ದಕ್ಷಿಣ ಕನ್ನಡ | ಪಿಎಸಿಎಲ್‌ ಹಣಕಾಸು ಹಗರಣ; ಸಂತ್ರಸ್ತರ ನ್ಯಾಯಕ್ಕೆ ಮನವಿ

Date:

ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್(ಪಿಎಸಿಎಲ್) ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಹಣಕಾಸು ಸಂಸ್ಥೆಯು ದೇಶದ ಹಲವು ಭಾಗಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಹೂಡಿಕೆದಾರರಿಗೆ ಮೋಸ ಮಾಡಿರುವುದನ್ನು ಖಂಡಿಸಿ ನ್ಯಾಯ ಒದಗಿಸುವಂತೆ ಪಿಎಸಿಎಲ್‌ ಏಜೆಂಟರ ಹೋರಾಟ ಸಮಿತಿಯ ಉನ್ನತ ಮಟ್ಟದ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

“ಭೂ ವ್ಯವಹಾರದಲ್ಲಿ ಹಣವನ್ನು ವ್ಯಯಿಸಿ ಅದರ ಲಾಭಾಂಶವನ್ನು ಹೂಡಿಕೆದಾರರಿಗೆ ವಿತರಿಸಲಾಗುವುದು, ಹಲವು ಯೋಜನೆಗಳ ಮೂಲಕ ಅವರು ಹೂಡಿದ ಹಣಕ್ಕೆ ಹೆಚ್ಚಿನ ಲಾಭ ನೀಡಲಾಗುವುದೆಂದು ಆಸೆ ತೋರಿಸಿ ದೇಶಾದ್ಯಂತ ಸುಮಾರು ₹49,100 ಕೋಟಿಯಷ್ಟು ಹಗರಣ ನಡೆಸಿದ್ದು, ಸುಮಾರು 1.49 ಮಿಲಿಯನ್ ಹೂಡಿಕೆದಾರರಿಗೆ ಮೋಸಮಾಡಿದ್ದಾರೆ” ಎಂದು ಆರೋಪಿಸಿದರು.

“ಪಿಎಸಿಎಲ್ ಎಂಬ ಮೋಸದ ಹಣಕಾಸು ಸಂಸ್ಥೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಕೋಟಿ ಮೊತ್ತವನ್ನು ಕಳೆದುಕೊಂಡ ಸಂತ್ರಸ್ತ ಹೂಡಿಕೆದಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೊತ್ತವನ್ನು ಮರುಪಾವತಿಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಹೋರಾಟ ಸಮಿತಿಯು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿ ನಾಯಕ, ರೌಡಿ ಶೀಟರ್‌ ಮಣಿಕಂಠ ರಾಠೋಡ್ ಪೊಲೀಸ್‌ ವಶಕ್ಕೆ

ನಿಯೋಗದಲ್ಲಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ದಾಮೋದರ ಉಳ್ಳಾಲ, ಅಧ್ಯಕ್ಷ ತೆಲ್ಮ ಮೊಂತೆರೋ, ಪ್ರಧಾನ ಕಾರ್ಯದರ್ಶಿ ಆಸುಂತಾ ಡಿಸೋಜ, ಇತರ ಮುಖಂಡರುಗಳಾದ ನಾನ್ಸಿ ಫೆರ್ನಾಂಡಿಸ್, ಶ್ಯಾಮಲ, ಶಾಲಿನಿ, ವಾಯಿಲೆಟ್, ಜನಾರ್ಧನ ಪುತ್ತೂರು, ಮೋಲಿ ಡಿಸೋಜ, ಸುನಿತಾ ಬಜಾಲ್ ಸೇರಿದಂತೆ ಬಹುತೇಕರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ; ಚೆಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಚೆಂಬು ಹಿಡಿದುಕೊಂಡು...

ಉಡುಪಿ | ಮತದಾನ ಬಹಿಷ್ಕಾರ ಹಿಂಪಡೆದ ಕಟ್ಟಿಂಗೇರಿ ಮತದಾರರು

ರಸ್ತೆಯ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದ ಮತದಾರರ ಮನವೊಲಿಸುವಲ್ಲಿ ಮಾಜಿ...

ಕಲಬುರಗಿ | ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿತ್ತು: ಮಾಲೀಕಯ್ಯ ಗುತ್ತೇದಾರ

2018ರಲ್ಲಿ ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾದೆ. ಪಕ್ಷದಲ್ಲಿ...

ದಕ್ಷಿಣ ಕನ್ನಡ | ಎನ್‌ಡಿಎ ಹೀನಾಯ ಸೋಲು, ‘ಇಂಡಿಯಾ’ ಒಕ್ಕೂಟಕ್ಕೆ ಬಹುಮತ ಖಚಿತ: ಎಂ ವೀರಪ್ಪ ಮೊಯಿಲಿ

ಬೆಲೆ ಏರಿಕೆ, ಆರ್ಥಿಕ ಅಸಮಾನತೆ ನಿರುದ್ಯೋಗದಿಂದ ಕೇಂದ್ರ ಸರ್ಕಾರದ ವಿರುದ್ಧ ಜನರ...