ಈ ದಿನ ಸಂಪಾದಕೀಯ | ದುಷ್ಟರ ದುರಾಸೆಯೂ; ಕಾಡು-ನಾಡು ನಡುವಿನ ಸಂಘರ್ಷವೂ

Date:

ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಸಾಮಾನ್ಯ ಸಂಗತಿಯಲ್ಲ. ಇದು ಮುಖ್ಯವಾಗಿ ಪರಿಸರ ವ್ಯವಸ್ಥೆಯ ಅಸಮತೋಲನ, ಅರಣ್ಯ ನಿರ್ವಹಣೆಯ ವೈಫಲ್ಯ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಎಂದೇ ನೋಡಬೇಕಾಗುತ್ತದೆ.

2020ರಿಂದ 2025ರವರೆಗಿನ ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ 2,853 ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ 170ಕ್ಕೂ ಹೆಚ್ಚು ಜನರು ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ರಾಮನಗರ ಮತ್ತು ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಇದು ನಿಜಕ್ಕೂ ಗಂಭೀರ ಸಮಸ್ಯೆ.

- Advertisement -

ಇದಕ್ಕಿಂತಲೂ ಗಂಭೀರ ಸಮಸ್ಯೆ ಎಂದರೆ, ಇದೇ ಅವಧಿಯಲ್ಲಿ ರಾಜ್ಯದಲ್ಲಿ ವಿದ್ಯುತ್ ತಂತಿಬೇಲಿ ಸ್ಪರ್ಶ ಮತ್ತು ಇತರ ಕಾರಣಗಳಿಂದ 473 ಆನೆಗಳು ಸಾವನ್ನಪ್ಪಿವೆ. ಈ ದತ್ತಾಂಶವು ಕರ್ನಾಟಕದಲ್ಲಿ ವನ್ಯಜೀವಿ ನಿರ್ವಹಣೆ-ಸಂರಕ್ಷಣೆಗೆ ಎದುರಾಗುತ್ತಿರುವ ಸವಾಲನ್ನು ಸೂಚಿಸುತ್ತದೆ. ಇದಕ್ಕೆ ಮುಖ್ಯ ಕಾರಣ ದುಷ್ಟ ಮನುಷ್ಯರ ದುರಾಸೆ ಮತ್ತು ಆನೆಗಳ ಆವಾಸಸ್ಥಾನ ವಿಘಟನೆ. ಇದು ಆನೆ ಮತ್ತು ಮನುಷ್ಯನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮೂರು ದಿನಗಳ ಅಂತರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾದರು. ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆಗಿಳಿದರು. ಅವರ ಆಕ್ರೋಶ ಶಮನಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಪುಂಡಾನೆಗಳನ್ನು ಸೆರೆ ಹಿಡಿಯಲು ಹಾಗೂ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನು ಓದಿದ್ದೀರಾ?: ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ

ಸಚಿವರ ಈ ಸ್ಥಳಾಂತರ ಸೂಚನೆ, ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ಸಿನ ಮೂವರು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಿಲ್ಲಿಸದಿದ್ದರೆ ರಾಜೀನಾಮೆ ಕೊಡುವುದಾಗಿ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ ಮತ್ತು ಎಚ್.ಡಿ. ತಮ್ಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ಮುತ್ತೋಡಿ ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ 450ಕ್ಕೂ ಹೆಚ್ಚು ಆನೆಗಳಿದ್ದು, ಕಾಡಾನೆಗಳಿಂದ ಸುತ್ತಮುತ್ತಲ ಗ್ರಾಮದ ರೈತರ ಬೆಳೆಗಳಿಗೆ ಪ್ರತಿನಿತ್ಯ ಹಾನಿಯಾಗುತ್ತಿದೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹಾಸನ ಭಾಗದಲ್ಲೂ ಸಾಕಷ್ಟು ಅರಣ್ಯ ಪ್ರದೇಶವಿರುವಾಗ ಅಲ್ಲಿನ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೇಕೆ ಓಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಅದರಲ್ಲೂ ಶಾಸಕಿ ನಯನಾ ನ. 23ರಂದು, ‘ಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ’ ಎಂದು, ವಿಧಾನ ಸಭಾಧ್ಯಕ್ಷರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೂ ಆಗಿದೆ. ಅದಕ್ಕೆ ಸಚಿವ ಶಿವಲಿಂಗೇಗೌಡ, ‘ಅದು ಅರಣ್ಯ ಸಚಿವರ ಆದೇಶ, ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನಷ್ಟೇ’ ಎಂದು ಸಬೂಬು ಹೇಳಿದ್ದೂ ಆಗಿದೆ. ಅರಣ್ಯ ಸಚಿವರು, ‘ಶಾಸಕರೇ ಹೇಳಲಿ, ಎಲ್ಲಿಗೆ ಕಳಿಸಬೇಕೆಂದು’ ಎಂದು ರಾಜೀನಾಮೆಗೆ ಮುಂದಾದ ಶಾಸಕರ ತಲೆ ಮೇಲೆ ಹಾಕಿದ್ದೂ ಆಗಿದೆ.

