ಆರ್‌ಸಿಎಚ್‌ ಪೋರ್ಟಲ್‌ ಡೀಲಿಂಕ್ ಮಾಡಿ, ಪ್ರೋತ್ಸಾಹ ಧನ ಹೆಚ್ಚಿಸಿ: ಆಶಾ ವರ್ಕರ್ಸ್ ಬೃಹತ್ ಧರಣಿ

Date:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಆಶಾ ಕಾರ್ಯಕರ್ತೆಯರ ಮುಖಂಡರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ

- Advertisement -

“ದುಡಿತಕ್ಕೆ ಸರಿಯಾಗಿ ಪ್ರೋತ್ಸಾಹ ಧನ ಸಿಗದೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟಲು ತಕ್ಷಣವೇ ಆಶಾ ಪೇಮೆಂಟ್ ಪ್ರಕ್ರಿಯೆಯಿಂದ ಆರ್‌ಸಿಎಚ್‌ ಪೋರ್ಟಲ್ ಡೀಲಿಂಕ್ ಮಾಡಬೇಕು; ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ಒಟ್ಟು 15,000 ರೂ. ಪ್ರೋತ್ಸಾಹ ಧನ ನೀಡಬೇಕು” ಎಂಬ ಆಗ್ರಹಗಳೊಂದಿಗೆ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ’ವಿಧಾನಸೌಧ ಚಲೋ’ ಎರಡನೇ ದಿನದಲ್ಲೂ ಮುಂದುವರಿಯಿತು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಕೈಗೊಳ್ಳಲಾಗಿದೆ.

ಫ್ರೀಡಂ ಪಾರ್ಕಿನಾದ್ಯಂತ ಗುಲಾಬಿ ಬಣ್ಣವನ್ನೇ ಚೆಲ್ಲಿದಂತೆ ಆಶಾ ಕಾರ್ಯಕರ್ತೆಯರು ಕೂತಿದ್ದರು. ಮಂಗಳವಾರ ಸಂಜೆ ಸ್ಥಳಕ್ಕೆ ಧಾವಿಸಿದ್ದ ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಅವರ ತಂಡವು ಯಾವುದೇ ಖಚಿತ ಭರವಸೆಯನ್ನು ನೀಡದಿರುವುದು ದುಡಿಯುವ ವರ್ಗದ ಮಹಿಳೆಯರನ್ನು ಚಿಂತನೆ ಈಡು ಮಾಡಿತ್ತು.

‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಹಲವು ಆಶಾ ಕಾರ್ಯಕರ್ತೆಯರು ತಾವು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಹಂಚಿಕೊಂಡಿದ್ದಾರೆ.

ಶಿವಮೊಗ್ಗ ಆಶಾಕಾರ್ಯಕರ್ತೆ ಪಾರ್ವತಿ ಮಾತನಾಡಿ, “ಆರ್‌ಸಿಎಚ್‌ ಪೋರ್ಟಲ್ ನಮಗೆ ಬೇಡ. ಅದು ಸರಿಯಾಗಿ ವರ್ಕ್ ಆಗ್ತಾ ಇಲ್ಲ. ನಾವು ಮಾಡುವ ಕೆಲಸಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ” ಎಂದು ತಿಳಿಸಿದರು.

Parvathi

“ಪ್ರತಿ ತಿಂಗಳು ಒಮ್ಮೆ ಸಭೆ ಮಾಡುತ್ತಾರೆ. ನಾವು ಮಾಡುವ ಸುಮಾರು 35 ಕೆಲಸಗಳ ರಿಪೋರ್ಟ್ ಬರೆದು ಕೊಡುತ್ತೇವೆ. ಅದನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡುತ್ತಿಲ್ಲ. ಅಲ್ಲಿ ದಾಖಲಾಗದೆ ನಮಗೆ ಪ್ರೋತ್ಸಾಹ ಧನ ಸಿಗುವುದಿಲ್ಲ. ಹೀಗಾಗಿ ಆರ್‌ಸಿಎಚ್ ಪೋರ್ಟಲ್ ಬೇಡವೇ ಬೇಡ” ಎಂದು ಆಗ್ರಹಿಸಿದರು.

ವಿಜಯಪುರದ ಆಶಾ ವರ್ಕರ್‌ ಭಾರತಿ ಮ್ಯಾಗೇರಿ ಮಾತನಾಡಿ, “ನಾಲ್ಕು ತಾಸು ಮಾತ್ರ ಕೆಲಸ ಮಾಡಿ ಎಂದು ನಮ್ಮನ್ನು ನೇಮಿಸಿಕೊಂಡಿದ್ದರು. ಆದರೀಗ ದಿನ 24 ಗಂಟೆಯೂ ಒಂದಲ್ಲ ಒಂದು ರೀತಿ ಕೆಲಸ ಮಾಡುತ್ತಿದ್ದೇವೆ. ಆದರೂ ನಮಗೆ ಸರಿಯಾದ ವೇತನ ಸಿಗುತ್ತಿಲ್ಲ. ಕೂಲಿ ಮಾಡುವ ಹೆಂಗಸರಿಗೆ ದಿನಕ್ಕೆ ಐದು ನೂರು ರೂಪಾಯಿ ಪೇಮೆಂಟ್ ದೊರಕುತ್ತದೆ. ಹಗಲು ರಾತ್ರಿ ತಾಯಿ- ಮಕ್ಕಳ ಪೋಷಣೆ ಮಾಡುವ ನಮ್ಮ ಸ್ಥಿತಿ ಶೋಚನೀಯ. ಆಶಾ ಕಾರ್ಯಕರ್ತೆಯರನ್ನು ಆಸ್ಪತ್ರೆಗಳಲ್ಲೂ ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

