ವಿಜಯಪುರ |ಆಶಾ ಕಾರ್ಯಕರ್ತೆಯರಿಗೆ ₹15 ಸಾವಿರ ಮಾಸಿಕ ಗೌರವಧನಕ್ಕೆ ಆಗ್ರಹ: ನ.17ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಹೋರಾಟ

Date:

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನವೆಂಬರ್ 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎ ಐ ಯು ಟಿ ಯು ಸಿ ರಾಜ್ಯ ಉಪಾಧ್ಯಕ್ಷ ಎನ್ ವಿರೇಶ್ ಹೇಳಿದರು.

- Advertisement -

ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ 17–18 ವರ್ಷಗಳಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮನೆಮನೆಗೆ ಆರೋಗ್ಯ ಸೇವೆ ತಲುಪಿಸುತ್ತಿರುವ ಆಶಾ ಕಾರ್ಯಕರ್ತೆಯರು, ಕೊರೊನಾ ಸಂದರ್ಭದಲ್ಲಿಯೂ ಮುಂಚೂಣಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ದುಡಿಮೆಗೆ ತಕ್ಕ ಗೌರವಧನ ದೊರೆಯುತ್ತಿಲ್ಲ. ಪ್ರೋತ್ಸಾಹಧನ ಕೂಡ ಹಲವು ತಿಂಗಳು ವಿಳಂಬವಾಗುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ...

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ...

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ,...

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ. ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು....

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರ ಗೌರವಧನವನ್ನು ಕೇವಲ ₹1,500 ಮಾತ್ರ ಹೆಚ್ಚಿಸಿದೆ. ಹಿಂದಿನ ಸರ್ಕಾರ ಘೋಷಿಸಿದ್ದ ₹10 ಸಾವಿರ ಗೌರವಧನವೂ ಸಮರ್ಪಕವಾಗಿ ಜಾರಿಯಾಗಿಲ್ಲ. ಇತರ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಗೌರವಧನ ನೀಡುತ್ತಿರುವಾಗ ಕರ್ನಾಟಕ ಸರ್ಕಾರವೂ ಕನಿಷ್ಠ ₹15 ಸಾವಿರ ನಿಶ್ಚಿತ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.

Advertisements

ಪ್ರಮುಖ ಬೇಡಿಕೆಗಳು

ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನ, ಸಮಸ್ತ ಆ್ಯಪ್ ಮೊಬೈಲ್ ಕೆಲಸಗಳಿಗೆ ಸೂಕ್ತ ಸೌಲಭ್ಯ ಮತ್ತು ಪ್ರೋತ್ಸಾಹಧನ, ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇಡಿಗಂಟು ಬಿಡುಗಡೆ, ಬಾಕಿ ಪ್ರೋತ್ಸಾಹಧನ ಪಾವತಿ, ಆಶಾ ಸುಗಮಕಾರರನ್ನು ಮುಂದುವರಿಸುವುದು ಹಾಗೂ ಸೇವಾ ನಿವೃತ್ತಿ ಪರಿಹಾರವನ್ನು ₹5 ಲಕ್ಷಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಡಲಾಗಿದೆ.

ಆಶಾ ಕಾರ್ಯಕರ್ತೆಯರ ನ್ಯಾಯಯುತ ಹೋರಾಟಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಲ್ಲಮ್ಮ ಕಂಠಿ, ಅಂಬಿಕಾ ವಳಸಂಕ, ಲಲಿತಾ ವನವಾಡ, ಶೋಭಾ, ಸರಸ್ವತಿ, ನಾಗಮ್ಮ, ನೂರಜಹಾನ್, ಮಲ್ಲಮ್ಮ ಬಿರಾದಾರ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಡಾ. ರಜಾಕ್ ಉಸ್ತಾದ್ ನಾಮನಿರ್ದೇಶನ

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ರಾಯಚೂರಿನ ಡಾ. ರಜಾಕ್ ಉಸ್ನಾದ್...

ಉಡುಪಿ | ಎಥೆನಾಲ್ ವಂಚನೆಯಿಂದ ವಾಹನಗಳ ಬಾಳಿಕೆಗೆ ಕುತ್ತು: ಕೇಂದ್ರ ಸರ್ಕಾರದ ವಿರುದ್ಧ ಪ್ರದೀಪ್ ಬೇಲಾಡಿ ಆಕ್ರೋಶ

ಪೆಟ್ರೋಲ್, ನಲ್ಲಿ ಎಥೆನಾಲ್ ಬೆರೆಸಿರುವ ಬಗ್ಗೆ ಜನರಿಗೆ ಗೊಂದಲಗಳಿದ್ದು ಜನರ ಬೇಡಿಕೆಯಂತೆ...

ಬಾಗಲಕೋಟೆ |ವಿದ್ಯುತ್ ಅವಘಡಗಳಿಗೆ ಬ್ರೇಕ್ ಹಾಕಲು ಹೆಸ್ಕಾಂ ಕಾರ್ಯಾಚರಣೆ; ಬಾಗಲಕೋಟೆ ವೃತ್ತದಲ್ಲಿ 299 ನಿರ್ವಹಣಾ ಕಾಮಗಾರಿ ಪೂರ್ಣ

ವಿದ್ಯುತ್ ಅವಘಡಗಳಿಗೆ ಮುಂಚಿತವಾಗಿಯೇ ಕಡಿವಾಣ ಹಾಕಿ, ಗ್ರಾಹಕರಿಗೆ ಸುರಕ್ಷಿತ ಹಾಗೂ ನಿರಂತರ...

ಬೆಳಾಗಾವಿ |ಉದ್ಯೋಗ, ಉಚಿತ ರೇಷನ್ ಆಮಿಷವೊಡ್ಡಿ 662 ಮಹಿಳೆಯರಿಗೆ ವಂಚನೆ ಆರೋಪ: ₹7.94 ಕೋಟಿ ಮೋಸ?

ಟ್ರಸ್ಟ್‌ನಲ್ಲಿ ಸದಸ್ಯತ್ವ ಪಡೆದರೆ ಮೂರು ತಿಂಗಳಿಗೊಮ್ಮೆ ಉಚಿತ ಪಡಿತರ ನೀಡುವುದರ ಜೊತೆಗೆ...