ಚಿಕ್ಕಮಗಳೂರು | ಜ್ಞಾನೇಶ್ ಕುಮಾರ್ ವಜಾಗೊಳಿಸಿ-SIR ರದ್ದುಗೊಳಿಸಿ; ಕೆ.ಎಲ್ ಅಶೋಕ್ 

Date:

ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ SIR ವಿರೋಧಿ ಒಕ್ಕೂಟ ಮುಖಂಡರಾದ ಕೆ. ಎಲ್ ಅಶೋಕ್ ಮಾತನಾಡಿ, “ಚುನಾವಣಾ ಆಯೋಗ ಮಾಡುತ್ತಾ ಬಂದ ಅಕ್ರಮಗಳ ಪಾಪದ ಕೊಡ ತುಂಬಿದೆ. ಆಯೋಗದ ಒಳಗಡೆಯೇ ಇದ್ದ ಬೇಗುದಿ ಬಹಿರಂಗಗೊಂಡಿದೆ. ನಾಗರೀಕ ಸಮಾಜ ಮಾಡುತ್ತಿದ್ದ ಆಗ್ರಹಗಳು ಸತ್ಯ ಎಂಬುದು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತಾಗಿವೆ. ಇಡೀ ದೇಶ ಜ್ಞಾನೇಶ್ ಕುಮಾರ್ ರಾಜಿನಾಮೆಗಾಗಿ ಕೇಳುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿನೋಡಿಕೊಂಡ ಎಂಬಂತೆ ಬಿಜೆಪಿ ಪಟಾಲಂ ನಾಚಿಕೆ ಇಲ್ಲದಂತೆ ಜ್ಞಾನೇಶ್ ಕುಮಾರ್ ಸಮರ್ಥನೆಗೆ ನಿಂತಿದೆ ಎಂದು ತಿಳಿಸಿದರು. 