ಆನೆ-ಮಾನವನ ಸಂಘರ್ಷ ಇದೀಗ ಸಚಿವರು-ಶಾಸಕರ ನಡುವಿನ ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿದೆ. ಮನುಷ್ಯರಿಗೇನೋ ಬುದ್ಧಿ ಇದೆ, ಪ್ರತಿಭಟಿಸಿದರೆ ಕೇಳುವವರಿದ್ದಾರೆ. ಶಾಸಕರಿಗೆ ಅಧಿಕಾರವಿದೆ, ರಾಜೀನಾಮೆ ನೀಡಿದರೆ ಸಚಿವರು ಮನವೊಲಿಸಲಿದ್ದಾರೆ. ಆದರೆ ಆನೆಗಳ ಕಷ್ಟ ಕೇಳುವವರಾರು?

ಕಾಡಾನೆಗಳು ನಾಡಿಗೆ ಬರುತ್ತಿವೆ, ಬೆಳೆಗಳನ್ನು ನಾಶ ಮಾಡುತ್ತಿವೆ, ಮನೆಗಳನ್ನು ಧ್ವಂಸಗೊಳಿಸುತ್ತಿವೆ, ಕೆಲವೊಮ್ಮೆ ಮನುಷ್ಯರ ಜೀವವನ್ನೂ ಬಲಿ ಪಡೆಯುತ್ತಿವೆ ಎಂಬ ಸುದ್ದಿಗಳು ಆಗಾಗ್ಗೆ ವರದಿಯಾಗುವುದು ನಿಜ. ಮತ್ತೊಂದೆಡೆ, ಕಾಡಾನೆಗಳ ದಾಳಿಗೆ ರೈತರು, ಕೃಷಿ ಕಾರ್ಮಿಕರು ಮತ್ತು ಅರಣ್ಯದಂಚಿನ ಗ್ರಾಮಗಳ ನಿವಾಸಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದೂ ಸತ್ಯ. ಇಂತಹ ಘಟನೆಗಳು ಸಂಭವಿಸಿದಾಗಲೆಲ್ಲ ಪ್ರತಿಭಟನೆಗಳು ನಡೆಯುತ್ತವೆ, ಅರಣ್ಯ ಇಲಾಖೆ ಪರಿಹಾರ ಘೋಷಿಸುತ್ತದೆ, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಕೆಲವು ದಿನಗಳ ನಂತರ ಎಲ್ಲವೂ ಹಿನ್ನೆಲೆಗೆ ಸರಿಯುತ್ತದೆ. ಮತ್ತೆ ಅದೇ ಸಂಘರ್ಷ, ಅದೇ ಸಾವು-ನೋವು, ಅದೇ ಪರಿಹಾರದ ನಾಟಕ ಮುಂದುವರೆಯುತ್ತದೆ.

ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಸಾಮಾನ್ಯ ಸಂಗತಿಯಲ್ಲ. ಇದು ಮುಖ್ಯವಾಗಿ ಪರಿಸರ ವ್ಯವಸ್ಥೆಯ ಅಸಮತೋಲನ, ಅರಣ್ಯ ನಿರ್ವಹಣೆಯ ವೈಫಲ್ಯ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಎಂದೇ ನೋಡಬೇಕಾಗುತ್ತದೆ.

ಆನೆಗಳು ನೂರಾರು ವರ್ಷಗಳಿಂದ ತಮ್ಮದೇ ಆದ ಸಂಚಾರ ಮಾರ್ಗಗಳನ್ನು ಹೊಂದಿವೆ. ಆಹಾರ, ನೀರು ಮತ್ತು ಸಂತಾನೋತ್ಪತ್ತಿಗೆ ಅನುಕೂಲವಾದ ಪ್ರದೇಶಗಳಲ್ಲಿ ಮಾತ್ರ ಅವು ಸಂಚರಿಸುತ್ತವೆ. ಆದರೆ ಕಳೆದ ಕೆಲವು ದಶಕಗಳಲ್ಲಿ ಅರಣ್ಯ ಪ್ರದೇಶಗಳು ಕೃಷಿ ಭೂಮಿ, ವಸತಿ ಪ್ರದೇಶ, ಕೈಗಾರಿಕೆ, ಗಣಿಗಾರಿಕೆ, ರೆಸಾರ್ಟ್, ಹೋಂ ಸ್ಟೇ, ರಸ್ತೆ ಮತ್ತು ರೈಲು ಯೋಜನೆಗಳಿಗೆ ಒಳಗಾಗಿವೆ. ಅವುಗಳ ಹಿಂದೆ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರು, ಶ್ರೀಮಂತ ಕುಳಗಳಿದ್ದಾರೆ. ಇವರ ‘ಅಭಿವೃದ್ಧಿ’ಗೆ ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳು ತುಂಡಾಗಿವೆ. ಕಾಡಿನೊಳಗೆ ಆಹಾರ ಮತ್ತು ನೀರು ಸಿಗದಿದ್ದಾಗ ಅವು ಅನಿವಾರ್ಯವಾಗಿ ಕಾಡಿನ ಅಂಚಿಗೆ ಬರುತ್ತವೆ. ಸಣ್ಣ ಹಿಡುವಳಿದಾರರ ಬೆಳೆ ಮತ್ತು ಬದುಕು ನಾಶ ಮಾಡುತ್ತವೆ.

