ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಮ್ಯಾಪಿಂಗ್ ನಲ್ಲಿ ಶೃಂಗೇರಿ ಕ್ಷೇತ್ರದ 15 ಸಾವಿರ ಮತದಾರರನ್ನು ಕೈ ಬಿಟ್ಟಿರುವುದರಿಂದ ಕ್ಷೇತ್ರದ ಜನರು ಎಚ್ಚೆತ್ತು ಕೊಳ್ಳಬೇಕು ಇಲ್ಲವಾದಲ್ಲಿ ಬೇರೆ ರಾಜ್ಯದಲ್ಲಿ ಆಗಿರುವ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿ ಆಗಲಿದೆ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ ಆತಂಕ ವ್ಯಕ್ತ ಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 1,32,000 ಸಾವಿರ ಮಾತಾದರರನ್ನು ಕೈ ಬಿಟ್ಟಿದ್ದು ರಾಜ್ಜ್ಯದಲ್ಲಿ 70 ಲಕ್ಷ ಮತದಾರರನ್ನು ಮ್ಯಾಪಿಂಗ್ ನಿಂದ ಕೈ ಬಿಟ್ಟಿರುವುದು ಅನುಮಾನ ಹುಟ್ಟಿ ಹಾಕಿದೆ. ಒಂದು ಸಾರಿ ಮ್ಯಾಪಿಂಗ್ ನಿಂದ ಹೊರಗೆ ಉಳಿದರೆ ಅವರು ಕೇಳುವ ದಾಖಲೆಗಳು ಕೊಟ್ಟರೆ ಮಾತ್ರ ಮತದಾರರ ಪಟ್ಟಿಗೆ ಸೇರಿಸುತ್ತಾರೆ. ಆದರೆ ಇದು ಅಷ್ಟು ಸುಲಭದ ಕೆಲಸವಲ್ಲ ಹಾಗಾಗಿ ಕ್ಷೇತ್ರದ ಜನ ಈ ವಿಚಾರವಾಗಿ ಕಾಳಜಿವಹಿಸಬೇಕು ಎಂದು ತಿಳಿಸಿದರು.
ಈ ಮ್ಯಾಪಿಂಗ್ ಬೇರೆ ಎಸ್ ಐ ಆರ್ ಮ್ಯಾಪಿಂಗ್ ಆದಮೇಲೆ ಎಸ್ ಐ ಆರ್ ಬರುತ್ತೆ ಅವಾಗ ಸಹ ಮ್ಯಾಪಿಂಗ್ ನಲ್ಲಿರುವರು ದಾಖಲಾತಿ ಕೊಡಬೇಕು ನಿಮ್ಮ ಹೆಸರಿನಲ್ಲಿ ಸ್ಪೆಲ್ಲಿಂಗ್ ತಪ್ಪಿದ್ದರೂ ಸಹ ನೀವು ಮ್ಯಾಪಿಂಗ್ ನಲ್ಲಿದ್ದರೂ ಮತ್ತೆ ಮತದಾರರ ಪಟ್ಟಿಯಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ. ಭಾರತದಲ್ಲಿ ಸ್ವತಂತ್ರ ನಂತರ ಎಸ್ ಐ ಆರ್ ನಡೆದಿದೆ ಆದರೆ ಪ್ರತಿ ಬಾರಿ ಎಸ್ ಐ ಆರ್ ನಡೆಸುವ ಉದ್ದೇಶ ಮತದಾರರ ಪಟ್ಟಿಯಿಂದ ಹೊರಗೆಉಳಿದ ಪ್ರಜೆಗಳನ್ನ ಪಟ್ಟಿಗೆ ಸೇರಿಸುವ ಕಾರ್ಯಕ್ರಮ ವಾಗಿತ್ತು ಅಂದರೆ ಹೆಚ್ಚು ಹೆಚ್ಚು ಮತದಾರರನ್ನು ಪಟ್ಟಿಗೆ ಸೇರಿಸುವ ಉದ್ದೇಶವೂ ಆಗಿತ್ತು ಆದರೆ ಈಗ ನಡೆಯುವ ಎಸ್ ಐ ಆರ್ ಹಾಗಿಲ್ಲ ಮತದಾರರ ಪಟ್ಟಿಯಿಂದ ಹೊರಗಿಟ್ಟು ಮತಗಳನ್ನು ಕಡಿಮೆ ಮಾಡಿ ಚುನಾವಣೆ ಗೆಲ್ಲುವ ತಂತ್ರವಾಗಿದೆ.
ಇದನ್ನೂ ಓದಿದ್ದೀರಾ?ವೈದ್ಯಲೋಕಕ್ಕೆ ತರೀಕೆರೆಯಲ್ಲಿ ಮುಸ್ಲಿಂ ಯುವತಿಯರ ಸಾಧನೆ
ಪಶ್ಚಿಮ ಬಂಗಾಳದಲ್ಲಿ ಯಾರು ಎಸ್ ಐ ಆರ್ ಮುಖ್ಯಸ್ಥನಾಗಿದ್ದರೋ ಅವರನ್ನೇ ಮುಖ್ಯಮಂತ್ರಿ ಸಲಹೆಗಾರರನ್ನಾಗಿ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ ಎಂದು ಆರೋಪಿಸಿದ್ದಾರೆ