- Advertisement -

ಮೊಟ್ಟ ಮೊದಲಿಗೆ ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದ ಎಂಬ ಸತ್ಯಾಂಸವನ್ನು ನಿರ್ಭೀಡೆಯಾಗಿ ಜಗತ್ತಿನ ಮುಂದೆ ತಂದ ಪತ್ರಕರ್ತೆ 1.ರವರಿಗೂ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೂ ಖಪಖ ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ ಧನ್ಯವಾದಗಳನ್ನು ಹಾಗೂ ಅಭಿನಂದನೆಗಳನ್ನು ತಿಳಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಮಹತ್ವದ ಸಂಸ್ಥೆಯಾದ ಚುನಾವಣಾ ಆಯೋಗದ ಘನತೆಯನ್ನು ಜ್ಞಾನೇಶ್ ಕುಮಾರ್ ಧ್ವಂಸಗೊಳಿಸಿದ್ದಾರೆ. ದೇಶದ ಎಲ್ಲಾ ವಿರೋಧ ಪಕ್ಷಗಳು ಹಾಗೂ ನಾಗರೀಕ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಯಾರ ಮಾತಿಗೂ ಬೆಲೆ ನೀಡದೆ ಸರ್ವಾಧಿಕಾರಿ ರೀತಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಈ ದೇಶದ ಮೇಲೆ SIR ಎಂಬ ಹಿಂದೆಂದೂ ಕಾಣದ ಮತ ಪರಿಷ್ಕರಣೆಯ ಪ್ರಕ್ರಿಯೆಯನ್ನು ಈ ದೇಶದ ಮೇಲೆ ಹೇರಿತು ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಇದರಿಂದಾಗಿ ಕೋಟ್ಯಾಂತರ ಅರ್ಹ ಮತದಾರರು, ವಿಶೇಷವಾಗಿ ಶೋಷಿತ ಸಮುದಾಯಗಳ ಜನರು ಮತಪಟ್ಟಿಯಿಂದ ಹೊರದಬ್ಬಲ್ಪಡತೊಡಗಿದರು. ಈ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳನ್ನು ಎಸಗಲಾಯಿತು. ಈಗ ಬಯಲಾಗಿರುವ ಸತ್ಯವೆಂದರೆ ಚುನಾವಣಾ ಆಯೋಗ ಅಕ್ರಮ ಪದ್ಧತಿಯನ್ನು ಅಕ್ರಮ ರೀತಿಯಲ್ಲಿ ಜಾರಿಗೊಳಿಸುವುದು ಮಾತ್ರವಲ್ಲ. ಇದರ ತೀರ್ಮಾನಗಳನ್ನು ಸಹ ಅಕ್ರಮವಾಗಿ ತೆಗೆದುಕೊಳ್ಳಲಾಗಿದೆ. ಚುನಾವಣಾ ಆಯೋಗದಲ್ಲಿ ಮೂವರೂ ಆಯುಕ್ತರು ಸಮಾನರು. ಅದು ಸರ್ವಸಮ್ಮತಿಯ ಮೇಲೆ ಕಾರ್ಯನಿರ್ವಹಿಸಬೇಕು. ವಿಶೇಷ ಸಂದರ್ಭದಲ್ಲಿ ಮಾತ್ರ ಬಹುಸಂಖ್ಯಾತ ಅಭಿಪ್ರಾಯದ ಮೇಲೆ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಡೆದಿರುವುದು ಆಯೋಗದ ಒಳಗಡೆ ಸರ್ವಸಮ್ಮತಿ ಇಲ್ಲವೇ ಇಲ್ಲ. ಮಾತ್ರವಲ್ಲ ಬಹುಸಂಖ್ಯಾತರ ಅಭಿಪ್ರಾಯವನ್ನೂ ತಳ್ಳಿ ಹಾಕಿ, ಏಕ ವ್ಯಕ್ತಿ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಜ್ಞಾನೇಶ್ ಕುಮಾರ್ ಗೆ ಇಂತಹ ಧೈರ್ಯ ಎಲ್ಲಿಂದ ಬರಲು ಸಾಧ್ಯ? ತನ್ನನ್ನು ಆಯ್ಕೆ ಮಾಡಿರುವ ಮೋದಿ ಶಾ ನನ್ನ ಬೆನ್ನಿಗೆ ಇದ್ದಾರೆ ಮತ್ತು ನನ್ನ ಮೇಲೆ ಯಾವ ಕಾನೂನು ಕ್ರಮ ಜರುಗಿಸಲೂ ಅವಕಾಶ ಇಲ್ಲದಂತೆ ಕಾನೂನುಗಳನ್ನೂ ತಿದ್ದುಪಡಿ ಮಾಡಿದ್ದಾರೆ ಎಂಬ ಧೈರ್ಯವೇ ಅವರಿಂದ ಈ ದುಸ್ಸಾಹಸವನ್ನು ಮಾಡಿಸಿದೆ. ಚುನಾವಣಾ ಆಯೋಗ ಮಾಡಿರುವುದು ದೇಶದ್ರೋಹದ ಕೇಲಸ. ಈ ದೇಶದ್ರೋಹದ ಷಡ್ಯಂತ್ರವನ್ನು ಹೆಣೆದಿರುವ ಅಪರಾಧಿಗಳೆಂದರೆ ಮೋದಿ అమికా ಜ್ಞಾನೇಶ್ ಕುಮಾರ್ ವಾಸ್ತವದಲ್ಲಿ ಇವರೇ ನಿಜವಾದ ಚುನಾವಣಾ ಆಯೋಗದ ರೀತಿ ಕೆಲಸ ಮಾಡಿದ್ದಾರೆ. ಅರ್ಥಾತ್ ಈ ದೇಶದಲ್ಲಿ ಪ್ರಜಾತಂತ್ರ ಉಳಿದಿಲ್ಲ. ಸರ್ವಾಧಿಕಾರ ಸಾಬೀತಾಗಿದೆ ಎಂದು SIR ವಿರೋಧಿ ಒಕ್ಕೂಟ ತಿಳಿಸಿದರು. 

