ಚಿಕ್ಕಮಗಳೂರು | ತಮ್ಮದೇ ಸಮುದಾಯದರಿಂದ ಬಹಿಷ್ಕಾರಗೊಂಡ ಐದು ಕುಟುಂಬ! 

Date:

ಗ್ರಾಮಗಳಲ್ಲಿ ಎಲ್ಲಾ ಗ್ರಾಮಸ್ಥರು ಅಣ್ಣ ತಮ್ಮಂದಿರು ಹಾಗೂ ಅಕ್ಕ ತಂಗಿಯರ ಹಾಗಿರುತ್ತಾರೆ. ಒಬ್ಬರಿಗೊಬ್ಬರು ಸಹಾಯ, ವಾತ್ಸಲ್ಯ, ಪ್ರೀತಿಯಿಂದ ಕೂಡಿ ಬಾಳುತ್ತಾರೆ. ಆದರೇ ಈ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದೇ ಊರಿನ ಐದು ಕುಟುಂಬದವರನ್ನು ಬಹಿಷ್ಕಾರ ಹಾಕಿರುವುದು ನೋವಿನ ಸಂಗತಿಯಾಗಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ 5 ಕುಟುಂಬಗಳಿಗೆ ಅದೇ ಸಮುದಾಯದವರು ಬಹಿಷ್ಕಾರ ಹಾಕಿದ್ದಾರೆ. 

- Advertisement -

ಆ ಗ್ರಾಮದಲ್ಲಿ 35 ಕುಟುಂಬಗಳು ಒಂದೇ ಸಮುದಾಯದವರಿದ್ದು, ಐದು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಯಾರೂ ಈ ಐದು ಕುಟುಂಬಗಳೊಂದಿಗೆ ಮಾತನಾಡಬಾರದು, ಶುಭ ಸಮಾರಂಭಗಳಿಗೆ ಕರೆಯಬಾರದು ಎಂದು ಪಂಚಾಯಿತಿ ಸೇರಿ ತೀರ್ಮಾನ ಹೊರಡಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ್ತಿ ಗೀತಾದೇವಿ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ವಾಲ್ಮೀಕಿ ಸಮಾಜದವರು ಗ್ರಾಮ ದೇವತೆ ಹಳದಮ್ಮ ದೇವಿಯ ಜಾತ್ರೆ ನೆರವೇರಿಸುತ್ತಿದ್ದೇವೆ. 2024ರಲ್ಲಿ ಕುರುಬ ಸಮಾಜ ಮತ್ತು ಉಪ್ಪಾರ ಸಮಾಜದವರು ಗಲಾಟೆ ಮಾಡಿದ್ದರು. ಅದನ್ನು ನೋಡಿ ವಾಲ್ಮೀಕಿ ಸಮಾಜದವರು ದೇವರನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. ಯಾರೂ ದೇವರ ಕಾರ್ಯಕ್ಕೆ ಹೋಗಲಿಲ್ಲ.

ಹಾಗೆಯೇ, “ಎರಡು ವರ್ಷಗಳ ನಂತರ ಕೆಲ ಸಮಸ್ಯೆಗಳು ಬಂದವು. ಗ್ರಾಮ ದೇವತೆಯ ಸಮಿತಿಯ ಬಳಿ ಹೋಗಿ 5 ಕುಟುಂಬದವರು ದೇವರ ಕೆಲಸ ಮಾಡುವುದಾಗಿ ತಿಳಿಸಿದ್ದವು. ಈ ವಿಚಾರ ತಿಳಿದು ವಾಲ್ಮೀಕಿ ಸಮಾಜದವರು ಜೂನ್‌ 29ರಂದು ಪಂಚಾಯಿತಿಗೆ ಕರೆದಿದ್ದರು. ದೇವರ ಕಾರ್ಯಕ್ಕೆ ಒಬ್ಬೊಬ್ಬರೇ ಹೋಗುತ್ತಿದ್ದೀರಿ. ಅಲ್ಲಿ ನಮಗೆ ಬೆಲೆ ಇಲ್ಲ, ಆದರೂ ಹೋದವರಿಗೆ ಬಹಿಷ್ಕಾರ ಹಾಕುತ್ತೇವೆಂದು ಹೇಳಿದ್ದಾರೆ” ಎಂದು ಬಹಿಷ್ಕಾರಕ್ಕೋಳಗಾದ ಓರ್ವ ವ್ಯಕ್ತಿ ಈದಿನ. ಕಾಮ್ ಗೆ ಮಾಹಿತಿ ತಿಳಿಸಿದ್ದಾರೆ.

