ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಟ್ಸ್‌ಆಯಪ್ ಚಾಟ್‌ಗಳನ್ನು ಕೇಂದ್ರ ಸಚಿವರು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವ ಬದಲು, ರಾಜ್ಯ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಬಹುದಿತ್ತು.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು. ವಾಟ್ಸ್‌ಆಯಪ್ ಚಾಟ್‌ನ ಸತ್ಯಾಸತ್ಯತೆ ಸಮಗ್ರ ತನಿಖೆ ಆಗಬೇಕು ಎಂದು ಜಿಲ್ಲಾಧಿಕಾರಿ ಕೆ. ಎಸ್ ಲತಾಕುಮಾರಿ ತಿಳಿಸಿದರು.
ಇದಕ್ಕೆ ಸಂಬಂಧಪಟ್ಟ ಹಾಗೆ ಸಿಎಸ್ ಗಮನಕ್ಕೆ ತರುತ್ತೇನೆ. ಯಾವುದೇ ಕಡತಕ್ಕೆ ವೈಯಕ್ತಿಕವಾಗಿ ಬೇಡಿಕೆ ಇಡುವುದಿಲ್ಲ. ಕಡತಗಳನ್ನು ಕೇಳಿ ತರಿಸುವುದೂ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳೇ ನಿಯಮಾನುಸಾರ ಕಡತಗಳನ್ನು ಸಲ್ಲಿಸುತ್ತಾರೆ. ಹೀಗಿರುವಾಗ ತಮ್ಮ ಮೇಲೆ ಇಂತಹ ಆರೋಪ ಮಾಡಿರುವುದು ಎಷ್ಟು ಸರಿ?ಎಂದು ಪ್ರಶ್ನಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಸಿಬ್ಬಂದಿಗೆ ಹಲ್ಲೆ, ಕೊಲೆ ಬೆದರಿಕೆ
ವಾಟ್ಸ್‌ಆಯಪ್‌ನ ಡಿಪಿ ಹಾಗೂ ನಂಬರ್ ಸರಿಯಾಗಿವೆ ಎಂಬ ಮಾಹಿತಿ ಇದ್ದರೂ, ಅದರ ನಂತರದ ಚಾಟ್‌ಗಳನ್ನು ಎಡಿಟ್ ಮಾಡಲಾಗಿದೆ ಎಂದು ತಮ್ಮ ಪಿಎ ಹೇಳುತ್ತಿದ್ದಾರೆ. ದೇವಸ್ಥಾನಕ್ಕೆ ಬಂದು ಸಚಿವರು ಸುಳ್ಳು ಆರೋಪ ಮಾಡಿದ್ದನ್ನು ಖಂಡಿಸುತ್ತೇನೆ. ಈ ವಿಚಾರ ಸಿಎಂ ಗಮನಕ್ಕೆ ತಂದಿದ್ದೇನೆ. ನಿಯಮಾನುಸಾರ ಕೆಲಸ ಮಾಡಿ ಎಂದು ಸಿಎಂ ಸಲಹೆ ನೀಡಿದ್ದಾರೆ. ಸತ್ಯಕ್ಕೆ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಡಿಸಿ ಲತಾ ಕುಮಾರಿ ತಿಳಿಸಿದರು.