ಪ್ರಜಾತಂತ್ರ ವ್ಯವಸ್ಥೆಯ ಈ ಅವನತಿಗೆ ಮೋದಿ ಶಾ ಗಳೇ ಪ್ರಧಾನ ಹೊಣೆಗಾರರಾಗಿದ್ದಾರೆ. ಅವರುಗಳೇ ದೇಶದ ಮುಂದೆ ಕ್ಷಮೆ ಕೋರಿ ತಮ್ಮ ಕೂಸಾದ ಜ್ಞಾನೇಶ್ ಕುಮಾರ್ ಅನ್ನು ವಜಾಗೊಳಿಸಬೇಕು ಹಾಗೂ ತಮ್ಮ ಅಕ್ರಮ ಯೋಜನೆಯಾದ SIR ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ರಾಜಕೀಯ ಪಕ್ಷಗಳು ತೋರಿಕೆಯ ಪ್ರತಿಭಟನೆಗೆ ಸೀಮಿತವಾಗದೆ ಧೃಡ ನಿಲುವನ್ನು ತಾಳಬೇಕಿದೆ. ಬೀದಿ ಹೋರಾಟಕ್ಕೆ ಇಳಿಯಬೇಕಿದೆ. ಮತದಾರರ ಪಟ್ಟಿ ಸರಿಯಾಗುವ ತನಕ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ. 1 ಈ ತಿಂಗಳ 30 ರೊಳಗೆ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡದಿದ್ದರೆ ಮತ್ತು SIR ಅನ್ನು ಸ್ಥಗಿತಗೊಳಿಸದಿದ್ದರೆ ಅಕ್ಟೋಬರ್ ರಿಂದ ಸಹ ಮನಸ್ಕರ ಜೊತೆಗೂಡಿ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಾರಂಭಿಸುತ್ತೇವೆಂದು ಅಗ್ರಹಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸೆ. 26ರಂದು ‘ವಂದೇ ಮಾತರಂ’ ಪಾದಯಾತ್ರೆ

ವಿಶೇಷ ಸೂಚನೆ : ಬಹು ಬಹಷ ನಟ ಶ್ರೀ ಪ್ರಕಾಶ್‌ರವರ ನೇತೃತ್ವದಲ್ಲಿ ಎಸ್.ಐ.ಆರ್ ವಿರೋಧಿ ಜಾಥಾ, ಚಿಕ್ಕಮಗಳೂರು ನಗರದ, ಪ್ರೆಸ್‌ಕ್ಲಬ್ ಪಕ್ಕದಲ್ಲಿರುವ ಡಾ.ಫಿಲೋಮಿನಾ ಆಡಿಟೋರಿಯಂಗೆ ದಿನಾಂಕ : 27/09/2026ರ 3:00 ಗಂಟೆಗೆ ಬಂದು ಸಭೆ ನಡೆಸಲಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿಗಳು ರೈತರ ಆದಾಯ ಡಬಲ್ ಮಾಡಲಿಲ್ಲ; ಯುದ್ಧ ನಡೆಯುತ್ತಿದ್ದಾಗಲೂ ರೈತರು ವಿಶ್ರಾಂತಿ ಪಡೆಯಲಿಲ್ಲ-ಸಿಎಂ

ಪ್ರಧಾನಿ ದೇಶವನ್ನು, ಮುಖ್ಯಮಂತ್ರಿ ರಾಜ್ಯವನ್ನು ಹಾಗೂ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದರೆ, ರೈತ...

ರಾಯಚೂರು | ಬರಗಾಲ ಪರಿಹಾರಕ್ಕೆ ಆಗ್ರಹ: ಸೆ.28ರಂದು ಡಿಸಿ ಕಚೇರಿ ಮುಂದೆ ರೈತರ ಪ್ರತಿಭಟನೆ

ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲವನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು...

ಸಿಇಸಿ ಗ್ಯಾನೇಶ್ ಕುಮಾರ್ ವಜಾಗೆ ಪಟ್ಟು; ಸೆ.26ರಿಂದ ದೇಶಾದ್ಯಂತ ಪ್ರತಿಭಟನೆಗೆ ಎಡಪಕ್ಷಗಳು, SIR ವಿರೋಧಿ ಒಕ್ಕೂಟ ಕರೆ

ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತ್ರೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ...

ಹುಬ್ಬಳ್ಳಿ | ವೇಗದ ಬೈಕ್ ಚಾಲನೆ ಪ್ರಶ್ನಿಸಿದ್ದಕ್ಕೆ ರಾಡ್‌ನಿಂದ ಹಲ್ಲೆ; 7 ಮಂದಿ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ ನವನಗರದ ನಂದೀಶ್ವರ ನಗರದಲ್ಲಿ ಮನೆ ಎದುರಿನ ರಸ್ತೆಯಲ್ಲಿ ಬೈಕ್‌ನ್ನು ವೇಗವಾಗಿ...