Screenshot 2026 10 30 12 57 39 65 680d03679600f7af0b4c700c6b270fe7

‘ಅಂತರಘಟ್ಟಮ್ಮ ದೇವಸ್ಥಾನ ಬಳಿ ಎಲ್ಲ ಸಮಾಜದವರು ಸೇರಿ 5 ಕುಟುಂಬದವರನ್ನು ಬಿಟ್ಟು ಪಂಚಾಯಿತಿ ನಡೆಸಿದ್ದಾರೆ. ಅದನ್ನು ಕೇಳಿದ್ದಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಯಗಟಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಠಾಣೆಯ ಅಧಿಕಾರಿ ಮತ್ತಷ್ಟು ಕೀಳು ಮಟ್ಟದ ಪದ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಒಬ್ಬ ಅಧಿಕಾರಿ ಬಳಿ ನ್ಯಾಯಾ ಕೇಳಲು ಹೋದರೆ ನಮಗೆ ಅವಮಾನ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‌ಪಿ, ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದೇನೆ’ ಎಂದು ಗೀತಾದೇವಿ ತಿಳಿಸಿದರು.

ಈ ಐದು ಕುಟುಂಬಗಳಿಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ. ಬಹಿಷ್ಕಾರದ ಪಿಡುಗು ಶಾಶ್ವತವಾಗಿ ತೊಲಗಬೇಕು ಎಂದು ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ. ಲಕ್ಷ್ಮಿದೇವಿ, ಲಕ್ಷ್ಮಮ್ಮ, ಉಮಾ, ವಿನಯ್, ಗೌರಂಗ ಇವರು ತಮಗೆ ಅನ್ಯಾಯ ಆಗಿರುವ ಕುರಿತು ಮಾಧ್ಯಮದವರೊಂದಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಯೋಜನೆ

ಈ ಸಮಾಜದಲ್ಲಿ ಇಂತಹ ಕಟ್ಟುಪಾಡುಗಳು ಜೀವಂತವಾಗಿವೆ ಎಂಬುದು ನೋವಿನ ಸಂಗತಿಯಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕಾಗಿದೆ.

WhatsApp Image 2024 10 24 at 12.02.30
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಜುವೆಲರ್ಸ್ ಅಂಗಡಿಯಲ್ಲಿ 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಕಾಲು ಚೈನ್ ಕಳವು

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ರಾಜಲಕ್ಷ್ಮೀ ಜುವೆಲರ್ಸ್ ಅಂಗಡಿಯಲ್ಲಿ ಸುಮಾರು...

ವಿಜಯಪುರ | ಡಾ. ಅಣ್ಣಾಭಾವು ಸಾಠೆ ಅವರಿಗೆ ‘ಭಾರತ ರತ್ನ’ ನೀಡಿ; ರಾಜ್ಯದಲ್ಲಿ ಜಯಂತಿ ಆಚರಿಸಿ

ಲೋಕಶಾಹಿರ ಡಾ. ಅಣ್ಣಾಭಾವು ಸಾಠೆ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ...

ರಾಯಚೂರು | ರಕ್ತನಿಧಿ ಕೇಂದ್ರ ಸ್ಥಾಪನೆ ಜೀವ ರಕ್ಷಣೆಯ ಮಹತ್ವದ ಕಾರ್ಯ: ಸಂಸದ ಜಿ.ಕುಮಾರ ನಾಯಕ

ರಕ್ತ ನಿಧಿ ಕೇಂದ್ರ ಬಹಳ ಅವಶ್ಯಕವಾಗಿದ್ದು ಇಂತಹ ಮಹತ್ವದ ಕಾರ್ಯಗಳು ಜನರ...

ರಾಯಚೂರು | ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಹೆಚ್ಚಾಗಲಿ: ಶಾಸಕಿ ಕರೆಮ್ಮ ಗೋಪಾಲಕೃಷ್ಣ

ರಾಜ್ಯದಲ್ಲಿ ಮಠಮಾನ್ಯಗಳ ಕೊಡುಗೆ ಅಪಾರವಾಗಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ...