ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಭಾರತೀಯ ಕಿಸಾನ್ ಸಂಘದ ಪ್ರಮುಖ ಸಭೆ ಜರುಗಿತು. ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಮತ್ತಾವರ ಅವರು ಭಾಗವಹಿಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಾಗರ್ ಶ್ರೀನಿವಾಸಗೌಡ ಅವರನ್ನು ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಿದರು.
ಹೊಸ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿದ ಸಾಗರ್ ಶ್ರೀನಿವಾಸಗೌಡ ಅವರು, ಭಾರತೀಯ ಕಿಸಾನ್ ಸಂಘವು ಒಂದು ರಾಷ್ಟ್ರಮಟ್ಟದ ಬಲಿಷ್ಠ ಸಂಘಟನೆಯಾಗಿದೆ. ರೈತರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ಒದಗಿಸುವಲ್ಲಿ ಈ ಸಂಘಟನೆ ಯಶಸ್ವಿಯಾಗಿದೆ. ಇಂದಿನ ಯುವ ಸಮೂಹ ಕೃಷಿ ಮತ್ತು ಸಂಘಟನೆಯ ಬಗ್ಗೆ ಆಸಕ್ತಿ ವಹಿಸಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ರೈತರ ಧ್ವನಿಯಾಗಬೇಕು ಎಂದು ಹೇಳಿದರು
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಬಿಜೆಪಿ ಯುವಮೋರ್ಚಾದಿಂದ ‘ವಿಜಯ ಯಾತ್ರೆ’
ಈ ಸಂದರ್ಭದಲ್ಲಿ ಜಿಲ್ಲಾ ಯುವ ಪ್ರಮುಖರಾದ ಧನುಷ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ್, ಹಾಗೂ ಪ್ರಮುಖ ಪದಾಧಿಕಾರಿಗಳಾದ ಪ್ರಮೋದ್, ವೇದ, ಮಧು, ಕುಮಾರ್, ವಿಜಯ್, ವಿನಯ್ , ರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು




