ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಬೈಕ್ ಕಳ್ಳತನ ನಡೆದಿದೆ.
ಖಾಸಗಿ ಕಂಪನಿಯ ಉದ್ಯೋಗಿಯಾದ ಇಸ್ಮಾಯಿಲ್ ಕೆಲಸ ಮುಗಿಸಿ ಕಂಪನಿ ನೀಡಿದ್ದ ಬೈಕನ್ನು ರಾತ್ರಿ ತಮ್ಮ ಮನೆ ಮುಂದೆ ನಿಲ್ಲಿಸಿದ್ದರು. ತಡರಾತ್ರಿ ಬಂದ ಖದೀಮರು ಬಹಳ ಚಾಲಾಕಿತನದಿಂದ ಇಸ್ಮಾಯಿಲ್ ಅವರ ಬೈಕನ್ನು ಕಳ್ಳತನ ಮಾಡಿದ್ದಾರೆ. ಕಳ್ಳರು ತಾವು ಬಂದಿದ್ದ ಹಳೆಯ ಬೈಕನ್ನು ಇಸ್ಮಾಯಿಲ್ ಮನೆಯ ಮುಂದೆಯೇ ಬಿಟ್ಟು, ಬದಲಿಗೆ ಇವರ ಬೈಕನ್ನು ಹೊತ್ತೊಯ್ದು ‘ಎಕ್ಸ್‌ಚೇಂಜ್’ ಮಾಡಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹಾವು ಕಚ್ಚಿ ಕಾರ್ಮಿಕ ಮಹಿಳೆ ಸಾವು
ಈ ಕಳ್ಳತನದ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಳಿಸುತ್ತಿದ್ದಾರೆ.




