಹ ಯೋಜನೆಯಡಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ ಪದಾಧಿಕಾರಿಗಳು ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಎನ್.ವಿ. ಬೈರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅದ್ಯಕ್ಷ ಸಿ.ವೆಂಕಟರಾಯಪ್ಪ ಮಾತನಾಡಿ ಅಕ್ಷರ ದಾಸೋಹ ಅನುಷ್ಠಾನದಲ್ಲಿ ಶಿಕ್ಷಕರು ಎದುರಿಸುತ್ತಿರುವ ತೊಂದರೆ, ಪ್ರಸಕ್ತ ಸಾಲಿನ ಆಹಾರ ಸಾಮಗ್ರಿ ಪೂರೈಕೆ, ಗುಣಮಟ್ಟದ ಆಹಾರ,ಪಿ.ಎಂ.ಪೋಷಣ್ ಅಭಿಯಾನದ ಅಗತ್ಯವಾದ ಸಾದಿಲ್ವಾರು ಅನುದಾನ ಬಿಡುಗಡೆ,2025- 26 ನೇ ಸಾಲಿನ ಮೊಟ್ಟೆ ಹಾಗೂ ಬಾಳೆ ಹಣ್ಣು ಬಾಕಿ ಅನುದಾನ ಬಿಡುಗಡೆ, ಅಕ್ಕಿ, ಬೇಳೆ ಹಾಗೂ ಎಣ್ಣಿ ಸರಬರಾಜು ಮಾಡಲು, ನಿರಂತರ ಅಪ್ಲಿಕೇಶನ್ ಹಾಜರಾತಿ ತಾಂತ್ರಿಕ ಸಮಸ್ಯೆಗಳು,ಹಾಗು ವಾಸ್ತವ ಹಾಜರಿತಿಯಂತೆ ಅನುದಾನ ಬಿಡುಗಡೆ, ಸಮಸ್ಯೆ ಕುರಿತು ನಿಯೋಗದ ಪದಾಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.
ಮನವಿ ಪತ್ರ ಸ್ವೀಕರಿಸಿದ ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಎನ್.ವಿ. ಬೈರೆಡ್ಡಿ ಮನವಿ ಪತ್ರ ಸ್ವೀಕರಿಸಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷೆ ವೈ.ಎಸ್.ಪ್ರಮೀಳಾ, ಕಾರ್ಯದರ್ಶಿ ನಾರಾಯಣ ಸ್ವಾಮಿ ಎನ್,ಖಜಾಂಚಿ ಹೆಚ್.ಎಸ್.ವರುಣ್,ರಂಗಾರೆಡ್ಡಿ,ಕದಿರಪ್ಪ,ಶಿಕ್ಷಕರಾದ ಸಿ.ವೆಂಕಟರಾಯಪ್ಪ,ನರಸಿಂಹಪ್ಪ.ಜಿ,ಮಹೇಶ್ ಹಾಗೂ
ಇತರರು ಹಾಜರಿದ್ದರು.




