ಚಿಕ್ಕಮಗಳೂರು |ರಾಜ್ಯದಲ್ಲಿ ಪ್ರಸ್ತುತ 9,೦೦೦ಕ್ಕೂ ಹೆಚ್ಚು ಪೋಕ್ಸೋ ಪ್ರಕರಣ

Date:

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ನ್ಯಾ. ಶಶಿಧರ್ ಶೆಟ್ಟಿ ಅವರು ಮಾತನಾಡಿ,”ಮಕ್ಕಳನ್ನು ಕೇವಲ ಕೆಲಸದಿಂದ ಬಿಡಿಸುವುದಷ್ಟೇ ಪರಿಹಾರವಲ್ಲ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ, ಪೋಷಕರ ಸಮಸ್ಯೆಗಳನ್ನು ಅರಿತು ಸರ್ಕಾರಿ ಯೋಜನೆಗಳ ಮೂಲಕ ಶಾಶ್ವತ ಪುನರ್ವಸತಿ ಕಲ್ಪಿಸುವುದು ಅಗತ್ಯ ಎಂದು ತಿಳಿಸಿದ ಅವರು, ಮೈಸೂರಿನಲ್ಲಿ ಇತ್ತೀಚೆಗೆ ೨೭ ಬಾಂಡೆಡ್ ಲೇಬರ್‌ಗಳನ್ನು ರಕ್ಷಿಸಿದ ಘಟನೆಯನ್ನು ಸ್ಮರಿಸಿದರು.

- Advertisement -

ಪೋಕ್ಸೋ ಕಾಯ್ದೆ ಕುರಿತು ಆತಂಕಕಾರಿ ಅಂಕಿಅಂಶಗಳನ್ನು ಹಂಚಿಕೊಂಡ ಅವರು, ರಾಜ್ಯದಲ್ಲಿ ಪ್ರಸ್ತುತ 9,೦೦೦ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳಿದ್ದು, ಚಿಕ್ಕಮಗಳೂರು ಒಂದರಲ್ಲೇ ೨೦೦ಕ್ಕೂ ಅಧಿಕ ಪ್ರಕರಣಗಳಿವೆ. ಪೋಕ್ಸೋ ಕಾಯ್ದೆ ಬರಿ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ. ಸಮೀಕ್ಷೆಯೊಂದರ ಪ್ರಕಾರ, ದೇಶದಲ್ಲಿ ಶೇ.೪೩ ರಷ್ಟು ಗಂಡುಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದರೆ ಈ ಪ್ರಕರಣಗಳು ವರದಿಯಾಗದೆ ಮುಚ್ಚಿಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಕಳೆದ ವರ್ಷ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಂತ್ರಸ್ತರಿಗೆ ೪೫ ಕೋಟಿ ರೂ.ಪರಿಹಾರ ವಿತರಿಸಲಾಗಿದ್ದು, ಇದರಲ್ಲಿ ಶೇ.8೦ ರಷ್ಟು ಮೊತ್ತ ಪೋಕ್ಸೋ ಪ್ರಕರಣಗಳ ಸಂತ್ರಸ್ತರಿಗೇ ತಲುಪಿದೆ.  ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ದುರುಪಯೋಗದಿಂದ ಮಕ್ಕಳು ಬಲಿಯಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳಿಗೆ ’ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’  ಹಾಗೂ ಸೈಬರ್ ಭದ್ರತೆ ಕುರಿತು ಶಿಕ್ಷಣ ಇಲಾಖೆ ಹಾಗೂ ಕಾನೂನು ಪ್ರಾಧಿಕಾರ ಜಂಟಿಯಾಗಿ ಶಾಲೆಗಳಲ್ಲಿ ನಿರಂತರ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಸ್ವಂತ ಮನೆಯಲ್ಲೂ ಎಷ್ಟೋ ಮಕ್ಕಳಿಗೆ ಸುರಕ್ಷತೆಯಿಲ್ಲ: ಎಷ್ಟೋ ಮಕ್ಕಳು ತಮ್ಮ ಸ್ವಂತ ಮನೆಯಲ್ಲೇ ಸುರಕ್ಷಿತವಾಗಿಲ್ಲ. ರಕ್ಷಣೆ ನೀಡಬೇಕಾದವರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಾವಿರಾರು ಪ್ರಕರಣಗಳು ಜರುಗುತ್ತಿರುವುದು ಆತಂಕಕಾರಿ ವಿಷಯ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮನೆಯಲ್ಲೇ ದೌರ್ಜನ್ಯ ಎದುರಿಸುವ ಮಕ್ಕಳಿಗೆ ಆ ವಿಷಯವನ್ನು ತಂದೆ-ತಾಯಿಗಾಗಲಿ ಅಥವಾ ಇತರರಿಗಾಗಲಿ ಹೇಳಿಕೊಳ್ಳುವುದು ಸುಲಭದ ಮಾತಲ್ಲ. ಇಂತಹ ಸಂದರ್ಭಗಳಲ್ಲಿ ಶಾಲಾ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ. ಮಗುವಿನ ಚಟುವಟಿಕೆ ಅಥವಾ ನಡವಳಿಕೆಯಲ್ಲಿ ಕುಸಿತ ಕಂಡು ಬಂದರೆ, ಶಿಕ್ಷಕರು ಪ್ರೀತಿಯಿಂದ ವಿಚಾರಿಸಿ ಧೈರ್ಯ ತುಂಬಬೇಕು. ಇತ್ತೀಚೆಗೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಮಗುವಿನ ಮಾನಸಿಕ ಕುಸಿತವನ್ನು ಶಿಕ್ಷಕರೊಬ್ಬರು ಗುರುತಿಸಿ, ವಿಚಾರಿಸಿದಾಗ ಸತ್ಯ ಹೊರಬಂದು ಪ್ರಕರಣ ದಾಖಲಾಯಿತು ಎಂದು ಘಟನೆಯೊಂದನ್ನು ಸ್ಮರಿಸಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ’1098’ ಉಚಿತ ಸಹಾಯವಾಣಿ ಅತ್ಯಂತ ಪರಿಣಾಮಕಾರಿಯಾಗಿದೆ. ಸಂಕಷ್ಟದಲ್ಲಿರುವ ಮಕ್ಕಳು ಅಥವಾ ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ, ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಪಂದಿಸಿ ಮಗುವನ್ನು ರಕ್ಷಿಸಿ ಬಾಲಕರ ಅಥವಾ ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತರಿಸಲಿವೆ ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ?ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್ 

ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಬಹುತೇಕ ಪ್ರಕರಣಗಳಿಗೆ ಬಾಲ್ಯವಿವಾಹವೇ ಮೂಲ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲದೆ ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಬಾಲ್ಯವಿವಾಹ ಪ್ರಕರಣಗಳು ಕಂಡುಬರುತ್ತಿವೆ. ಇತ್ತೀಚೆಗೆ ಬಾಗಲಕೋಟೆಯಲ್ಲಿ ಸಹಪಾಠಿ ಮಕ್ಕಳೇ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರಿಂದ ೧೬೯ ಬಾಲ್ಯವಿವಾಹಗಳನ್ನು ತಡೆಯಲು ಸಾಧ್ಯವಾಯಿತು.  ಪೋಕ್ಸೋ ಕಾಯ್ದೆ ಕಲಂ ೧೯ರ ಪ್ರಕಾರ, ೧೮ ವರ್ಷದೊಳಗಿನ ಹೆಣ್ಣುಮಕ್ಕಳು ಗರ್ಭಿಣಿಯಾಗಿ ಆಸ್ಪತ್ರೆಗೆ ಬಂದಾಗ ಅಥವಾ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದಾಗ, ಅದನ್ನು ಪೊಲೀಸ್ ಇಲಾಖೆಗೆ ವರದಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ಮಾಹಿತಿಯನ್ನು ಮುಚ್ಚಿಟ್ಟರೆ ಅಥವಾ ವರದಿ ಮಾಡದಿದ್ದರೆ ಅಂತಹ ವ್ಯಕ್ತಿಗಳೂ ಸಹ ಕಾನೂನಿನಡಿ ಅಪರಾಧಿಗಳಾಗುತ್ತಾರೆ ಎಂದು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಜ್ಞಾನೇಶ್ ಕುಮಾರ್ ವಜಾಗೊಳಿಸಿ-SIR ರದ್ದುಗೊಳಿಸಿ; ಕೆ.ಎಲ್ ಅಶೋಕ್ 

ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ SIR ವಿರೋಧಿ ಒಕ್ಕೂಟ ಮುಖಂಡರಾದ ಕೆ. ಎಲ್...

ಯಾದಗಿರಿ | ಪೌಷ್ಟಿಕ ಆಹಾರದಿಂದ ಮಕ್ಕಳ ಆರೋಗ್ಯಕರ ಬೆಳವಣಿಗೆ: ಮಹಾದೇವಮ್ಮ ಕುರ್ಕುಂದಿ

ಮಕ್ಕಳ ಆರೋಗ್ಯಕರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಮತ್ತು ಸಮತೋಲಿತ...

ರಾಯಚೂರು | ರಸ್ತೆಯೋ, ಕೆಸರುಗದ್ದೆಯೋ? ಐದನಾಳ ಎಸ್‌ಸಿ ವಾರ್ಡ್‌ನಲ್ಲಿ ಜನರ ಪರದಾಟ

ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಐದನಾಳ ಗ್ರಾಮದ ಎಸ್‌ಸಿ ವಾರ್ಡ್‌ನಲ್ಲಿ ರಸ್ತೆ ಹಾಗೂ...

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...