Bharati

ವಿಜಯಪುರದ ಆಶಾ ವರ್ಕರ್‌ ವೇದಾ ಕುಚಬಾಳ ಮಾತನಾಡಿ, “ನಮಗೆ ರಜೆ ಎಂಬುದೇ ಇಲ್ಲ. ಯಾವುದಾದರೂ ಆರೋಗ್ಯ ಸಮಸ್ಯೆ ಎದುರಾಗಿ ಒಂದು ತಿಂಗಳು ರಜೆ ತಗೊಂಡರೂ ಪೇಮೆಂಟ್ ಕಟ್ ಮಾಡುತ್ತಾರೆ. ಇಲ್ಲವಾದರೆ ಕೆಲಸದಿಂದಲೇ ತೆಗೆದು ಹಾಕುತ್ತಾರೆ” ಎಂದು ವಿವರಿಸಿದರು.

veda kuchabala 22

ಮಂಡ್ಯದ ಆಶಾ ಕಾರ್ಯಕರ್ತೆ ಸವಿತಾ ಮಾತನಾಡಿ, “ಹದಿಮೂರು ವರ್ಷದ ಹಿಂದೆ ನಿಗದಿ ಮಾಡಿರುವ ಪ್ರೋತ್ಸಾಹ ಧನವನ್ನೇ ಇಂದಿಗೂ ಕೊಡುತ್ತಿದ್ದಾರೆ. ಬೇರೆಯವರ ವೇತನವೆಲ್ಲ ಹೆಚ್ಚಾಗುತ್ತದೆ. ಆದರೆ ಆಶಾಗಳ ಪ್ರೋತ್ಸಾಹ ಧನ ಇದ್ದಲ್ಲೇ ಇದೆ” ಎಂದು ಹೇಳಿದರು.

savita

ವಿಜಯಪುರದ ರೇಣುಕಾ ಉಪ್ಪಾರ ಮಾತನಾಡಿ, “ಮೊಬೈಲ್‌ನಲ್ಲಿ ವರ್ಕ್‌ಮಾಡಿ ಎನ್ನುತ್ತಿದ್ದಾರೆ. ಇತ್ತೀಚೆಗೆ ಕೆಲಸಕ್ಕೆ ಸೇರಿದ ಆಶಾ ಕಾರ್ಯಕರ್ತೆಯರಲ್ಲಿ ಹತ್ತನೇ ತರಗತಿ, ಪಿಯುಸಿ ಓದಿದವರು ಇದ್ದಾರೆ. ಆದರೆ ಹಲವು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ ಆಶಾಗಳಲ್ಲಿ ಬಹುತೇಕರು ಮೂರನೇ ತರಗತಿ, ಏಳನೇ ತರಗತಿ ಓದಿದವರೇ ಹೆಚ್ಚು. ಅಂಥವರಿಗೆಲ್ಲ ಮೊಬೈಲ್‌ನಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ” ಎಂದು ಸಮಸ್ಯೆಯನ್ನು ಹೇಳಿಕೊಂಡರು.

Renuka Uppara

ಸಿಎಂಗೆ ಮನವಿ ಸಲ್ಲಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಆಶಾ ಕಾರ್ಯಕರ್ತೆಯರ ನಿಯೋಗವು, “ನಾವು ದುಡಿಯುತ್ತಿರುವ ಹಣವನ್ನಷ್ಟೇ ಕೇಳುತ್ತಿದ್ದೇವೆ, ಪೋರ್ಟಲ್‌ನಿಂದಾಗಿ ಸಮಸ್ಯೆ ಬಿಗಡಾಯಿಸಿದೆ. ಅದನ್ನು ಸರಿಪಡಿಸಿ” ಎಂದಿದ್ದಾರೆ. “ಹೋರಾಟವನ್ನು ಕೈಬಿಡಬೇಕು” ಎಂದು ಸಿಎಂ ಕೋರಿದ್ದಾರೆ.

cm 6
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶಾ ಹೋರಾಟಗಾರ್ತಿಯರು ಮನವಿ ಸಲ್ಲಿಸಿದ್ದಾರೆ
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಶಸ್ವಿಯಾಗಿ ನಡೆದ ʼಕೊಂದವರು ಯಾರು?ʼ ಆಂದೋಲನ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣ

ಕೊಂದವರು ಯಾರು? ಆಂದೋಲನ ಆಯೋಜಿಸಿದ್ದ “ನಂಬಿಕೆಯೊಂದಿಗೆ ಸಂವಾದ: ಅಧಿಕಾರ, ಪಿತೃಪ್ರಧಾನತೆ, ಧರ್ಮ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...