ಕರ್ನಾಟಕ ರಾಜ್ಯದಲ್ಲಿ ಮದ್ಯ ನಿಷೇಧದ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಬಡವರಿಗೆ ಸಿಗುತ್ತಿದ್ದ ಸಾರಾಯಿ ಬಂದ್ ಮಾಡಿ ದುಬಾರಿ ಬೆಲೆ ತೆತ್ತು ಕುಡಿಯುವಂತೆ ಮಾಡಿದ್ದು, ಖಾಸಗಿ ಮದ್ಯ ತಯಾರಿಕಾ ಕಂಪನಿಗಳು ಮತ್ತು ಮಾರಾಟಗಾರರಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಆರೋಪ ಮಾಡಿದ್ದಾರೆ.
ಎಲ್ಲ ರೀತಿಯ ಬ್ರಾಂಡಿ, ವಿಸ್ಕೀ, ಬಿಯರ್, ರಮ್ ಇತ್ಯಾದಿ ಮದ್ಯಗಳ ಬೆಲೆ ಹೆಚ್ಚಳ ಮಾಡಿ ಬಡವರ, ಕೂಲಿ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಸರ್ಕಾರದ ಎಲ್ಲ ರೀತಿಯ ಆರ್ಥಿಕ ಸಂಕಷ್ಟಕ್ಕೆ ಪಾನಪ್ರಿಯರ ಮೇಲೆ ತೆರಿಗೆ ಹಾಕಿ ಸರ್ಕಾರಕ್ಕೆ ಆದಾಯ ಹೆಚ್ಚು ಮಾಡಿಕೊಳ್ಳುವ ಪರಿಪಾಠ ನಿಲ್ಲಬೇಕು. ದುಡಿಮೆಯ ಮುಕ್ಕಾಲು ಪಾಲು ಹಣ ಕುಡಿಯಲು ಖರ್ಚು ಮಾಡಿ, ಕುಟುಂಬ ಸಾಕುವುದು ದುಸ್ತರವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರತಿ ಬಾಟಲಿ ಮದ್ಯದ ಮೇಲೆ ಶೇ. 65ರಷ್ಟು ದುಬಾರಿಯಾಗಿದೆ. ಸರ್ಕಾರಕ್ಕೆ ಬದ್ಧತೆ ಇದ್ದರೆ ಸಂಪೂರ್ಣ ಮದ್ಯ ತಯಾರಿಕೆ ಮತ್ತು ಮಾರಾಟ ಬಂದ್ ಮಾಡಲಿ. ಇಲ್ಲವೇ ನೀರ ಮತ್ತು ಸಾರಾಯಿ ಜಾರಿಗೆ ತರಲಿ” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರತಿ ಬಾಟಲಿ ಮದ್ಯದ ಮೇಲೆ ಶೇ. 65ರಷ್ಟು ದುಬಾರಿಯಾ
“ಒಂದು ಕಡೆ ಮದ್ಯದ ದರ ಹೆಚ್ಚಿಸಿ, ಮತ್ತೊಂದು ಕಡೆ ಬಡವರಿಗೆ ಗ್ಯಾರಂಟಿ ಕೊಡುವುದಾದರೆ ನಮ್ಮ ಮಹಿಳೆಯರ ಸೌಭಾಗ್ಯಕ್ಕೆ ಯಾವ ಗ್ಯಾರಂಟಿ ಕೊಡುತ್ತೀರಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕಟಣೆಗೆ ತಿಳಿಸಿದ್ದಾರೆ.