ರಾಜ್ಯದ ಮಲೆನಾಡು, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಮಾನವ-ಆನೆ ಸಂಘರ್ಷ ಗಂಭೀರ ಸಮಸ್ಯೆಯಾಗಿದೆ. ವಿಶೇಷವಾಗಿ ಅರಣ್ಯದಂಚಿನ ಗ್ರಾಮಗಳಲ್ಲಿ ವಾಸಿಸುವ ಕೃಷಿಕ ಕುಟುಂಬಗಳು ನಿರಂತರ ಆತಂಕದಲ್ಲಿ ಬದುಕುವಂತಾಗಿದೆ. ಕಾಫಿ, ಅಡಿಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಿವಿಧ ಬೆಳೆಗಳು ಆನೆಗಳ ದಾಳಿಗೆ ತುತ್ತಾಗುತ್ತಿವೆ. ಹೊಲ-ತೋಟಕ್ಕೆ ನುಗ್ಗುವ ಆನೆಗಳ ಹಿಂಡು ರೈತನ ಹಲವು ತಿಂಗಳ ಶ್ರಮವನ್ನು ನಾಶಪಡಿಸಬಲ್ಲದು. ಸಾಲ ಮಾಡಿ ಬೆಳೆ ಬೆಳೆದ ರೈತನಿಗೆ ಇದು ಕೇವಲ ಬೆಳೆ ನಷ್ಟವಲ್ಲ; ಕುಟುಂಬದ ಆರ್ಥಿಕ ಭದ್ರತೆಯ ಮೇಲಿನ ಹೊಡೆತವೂ ಹೌದು.

ಇದಕ್ಕೆ ಪ್ರತಿಯಾಗಿ ಆನೆಗಳನ್ನು ಓಡಿಸುವುದು, ವಿದ್ಯುತ್ ಬೇಲಿ ಹಾಕುವುದು, ಕಂದಕ ನಿರ್ಮಿಸುವುದು, ರೈಲ್ವೆ ಬ್ಯಾರಿಕೇಡ್ ಅಳವಡಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಇವುಗಳೆಲ್ಲವೂ ಸಂಘರ್ಷವನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಪ್ರಯತ್ನಗಳಾಗಿವೆ. ಮೂಲ ಸಮಸ್ಯೆಯಾದ ಆವಾಸಸ್ಥಾನಗಳ ನಾಶ ಮತ್ತು ಅರಣ್ಯ ಪ್ರದೇಶಗಳ ವಿಘಟನೆಯನ್ನು ಸರಿಪಡಿಸದಿದ್ದರೆ ಸಂಘರ್ಷ ಮುಂದುವರೆಯುತ್ತದೆ.

ಆದಕಾರಣ, ವನ್ಯಜೀವಿ ಸಂರಕ್ಷಣೆ ಅತ್ಯಂತ ಅಗತ್ಯ. ಆನೆಗಳು ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಅರಣ್ಯದ ಜೀವವೈವಿಧ್ಯ ಮತ್ತು ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹಾಗೆಯೇ ಅರಣ್ಯದಂಚಿನ ಸಣ್ಣ ಹಿಡುವಳಿದಾರರ ಸುರಕ್ಷತೆ ಮತ್ತು ಬದುಕು ಕೂಡ ಮುಖ್ಯ.

ಆ ನಿಟ್ಟಿನಲ್ಲಿ ಆನೆಗಳ ಚಲನವಲನವನ್ನು ಗುರುತಿಸಲು ರೇಡಿಯೋ ಕಾಲರ್, ಜಿಪಿಎಸ್, ಡ್ರೋನ್, ಕ್ಯಾಮೆರಾ ಟ್ರ್ಯಾಪ್ ಮತ್ತು ಮುನ್ನೆಚ್ಚರಿಕೆ ಸಂದೇಶ ವ್ಯವಸ್ಥೆ ಬಳಕೆಗೆ ಬರಬೇಕು. ಆನೆಗಳ ಹಿಂಡು ಗ್ರಾಮಗಳತ್ತ ಬರುತ್ತಿರುವಾಗ ಸ್ಥಳೀಯ ಜನರಿಗೆ ಮೊಬೈಲ್ ಸಂದೇಶಗಳ ಮೂಲಕ ಮಾಹಿತಿ ನೀಡಬೇಕು. ಅದಕ್ಕೆ ಅರಣ್ಯ ಇಲಾಖೆ, ಕೃಷಿ ಇಲಾಖೆ, ಸ್ಥಳೀಯ ಆಡಳಿತ ಮತ್ತು ಗ್ರಾಮ ಪಂಚಾಯಿತಿಗಳ ನಡುವೆ ಸಮನ್ವಯದ ಅಗತ್ಯವಿದೆ.

ಇದನ್ನು ಓದಿದ್ದೀರಾ?: ಕರ್ನಾಟಕದ ಸಾಂಸ್ಕೃತಿಕ ನಾಯಕನ ಚಾರಿತ್ರ್ಯಹರಣ ಅಕ್ಷಮ್ಯ; ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ

ಇದೆಲ್ಲಕ್ಕಿಂತ ಮುಖ್ಯವಾಗಿ, ಮನುಷ್ಯನಿಗೆ ಬದುಕುವ ಹಕ್ಕಿರುವಂತೆ ಆನೆಗಳಿಗೂ ಬದುಕುವ ಹಕ್ಕಿದೆ. ಭೂಮಿಯ ಮೇಲಿನ ಜೀವಿಗಳಲ್ಲಿ ಮಾನವನನ್ನು ಹೊರತುಪಡಿಸಿ ಉಳಿದೆಲ್ಲಾ ಜೀವಿಗಳು ಪರಿಸರಕ್ಕೆ ಪೂರಕವಾಗಿ ಬದುಕುತ್ತಿವೆ. ಆದರೆ ಮನುಷ್ಯ ಮಾತ್ರ ತನ್ನ ಸ್ವಾರ್ಥಕ್ಕಾಗಿ ನೈಸರ್ಗಿಕ ಭೌಗೋಳಿಕ ಸಂರಚನೆಯನ್ನು ತಿರುಚುತ್ತಿದ್ದಾನೆ. ಕಾಡು ಮತ್ತು ನಾಡಿನ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದ್ದಾನೆ.

ಪ್ರಕೃತಿ ಮತ್ತು ಪರಿಸರ ಉಳಿದರೆ ಮನುಷ್ಯ ಕೂಡ ಉಳಿಯುತ್ತಾನೆ. ಈ ಸರಳ ಸತ್ಯವನ್ನು ಜನ ಮತ್ತು ಸರ್ಕಾರಗಳು ಅರ್ಥಮಾಡಿಕೊಳ್ಳುವ ಕಾಲ, ಈಗ ಕೂಡಿ ಬಂದಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಕ್ಕಲಿಗ ಸ್ವಾಮಿ ಮೇಲೆ ಬಿದ್ದ ಅಣ್ಣ-ತಮ್ಮಂದಿರು

ಒಕ್ಕಲಿಗ ಸಮುದಾಯದ ನಾಯಕತ್ವವನ್ನು ಕುಟುಂಬದ ಹಿಡಿತದಲ್ಲೇ ಉಳಿಸಿಕೊಳ್ಳುವ ಧಾವಂತದಲ್ಲಿ ಎಚ್‌.ಡಿ. ರೇವಣ್ಣ...

ಮುಂಡಗೋಡ | ‘ಗೊಂದಲದ ಬಸವ ಮಂಟಪ’ ಪುಸ್ತಕ ವಿವಾದ: ತನಿಖೆ, ಕಾನೂನು ಕ್ರಮಕ್ಕೆ ಒತ್ತಾಯ

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶಗಳು, ವಚನ ಸಾಹಿತ್ಯ ಹಾಗೂ ಸಾಮಾಜಿಕ ಸುಧಾರಣಾ...

ಅಮೆರಿಕದಲ್ಲಿ ಮೈಸೂರು ಮೂಲದ ಪಿಟೀಲು ವಾದಕ ಭಾಸ್ಕರ್ ಅರೆಸ್ಟ್; ಅಪ್ರಾಪ್ತರ ಮೇಲೆ ದೌರ್ಜನ್ಯ ಆರೋಪ

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖ ಪಿಟೀಲು ವಾದಕ, ಮೈಸೂರು ಮೂಲದ...